Thursday, 12th December 2024

ವಸಿಷ್ಠನ ಜತೆಯಾದ ಸಮೀಕ್ಷಾ

ವಸಿಷ್ಠ ಸಿಂಹ ನಾಯಕನಾಗಿ ನಟಿಸುತ್ತಿರುವ ಲವ್ ಲಿ ಚಿತ್ರದ ಮುಹೂರ್ತ ಇತ್ತೀಚೆಗಷೇ ನೆರವೇರಿತ್ತು. ಈ ಚಿತ್ರದಲ್ಲಿ ನಾಯಕಿ ಯಾಗಿ ಯಾರು ನಟಿಸ ಬಹುದು ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಈಗ ಅದಕ್ಕೆ ಚಿತ್ರತಂಡ ತೆರೆ ಎಳೆದಿದೆ.

ಮಲೆನಾಡ ಬೆಡಗಿ ಸಮೀಕ್ಷಾ ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಗಣೇಶ್ ಹಾಗೂ ಭಾವನಾ ನಟನೆಯ ೯೯, ಫ್ಯಾನ್, ಜೇಮ್ಸ್ ಸಿನಿಮಾದಲ್ಲಿ ಅಭಿನಯಿಸಿದ್ದ ಸಮೀಕ್ಷಾ ಈಗ ಲವ್ ಲಿ ಮೂಡ್‌ಗೆ ಜಾರಿದ್ದಾರೆ. ಲವ್ ಲಿ ರೋಮ್ಯಾಂಟಿಕ್, ಲವ್ ಸ್ಟೋರಿಯ ಸಿನಿಮಾವಾಗಿದ್ದು, ಚೇತನ್ ಕೇಶವ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಎಂ.ಆರ್.ರವೀಂದ್ರ ಕುಮಾರ್ ಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ. ಅನೂಪ್ ಸೀಳಿನ್ ಸಂಗೀತ, ಅಶ್ವಿನ್ ಕೆನೆಡಿ  ಛಾಯಾಗ್ರಹಣ ಈ ಸಿನಿಮಾಕ್ಕಿದೆ. ಈ ಹಿಂದಿನ ಸಿನಿಮಾಗಳಲ್ಲಿ ರಗಡ್ ಲುಕ್‌ನಲ್ಲಿಯೇ ಮಿಂಚಿ ಪ್ರೇಕ್ಷಕರ ಮನಗೆದ್ದಿದ್ದ ವಸಿಷ್ಠ ಈಗ ಲವ್ವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೊಸ ಗೆಟಪ್‌ನಲ್ಲಿ ವಸಿಷ್ಠನನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾದುಕುಳಿತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಮೂರು ಹಂತಗಳಲ್ಲಿ ಚಿತ್ರೀ ಕರಣ ನಡೆಸಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.