Thursday, 12th December 2024

ಬಡ್ಡೀಸ್‌ನಲ್ಲಿ ಲೀಡರ್‌ ಆದ ಕಿರಣ್‌ ರಾಜ್‌

ಕಿರುತೆರೆಯ ಧಾರಾವಾಹಿಗಳಲ್ಲಿ ನಟಿಸಿ ಪ್ರಸಿದ್ಧಿ ಪಡೆದಿರುವ ಕಿರಣ್ ರಾಜ್ ಈಗ ಬೆಳ್ಳಿತೆರೆಯಲ್ಲಿ ಮಿಂಚಲು ಸಿದ್ಧವಾಗಿದ್ದಾರೆ. ಈ ಬಾರಿ ಬಡ್ಡೀಸ್ ಸಿನಿಮಾದಲ್ಲಿ ಸ್ನೇಹಿತರ ಜತೆಗೆ ಲೀಡರ್ ಆಗಿ ತೆರೆಗೆ ಬಂದಿದ್ದಾರೆ. ಚಿತ್ರದ ಶೀರ್ಷಿಕೆ ಕೇಳಿದಾಕ್ಷಣ ಇದು ಸ್ನೇಹದ ಮಹತ್ವ ಸಾರುವ ಕಥೆ ಎಂಬುದು ಮನದಟ್ಟಾಗುತ್ತದೆ. ಅಂತೆಯೇ ಇಲ್ಲಿ ಸ್ನೇಹಾನುಬಂಧದ ಕಥೆ ಇದೆ.

ಕಾಲೇಜಿನಲ್ಲಿ ಹುಡುಗಾಟದ ಜತೆಗೆ ಹಾಸ್ಯಮಯವಾಗಿ ಸಾಗುವ ಕಥೆಯಲ್ಲಿ ಇದ್ದ ಕ್ಕಿದಂತೆ ತಿರುವು ಪಡೆದುಕೊಳ್ಳುತ್ತದೆ. ಅಷ್ಟಕ್ಕೂ ಮುಂದೆ ಏನಾಯಿತು. ಕಥೆಗೆ ತಿರುವು ಪಡೆದು ಕೊಳ್ಳಲು ಕಾರಣ ಏನು ಎಂಬುದನ್ನು ಚಿತ್ರದಲ್ಲಿ ನೋಡಿಯೇ ತಿಳಿಯಬೇಕಂತೆ.

ಫ್ರೆಂಡ್‌ಶಿಪ್ ಕಥೆಯನ್ನು ಹೊತ್ತ ಹಲವು ಚಿತ್ರಗಳು ಈ ಹಿಂದೆಯೇ ತೆರೆಗೆ ಬಂದಿವೆ. ಆದರೆ ಆ ಎಲ್ಲಾ ಕಥೆಗಳಿಗಿಂತ ಬಡ್ಡೀಸ್ ವಿಶೇಷವಾಗಿದೆ ಎನ್ನುತ್ತಾರೆ ನಿರ್ದೇಶಕ ಗುರುತೇಜ್ ಶೆಟ್ಟಿ. ಕಾಲೇಜು ಅಂದಮೇಲೆ ಹುಡುಗಾಟಿಕೆ, ಪ್ರೀತಿ ಇವೆಲ್ಲವೂ ಇರುತ್ತವೆ.

ಅದರ ಜತೆಗೆ ಮನಸೆಳೆಯುವ ಸೆಂಟಿಮೆಂಟ್ ಸ್ಟೋರಿಯೂ ಇದೆ. ತಾಯಿ ಮಗನ ಬಾಂಧವ್ಯದ ಕಥೆಯೂ ಸಿನಿಮಾದಲ್ಲಿದೆ. ಚಿತ್ರ ನೋಡುತ್ತಿದ್ದರೆ ಕಾಲೇಜಿನಲ್ಲಿ ನಾವು ಕಳೆದ ದಿನಗಳು ನೆನಪಿಗೆ ಬರುತ್ತವೆ ಎನ್ನುತ್ತಾರೆ ನಿರ್ದೇಶಕರು.

