Saturday, 10th June 2023

ಮಹೇಶ್ ಬಾಬು ಜತೆಯಾದ ಪ್ರಶಾಂತ್ ನೀಲ್

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗಕ್ಕೆೆ ಹೊಸ ತಿರುವುದ ತಂದುಕೊಟ್ಟ ನಿರ್ದೇಶಕ ಪ್ರಶಾಂತ್ ನೀಲ್, ಕನ್ನಡಕ್ಕೆೆ ಭಾಷೆಯಲ್ಲಿ ಮಾತ್ರ ತೆರೆಗೆ ಕಾಣುತ್ತಿಿದ್ದ ಸ್ಯಾಾಂಡಲ್‌ವುಡ್ ಚಿತ್ರಗಳನ್ನು ಪರಭಾಷೆಯಲ್ಲಿಯೂ ತೆರೆಗೆ ತರುವಂತಹ ಚಿತ್ರಗಳನ್ನು ನೀಡಿದವರು, ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್.

‘ಕೆಜಿಎಫ್’ ಚಿತ್ರದ ನಂತರ ಕೆಜಿಎಫ್ 2 ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿಿದೆ. ಆ ಬಳಿಕ ನಿರ್ದೇಶಕ ಪ್ರಶಾಂತ್ ನೀಲ್ ಮುಂದಿನ ಸಿನಿಮಾದ ಬಗ್ಗೆೆ ಕುತೂಹಲ ಹೆಚ್ಚಾಾಗಿದೆ.

’ಕೆಜಿಎಫ್-2’ ಮುಗಿದ ಬಳಿಕ ಪ್ರಶಾಂತ್ ಯಾರ ಜೊತೆ ಸಿನಿಮಾ ಮಾಡಬಹುದು ಎನ್ನುವ ಚರ್ಚೆ ಈಗಾಗಲೇ ಪ್ರಾಾರಂಭವಾಗಿದೆ. ಪ್ರಶಾಂತ್ ನೀಲ್ ಟಾಲಿವುಡ್ ಕಡೆ ಮುಖಮಾಡಲಿದ್ದಾರೆ ಎನ್ನುವ ಸುದ್ದಿ ಆಗಾಗ ಕೇಳಿ ಬರುತ್ತಿಿರುತ್ತದೆ. ತೆಲುಗಿನ ಸೂಪರ್ ಸ್ಟಾಾರ್ ನಟ ಜ್ಯೂ.ಎನ್ ಟಿ ಆರ್ ಗೆ ಸಿನಿಮಾ ಮಾಡಲಿದ್ದಾರೆ, ಮಹೇಶ್ ಬಾಬುಗೆ ಸಿನಿಮಾ ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿಿತ್ತು. ಆದರೆ ಈಗ ಪ್ರಶಾಂತ್, ಮಹೇಶ್ ಬಾಬು ಜತೆ ಸಿನಿಮಾ ಮಾಡುವುದು ಪಕ್ಕಾಾ ಎನ್ನುತ್ತಿಿವೆ ಮೂಲಗಳು. ಇದರ ಜೊತೆಗೆ ಮಹೇಶ್ ಬಾಬು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆೆಂಡಿಂಗ್ ಮಾಡುತ್ತಿಿದ್ದಾರೆ. ಮಹೇಶ್ ಬಾಬುಗೆ ಪ್ರಶಾಂತ್ ನೀಲ್ ಸಿನಿಮಾ? ಮಹೇಶ್ ಬಾಬು 27ನೇ ಸಿನಿಮಾಗೆ ಪ್ರಶಾಂತ್ ನೀಲ್ ನಿರ್ದೇಶನ ಮಾಡಲಿದ್ದಾರೆ ಎನ್ನುವ ಸುದ್ದಿ ಮತ್ತೆೆ ಜೋರಾಗಿ ಸದ್ದು ಮಾಡುತ್ತಿಿದೆ. ಮಹೇಶ್ ಬಾಬು ಸದ್ಯ ’ಸರಿಲೇರು ನೀಕವ್ವರು’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ನಂತರ ಪ್ರಶಾಂತ್ ನೀಲ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿಿದೆ.

error: Content is protected !!