Tuesday, 23rd April 2024

ವಿದೇಶದಲ್ಲೂ ಮುಂದಿನ ನಿಲ್ದಾಣ

1984ರ ನಂತರ ಹುಟ್ಟಿಿದ ಜನರ ಮನಸ್ಥಿಿತಿ ಹೇಗಿರುತ್ತದೆ ಎಂಬುದನ್ನು ‘ಮುಂದಿನ ನಿಲ್ದಾಾಣ’ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಕತೆಯಲ್ಲಿ ಮೂರು ಮುಖ್ಯ ಪಾತ್ರಗಳು ಕಾಣಿಸಿಕೊಳ್ಳುತ್ತವೆ. ಪಾರ್ಥ ಎನ್ನುವ ಇಂಜಿನಿಯರ್ ಇಂದಿನ ಯುವಜನಾಂಗದ ಪ್ರತಿನಿಧಿಯಾಗಿ ಬರುತ್ತಾಾರೆ. ಸದರಿ ಪಾತ್ರದಲ್ಲಿ ನಾಯಕ ಪ್ರವೀಣ್‌ತೇಜ್ 26,28,30 ಮತ್ತು 32 ವಯಸ್ಸಿಿನ ನಾಲ್ಕು ಶೇಡ್‌ಗಳಲ್ಲಿ ವರ್ತಮಾನ, ಭೂತ,ಭವಿಷ್ಯತ್ ಕಾಲದಲ್ಲಿ ಇರುವಂತೆ ನಟಿಸಿದ್ದಾಾರೆ. ವೃತ್ತಿಿಯಲ್ಲಿ ಕುಂಚ ಕಲಾವಿದೆ. ತನಗೆ ಹೊಂದಿಕೊಳ್ಳುವಂತ ಗುಣ ಇರುವ ಹುಡುಗ ಸಿಕ್ಕರೆ ಮದುವೆಯಾಗುವ ಬಯಕೆ ಹೊಂದಿರುವ ಮೀರಾಳಾಗಿ ರಾಧಿಕಾನಾರಾಯಣ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾಾರೆ. ದೇವರ ಮೇಲಿನ ನಂಬಿಕೆ ಮೇಲೆ ರಾಧಿಕಾಚೇತನ್ ಇರುವುದನ್ನು ಬದಲಿಸಿಕೊಂಡು ಇದೇ ಹೆಸರಿನಲ್ಲಿ ನಾಮಕರಣ ಮಾಡಿಕೊಂಡಿದ್ದಾಾರೆ. ವೈದ್ಯೆೆಳಾಗಿ ಸಮಾಜಸೇವೆ ಮಾಡಿ, ಹೆಸರು ಸಂಪಾದಿಸಬೇಕೆನ್ನುವ ಬಯಕೆ. ಪ್ರಸಕ್ತ ಯುವಜನಾಂಗವು ಯಾವ ರೀತಿ ಇರುತ್ತಾಾರೆ ಅಂತ ಹೇಳುವ ಡಾ.ಅಹನಾಳಾಗಿ ಅನನ್ಯಕಶ್ಯಪ್ ಅವರಿಗೆ ಹೊಸ ಅನುಭವ. ಇವರು ಮಂಡ್ಯಾಾ ರಮೇಶ್ ನಟನಾ ಶಾಲೆಯ ವಿದ್ಯಾಾರ್ಥಿ.

