Sunday, 15th December 2024

ಮಿ.ಭೀಮರಾವ್ ಶೀರ್ಷಿಕೆ ಅನಾವರಣ

ಯುಟರ್ನ್ ೨ ಚಿತ್ರವನ್ನು ನಿರ್ದೇಶಿಸಿರುವ ಚಂದ್ರು ಓಬಯ್ಯ ಆ ಚಿತ್ರದ ಬಿಡುಗಡೆಗೂ ಮುನ್ನವೇ ಮತ್ತೊಂದು ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ಸಿದ್ಧ ವಾಗಿದ್ದಾರೆ.

ಮಿ.ಭೀಮರಾವ್ ಶೀರ್ಷಿಕೆಯಲ್ಲಿ ಸಿನಿಮಾ ಮೂಡಿಬರಲಿದೆ. ಸದ್ಯ ಈ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದ್ದು, ಶೀಘ್ರದಲ್ಲಿಯೇ ಚಿತ್ರ ಸೆಟ್ಟೇರಲಿದೆ. ಕನ್ನಡ, ತೆಲುಗು, ತಮಿಳು ಸೇರಿ ಒಟ್ಟು ನಾಲ್ಕು ಭಾಷೆಗಳಲ್ಲಿ ಚಿತ್ರ ನಿರ್ಮಾಣ ವಾಗಲಿದೆ. ಮಿ.ಭೀಮರಾವ್ ಚಿತ್ರದ ಶೀರ್ಷಿಕೆ ಹಾಗೂ ಲಿರಿಕಲ್ ವಿಡಿಯೊವನ್ನು ಆ ದಿನಗಳು ಖ್ಯಾತಿಯ ನಟ ಚೇತನ್ ಬಿಡುಗಡೆ ಮಾಡಿ ಶುಭಕೋರಿದರು. ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ೨೦ನೇ ಶತಮಾನದ ಮಹಾ ಮಾನವತಾವಾದಿ ದೀನ, ದಲಿತರ ಪರವಾಗಿ ಹೋರಾಟ ನಡೆಸಿದವರು.

ಅವರ ಹೋರಾಟದ ವಿಚಾರಗಳನ್ನು ಈ ಸಿನಿಮಾದಲ್ಲಿ ತರಬೇಕಿದೆ ಎಂದು ಚೇತನ್ ಸಲಹೆ ನೀಡಿದರು. ಮಿ.ಭೀಮರಾವ್ ಅಂಬೇಡ್ಕರ್ ಅವರ ಜೀವನಕಥೆ ಅಲ್ಲ. ಅವರ ತತ್ವಗಳನ್ನು, ಆದರ್ಶಗಳನ್ನು ನಂಬಿ ಪಾಲಿಸಿಕೊಂಡು ಬಂದವನು. ಆತನ ಕಥೆಯನ್ನು ನಾವು ಈ ಚಿತ್ರದ ಮೂಲಕ ಹೇಳ ಹೊರಟಿದ್ದೇವೆ.

ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನದ ಹಿನ್ನೆಲೆಯಲ್ಲಿ ಲಿರಿಕಲ್ ವಿಡಿಯೊ ಸಾಂಗ್ ರಿಲೀಸ್ ಮಾಡಿದ್ದೇವೆ. ಜೂನ್ ಅಂತ್ಯದಲ್ಲಿ ಶೂಟಿಂಗ್ ಪ್ರಾರಂಭಿಸುವ ಯೋಜನೆಯಿದೆ. ಪ್ರಮುಖ ಪಾತ್ರಗಳಲ್ಲಿ ಯುವ, ದುಷ್ಯಂತ್ ನಟಿಸ ಲಿದ್ದಾರೆ ಎಂದು ಚಂದ್ರು ಓಬಯ್ಯ ತಿಳಿಸಿದರು.