Sunday, 15th December 2024

ಮಾನಾಡು ಲಿರಿಕಲ್‌ ಹಾಡು ರಿಲೀಸ್‌

ಕಾಲಿವುಡ್ ಸ್ಟಾರ್ ನಟ ಸಿಲಂಬರಸನ್ ನಟನೆಯ ಮಾನಾಡು ತಮಿಳು ಚಿತ್ರವು ಕನ್ನಡ, ಹಿಂದಿ, ತೆಲುಗು, ಮಲಯಾಳಂ ಐದು ಭಾಷೆಗಳಲ್ಲಿ ಸಿದ್ಧಗೊಳ್ಳುತ್ತಿದೆ. ಕನ್ನಡದಲ್ಲಿ ಸುದೀಪ್, ತಮಿಳಿನಲ್ಲಿ ಎ.ಆರ್.ರೆಹಮಾನ್, ಹಿಂದಿಯಲ್ಲಿ ಅನುರಾಗ್ ಕಶ್ಯಪ್, ತೆಲುಗಿನಲ್ಲಿ ರವಿತೇಜ ಮತ್ತು ಮಲೆಯಾಳಂನಲ್ಲಿ ಪೃಥ್ವಿರಾಜ್ ಟೈಟಲ್ ಲೋಕಾರ್ಪಣೆ ಮಾಡಿದ್ದರು.

ಸದ್ಯ ಕನ್ನಡದ ಶೀರ್ಷಿಕೆಯನ್ನು ತಂಡವು ರಿವೀಲ್ ಮಾಡಿಲ್ಲ. ಬದಲಾಗಿ ಲಿರಿಕಲ್ ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದಾರೆ. ಮದುವೆ ಸಂಭ್ರಮದಲ್ಲಿ ನವ
ಜೋಡಿಗಳ ಎದುರು ಹಾಡುವ ಮಹರೆ ಜೈಲಾ ಅಲ್ಲಾ ಅಲ್ಲಾ ಎಲ್ಲಾ ಎಲ್ಲಾ.. ಹಾಡು ಇದಾಗಿದ್ದು, ನಾಯಕ ಮತ್ತು ನಾಯಕಿ ತಂಡದೊಂದಿಗೆ ಹೆಜ್ಜೆ ಹಾಕುವ ಗೀತೆ
ಇದಾಗಿದೆ. ಮದನ್ ಕರ್ಕಿ ಸಾಹಿತ್ಯಕ್ಕೆ ಸಂಗೀತ ಸಂಯೋಜಕ ಯುವನ್ ಶಂಕರ್ ರಾಜ ಹಾಡಿಗೆ ಧ್ವನಿಯಾಗಿದ್ದು, ಇವರೊಂದಿಗೆ ರಿಜ್ವಾನ್, ರಾಜಭವ ತರಣಿ
ಸೇರಿಕೊಂಡಿದ್ದಾರೆ.

ಪೊಲಟಿಕಲ್ ಡ್ರಾಮಾ ಕಥೆ ಹೊಂದಿರುವ ಚಿತ್ರಕ್ಕೆ ರಚನೆ-ನಿರ್ದೇಶನ ವೆಂಕಟ್‌ಪ್ರಭು, ಛಾಯಾಗ್ರಹಣ ರಿಚರ್ಡ್.ಎಂ.ನಾಥನ್, ಸಂಕಲನ ಪ್ರವೀಣ್.ಕೆ.ಎಲ್, ಸಾಹಸ ಸ್ವಂಟ್‌ಶಿವ, ನೃತ್ಯರಾಜು ಸುಂದರಂ ಅವರದಾಗಿದೆ. ಸುರೇಶ್ ಕಾಮತ್ ತಮ್ಮ ವಿ ಹೌಸ್ ಪ್ರೊಡಕ್ಷನ್ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ. ಕಲ್ಯಾಣಿ ಪ್ರಿಯದರ್ಶನ್ ನಾಯಕಿ. ಮತ್ತೊಂದು ಮುಖ್ಯ ಪಾತ್ರದಲ್ಲಿ ಎಸ್.ಜೆ.ಸೂರ್ಯ ಉಳಿದಂತೆ ವೈ.ಜಿ.ಮಹೇಂದ್ರನ್, ವಾಗಿಚಂದ್ರಶೇಖರ್, ಅಂಜನಾಕೀರ್ತಿ, ಎಸ್.ಎ.ಚಂದ್ರಶೇಖರ್, ಉದಯ, ಮನೋಜ್.ಕೆ.ಭಾರತಿ, ಪ್ರೇಮ್‌ಗಿ ಅಮರೆನ್, ಡ್ಯಾನಿಯೆಲ್, ಕರುಣಾಕರನ್ ಮುಂತಾದವರು ನಟಿಸುತ್ತಿದ್ದಾರೆ.