ವಿನಯ್‌ಭಾರದ್ವಾಾಜ್ ಕತೆ,ಚಿತ್ರಕತೆ ಬರೆದು ಮೊದಲ ಬಾರಿ ನಿರ್ದೇಶನ ಮಾಡಿದ್ದಾಾರೆ. ಏಳು ಹಾಡುಗಳಿಗೆ ಏಳು ಸಂಗೀತ ನಿರ್ದೇಶಕರು ಕೆಲಸ ಮಾಡಿರುವುದು ವಿಶೇಷ. ಇದರಲ್ಲಿ ಮಸಾಲಾ ಕಾಫಿ ತಂಡದ ‘ಮನಸೇ ಮಾಯಾ…’ ಮತ್ತು ವಾಸುಕಿ ವೈಭವ್ ರಾಗದ ‘ಇನ್ನೂನೂ ಬೇಕಾಗಿದೆ…’ ಹಾಡುಗಳು ಹಿಟ್ ಆಗಿದೆ. ಬೆಂಗಳೂರಿನಲ್ಲಿ ನಡೆಯುವ ಕತೆಯಲ್ಲಿ ಪ್ರಾಾಕೃತಿಕ ರೂಪಾಂತರದಿಂದ ಮಾನಸಿಕ ರೂಪಾಂತರವರೆಗಿನ ಸನ್ನಿಿವೇಶಗಳು ಬರಲಿದೆ. ಎರಡು ಪ್ರೇಮಕತೆಗಳು ಸೇರಿಕೊಂಡು ‘ಮುಂದಿನ ನಿಲ್ದಾಾಣ’ದವರೆಗೆ ಹೇಗೆ ಹೋಗುತ್ತದೆ. ಚಿತ್ರದಲ್ಲಿ ಗೆಳತನ, ಬ್ರೇಕ್‌ಅಪ್, ಅನುರಾಗ ಇರಲಿದ್ದು, ನೋಡುಗನಿಗೆ ತನ್ನ ಜೀವನದಲ್ಲಿ ನಡೆದಂತೆ ಭಾಸವಾಗುತ್ತದೆ. ಸಕಲೇಶಪುರ, ಕೋಲಾರ, ಹಿಮಾಚಲ್‌ಪ್ರದೇಶ, ನೆದರ್‌ಲ್ಯಾಾಂಡ್‌ಸ್‌, ಬೆಲ್ಜಿಿಯಂ, ಸಿಲಿಕಾನ್ ಸಿಟಿಯಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸಂಭಾಷಣೆ ಅಭಿಷೇಕ್‌ಅಯ್ಯಂಗಾರ್, ಛಾಯಾಗ್ರಹಣ ಅಭಿಮನ್ಯುಸದಾನಂದ, ಸಾಹಿತ್ಯ ಕಿರಣ್ ಕಾವೇರಪ್ಪ ಅವರದಾಗಿದೆ. ಶಾರುಕ್‌ಖಾನ್ ಒಡತನೆದ ರೆಡ್ ಚಿಲ್ಲೀಸ್‌ದಲ್ಲಿ ಕಲರ್ ಗ್ರೇಡಿಂಗ್ ಮಾಡಿರುವುದು ಮತ್ತೊೊಂದು ಹಿರಿಮೆಯಾಗಿದೆ.

ಇಂಗ್ಲೇಡ್‌ನಲ್ಲಿರುವ ವೈದ್ಯ ಸುರೇಶ್, ದುಬೈನ ತಾರನಾಥರೈ, ಸಿಂಗಪೂರ್‌ನ ಶೇಷ್ ಮತ್ತು ಬೆಂಗಳೂರು ನಿವಾಸಿ ಮುರಳಿ ಸೇರಿಕೊಂಡು ಭಾಷೆಯ ಅಭಿಮಾನದ ಮೇಲೆ ಕೋಸ್ಟಲ್ ಬ್ರೀಜ್ ಪ್ರೊೊಡಕ್ಷನ್ ಮೂಲಕ ಸಿನಿಮಾ ಕೃಷಿಗೆ ಬಂಡವಾಳ ಹೂಡಿದ್ದಾಾರೆ. ಚಿತ್ರವು ರಾಜ್ಯ ಅಲ್ಲದೆ ಅಂತರರಾಷ್ಟ್ರೀಯ ಕಡೆಗಳಲ್ಲಿ ಸುದ್ದಿಯಾಗಿದೆ. ಇದರಿಂದ ವಿದೇಶದಲ್ಲಿ ಆದಷ್ಟು ಬೇಗನೆ ತೋರಿಸಲು ಬೇಡಿಕೆ ಬಂದ ಕಾರಣ ಅಮೇರಿಕಾ, ಕೆನಡಾ, ಸಿಂಗಪೂರ್, ಮಲೇಶಿಯಾ ಕಡೆಗಳಲ್ಲಿ 23ರಂದು ಪ್ರೀಮಿಯರ್ ಷೋ ಏರ್ಪಡಿಸಲು ಸಿದ್ದತೆ ಮಾಡಿಕೊಂಡಿದೆ. ಹೆಸರಾಂತ ಸಂಸ್ಥೆೆ ಕೆಆರ್‌ಜಿ ಸ್ಟುಡಿಯೋ ಮೂಲಕ ಇದೇ 29ರಂದು ರಾಜ್ಯಾಾದ್ಯಂತ ಬಿಡುಗಡೆಯಾಗುತ್ತದೆ.

Leave a Reply

Your email address will not be published. Required fields are marked *

error: Content is protected !!