Thursday, 12th December 2024

ರಿಯಾಲಿಟಿ ಶೋ ಸುತ್ತ ಮೈಲಾಪುರ

ಕನ್ನಡ ಚಿತ್ರರಂಗದಲ್ಲಿ ಈಗ ಸಾಕಷ್ಟು ಹೊಸ ಅಲೆಯ ಸಿನಿಮಾಗಳು ನಿರ್ಮಾಣವಾಗುತ್ತಿವೆ. ಅಂತಹ ಚಿತ್ರಗಳ ಸಾಲಿಗೆ ಹೊಸದಾಗಿ ‘ಮೈಲಾಪುರ’ ಸಿನಿಮಾ ಕೂಡ ಸೇರಿದೆ. ಫಣೀಶ್ ಭಾರದ್ವಾಜ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಹಾಡುಗಳು ಬಿಡುಗಡೆಯಾಗಿವೆ.

ಹಿರಿಯ ಸಂಗೀತ ನಿರ್ದೇಶಕ ರಾಜನ್ ನಾಗೇಂದ್ರ ಖ್ಯಾತಿಯ ನಾಗೇಂದ್ರ ಅವರ ಪತ್ನಿ ಜಯಲಕ್ಷ್ಮಿ ಹಾಗೂ ಸಮಾಜ ಸೇವಕಿ ಸಾಲುಮರದ ತಿಮ್ಮಕ್ಕ ಹಾಡು ಗಳನ್ನು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭಕೋರಿದರು. ‘ಮೈಲಾಪುರ’ ಚಿತ್ರದಲ್ಲಿ ರಿಯಾಲಿಟಿ ಕಾರ್ಯಕ್ರಮದ ಹಿನ್ನಲೆಯಲ್ಲಿ ನಡೆಯುವ ಕಥಾನಕವಿದೆ. ನಿರ್ಮಾಪಕರು ನನಗೆ ನಾರ್ಮಲ್ ಕಥೆ ಬಿಟ್ಟು ಬೇರೆಯದೆ ಕಂಟೆಂಟ್ ಇಟ್ಟುಕೊಂಡು ಚಿತ್ರ ಮಾಡೋಣ ಎಂದು ಹೇಳಿದರು.

ಒಂದು ರಿಯಾಲಿಟಿ ಬೇಸ್ ಇಟ್ಟುಕೊಂಡು ಸ್ಕ್ರಿಪ್ಟ್ ಮಾಡಿದರೆ ಹೇಗಿರುತ್ತೆ ಎಂದುಕೊಂಡಾಗ ಹೊಳೆದದ್ದೇ ಈ ಕಥೆ. ಚಿತ್ರ ಆರಂಭವಾದ ನಂತರ ಸಾಕಷ್ಟು ಅಡೆ ತಡೆಗಳುಂಟಾದವು. ಅದೇ ಸಮಯಕ್ಕೆ ಕರೋನಾ ಕೂಡ ಬಂತು, ಅದೆಲ್ಲವನ್ನೂ ನಿಭಾಯಿಸಿ ಚಿತ್ರವನ್ನು ನಿರ್ಮಿಸಿದ್ದೇವೆ. ಚಿತ್ರದಲ್ಲಿ ರಿಯಾಲಿಟಿ ಟಾಸ್ಕ್‌, ಜತೆಗೆ ಹಾರರ್ ಟಚ್ ಕೂಡ ಇರುತ್ತದೆ. ಇದರಲ್ಲಿ ಪಾಲ್ಗೊಳ್ಳಲು ಬರುವ ಎಲ್ಲರಿಗೂ ಅವರದೇ ಆದ ಕನಸುಗಳಿರುತ್ತವೆ. ಅದಕ್ಕಾಗಿ ಅವರೆಲ್ಲ ರಿಯಾಲಿಟಿ ಶೋನಲ್ಲಿ ಭಾಗವಹಿಸು ತ್ತಾರೆ.

ಅಲ್ಲಿ ಬರುವ ಊರೇ ‘ಮೈಲಾಪುರ’. ನಾಯಕಿ ತನಗೆ ಗೊತ್ತಿಲ್ಲದೆ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡಾಗ ಈ ‘ಮೈಲಾಪುರ’ವನ್ನು
ಆಯ್ಕೆ ಮಾಡಿಕೊಂಡಿರುತ್ತಾಳೆ. ಅಲ್ಲಿ ನಡೆಯುವ ಘಟನೆಗಳೇ ಈ ಚಿತ್ರದ ಪ್ರಮುಖ ಕಥಾವಸ್ತು. ಬೇಲೂರು, ಮಂಗಳೂರು, ಬೆಂಗಳೂರು ಹಾಗೂ ಮಂಡ್ಯ ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಸಿದ್ದೇವೆ ಎಂದರು ನಿರ್ದೇಶಕ ಫಣೇಶ್. ಥ್ರಿಲ್ಲರ್, ಸಸ್ಪೆನ್ಸ್‌ ಜತೆಗೆ ಹಾರರ್ ಕಂಟೆಂಟ್ ಕೂಡ ಇರುವ ಚಿತ್ರದು. ಚಿಕ್ಕ ಮಕ್ಕಳಿಂದ ಹಿಡಿದು ಮನೆಮಂದಿಯೆಲ್ಲಾ ಕುಳಿತು  ನೋಡಬಹು ದಾದಂಥ ಕಥೆ ಇದರಲ್ಲಿದೆ, ಹೊಸತನ ಸೃಷ್ಟಿಸೋಣ ಎಂಬ ನಿಟ್ಟಿನಲ್ಲಿ ಈ ಚಿತ್ರ ನಿರ್ಮಾಣ ಮಾಡಿದ್ದೇವೆ ಎಂದರು
ನಿರ್ಮಾಪಕ ಅಂತರಿಕ್ಷ. ಈ ಚಿತ್ರದಲ್ಲಿ ಭರತ್‌ಕುಮಾರ್ಲವ್ ಫೇಲ್ಯೂರ್ ಆದ ಯುವಕನಾಗಿ ಕಾಣಿಸಿಕೊಂಡಿದ್ದಾರೆ.

ಐಶ್ವರ್ಯಾ ಸಿಂದೋಗಿ ಹಾಗೂ ವಿಶೇಷ ಪಾತ್ರದಲ್ಲಿ ನಿಧಿ ಸುಬ್ಬಯ್ಯ ಬಣ್ಣಹಚ್ಚಿದ್ದಾರೆ.