Thursday, 12th December 2024

ನಟ ಭಯಂಕರನಿಗೆ ಸಾಥ್ ನೀಡಿದ ಮದಗಜ 

ಪ್ರಥಮ್ ಪ್ರಥಮ ಬಾರಿಗೆ ನಿರ್ದೇಶಿಸಿರುವ ನಟ ಭಯಂಕರ ಚಿತ್ರ ತೆರೆಗೆ ಸಿದ್ಧವಾಗಿದೆ. ಈ ಚಿತ್ರದ ನಾಯಕನಾಗಿ ಪ್ರಥಮ್ ನಟಿಸಿ ದ್ದಾರೆ. ಈ ಚಿತ್ರದ ಹಾಡುಗಳ ಬಿಡುಗಡೆಯಾಗಿವೆ.

ಪ್ರದ್ಯೋತನ್ ಸಂಗೀತದಲ್ಲಿ ಮೂಡಿಬಂದಿರುವ ಹಾಡುಗಳನ್ನು ನಟ ಶ್ರೀಮುರಳಿ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಪ್ರಥಮ್ ಕಾನಿಡೆನ್ಸ್ ಇರುವಾತ, ಬಿಗ್‌ಬಾಸ್‌ನ ಆರಂಭದಲ್ಲಿಯೇ ಗಮನ ಸೆಳೆದರು. ಆತನ ವಾಕ್ಚಾತುರ್ಯ ನನಗೂ ಇಷ್ಟವಾಯಿತು. ಈಗ ನಟನೆಯ ಜತೆಗೆ ನಿರ್ದೇಶನ ಕೂಡ ಮಾಡಿದ್ದಾರೆ. ರಘು ದೀಕ್ಷಿತ್ ಹಾಗೂ ನಾನು ಇಷ್ಟಪಡುವ ಉಪೇಂದ್ರ ಅವರು ಹಾಡಿರುವ ಹಾಡು ನನಗೆ ಇಷ್ಟವಾ ಯಿತು.

ಸಿನಿಮಾ ಕೂಡ ಉತ್ತಮವಾಗಿ ಮೂಡಿಬಂದಿರುತ್ತದೆ ಎಂಬ ನಂಬಿಕೆಯಿದೆ ಎಂದರು ಶ್ರೀಮುರಳಿ. ಬಾರಿ ಅಹಂಕಾರದಲ್ಲಿ ಮೆರೆಯುವ ವ್ಯಕ್ತಿಯೊಬ್ಬ ಕಾರ್ಯನಿಮಿತ್ತ ಆತ್ಮೀಯರಿಗೆ ಮಾತು ಕೊಟ್ಟಾಗ ಅದನ್ನು ಈಡೇರಿಸದಾಗದಿದ್ದಾಗ ಹೇಗೆ ಬದಲಾಗು ತ್ತಾನೆ ಎಂಬುದೇ ಚಿತ್ರದ ಕಥಾವಸ್ತು.

ಅದರ ಜತೆಗೆ ಸ್ಟುಪಿಡ್ ಸೂಪರ್ ಸ್ಟಾರ್ ಹಾಗೂ ಕುರುಡಿ ದೆವ್ವದ ನಡುವೆ ನಡೆಯುವ ಕಥೆ ಕೂಡ ಚಿತ್ರದಲ್ಲಿದೆ, ಮೇ ಹದಿಮೂರ ರಂದು ಚಿತ್ರವನ್ನು ತೆರೆಗೆ ತರುತ್ತೇವೆ ಎಂದು ಪ್ರಥಮ್ ತಿಳಿಸಿದರು. ನಾಯಕಿಯಾಗಿ ಫ್ರಾನ್ಸ್ ಮೂಲದ ನಿಹಾರಿಕಾ ನಟಿಸಿದ್ದಾರೆ. ಉಳಿದಂತೆ ಚಂದನಾ ಕೂಡ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.