ಉತ್ತರದಲ್ಲಿ ಉತ್ತಮ ಪ್ರತಿಕ್ರಿಯೆ

ಬಡ್ಡೀಸ್ ಚಿತ್ರದ ತಂಡ ಬಿಡುಗಡೆಗೂ ಮೊದಲೇ ಉತ್ತರ ಕರ್ನಾಟಕದಲ್ಲಿ ಪ್ರವಾಸ ಹಮ್ಮಿಕೊಂಡಿತ್ತು. ಈ ಸಂದರ್ಭ ಅಲ್ಲಿನ ಮಂದಿ ಚಿತ್ರತಂಡಕ್ಕೆ ಪ್ರೀತಿಯ ಸ್ವಾಗತ ಕೋರಿದರು. ಅಲ್ಲದೆ ಚಿತ್ರದ ಹಾಡು ಹಾಡಿ ಚಿತ್ರತಂಡಕ್ಕೆ ಹೊಸ ಹುರುಪು ತುಂಬಿ ದರು. ಉತ್ತರ ಕರ್ನಾಟಕದಲ್ಲಿ ಮಾತ್ರವಲ್ಲದೆ ರಾಜ್ಯಾ ದ್ಯಂತ ಸಿನಿಮಾದ ಟ್ರೇಲರ್‌ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈಗಾಗಲೇ ಟ್ರೇಲರ್ ಒಂದು ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಕಂಡಿದೆ. ಚಿತ್ರವನ್ನು ಕಣ್ತುಂಬಿ ಕೊಳ್ಳಲು ಸಿನಿಪ್ರಿಯರು ಕೂಡ ಕಾದು ಕುಳಿತ್ತಿದ್ದಾರೆ. ರಿಯಲ್ ಆಕ್ಷನ್ ಚಿತ್ರದಲ್ಲಿ ಸಾಹಸಕ್ಕೂ ಹೆಚ್ಚು ಒತ್ತು ನೀಡಲಾಗಿದೆ.

ಈ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಸಾಹಸ ದೃಶ್ಯವೊಂದಿದ್ದು, ಈ ಸನ್ನಿವೇಶವನ್ನು ಯಾವುದೆ ಡ್ಯೂಪ್ ಬಳಸದೆ ನೈಜವಾಗಿ ಚಿತ್ರೀಕರಿಸ ಲಾಗಿದೆ. ಈ ದೃಶ್ಯಕ್ಕಾಗಿ ತರಬೇತಿ ಪಡೆದ ಕಿರಣ್ ಅದ್ಭುತವಾಗಿ ನಟಿಸಿದ್ದಾರೆ. ಇನ್ನು ಲೈವ್ ಲೊಕೇಷನ್‌ನಲ್ಲಿ ಸಿಂಗಲ್ ಟೇಕ್ ಸಾಂಗ್ ಅನ್ನು ಸೆರೆಹಿಡಿರುವುದು ಚಿತ್ರದ ವಿಶೇಷ. ಕಿರಣ್ ಜತೆಗೆ ನಾಯಕಿಯಾಗಿ ಸಿರಿ ಪ್ರಹ್ಲಾದ್ ಕಾಣಿಸಿಕೊಂಡಿದ್ದಾರೆ.

ಗೋಪಾಲ್ ದೇಶಪಾಂಡೆ ಇದೇ ಮೊದಲ ಬಾರಿಗೆ ಖಳನಾಗಿ ನಟಿಸಿದ್ದಾರೆ. ಅರವಿಂದ್ ಬೋಲಾರ್ ಉಪನ್ಯಾಸಕರಾಗಿ ಕಾಣಿಸಿ ಕೊಂಡಿದ್ದಾರೆ. ಜ್ಯೂಡಿ ಸ್ಯಾಂಡಿ ಸಂಗೀತದಲ್ಲಿ ಚಿತ್ರದ ಹಾಡುಗಳ ಮಧುರವಾಗಿ ಮೂಡಿಬಂದಿವೆ. ಭಾರತಿ ಶೆಟ್ಟಿ ಪ್ರೊಡಕ್ಷನ್‌ನಲ್ಲಿ ಚಿತ್ರ ನಿರ್ಮಾಣವಾಗಿದ್ದು, ಭಾರತಿ ಶೆಟ್ಟಿ ಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ.

***

ಯೂನಿವರ್ಸಲ್ ಕಥೆಯನ್ನು ತೆರೆಯಲ್ಲಿ ಕಟ್ಟಿಕೊಡಬೇಕು ಎಂಬ ಆಸೆ ನನ್ನಲ್ಲಿತ್ತು. ಅಂತೆಯೇ ಈ ಚಿತ್ರದ ಕಥೆ ಹೊಳೆಯಿತು. ಎಲ್ಲರಿಗೂ ಎಲ್ಲಾ ಕಾಲಕ್ಕೂ ಹೊಂದಾಣಿಕೆ ಯಾಗುವ ಕಥೆ ಇದು. ಚಿತ್ರದಲ್ಲಿ ಹೊಸತನವಿದೆ. ಎಲ್ಲರಿಗೂ ಹಿಡಿಸುವ ಸ್ಟೋರಿ ಇದೆ. ಚಿತ್ರದ ಟ್ರೇಲರ್ ಹಾಗೂ ಹಾಡುಗಳಿಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಹಾಗಾಗಿ ಸಿನಿಮಾ ಗೆಲ್ಲುತ್ತದೆ ಎಂಬ ನಂಬಿಕೆ ನನಗಿದೆ.
-ಗುರುತೇಜ್ ಶೆಟ್ಟಿ ನಿರ್ದೇಶಕ