Sunday, 15th December 2024

ಸರೋಜಿನಿ ತಂಡ ಸೇರಿದ ನಿಸರ್ಗಾ ಗೌಡ

ಭಾರತದ ಗಾನ ಕೋಗಿಲೆ ಸರೋಜಿನಿ ನಾಯ್ಡು ಅವರ ಜೀವನ ಕಥೆ ಆಧಾರಿತ ಸರೋಜಿನಿ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಭಾರತದ ಚಿತ್ರರಂಗದ ಪ್ರಸಿದ್ಧ ಕಲಾವಿದರ ದಂಡೆ ಈ ಚಿತ್ರದಲ್ಲಿದೆ.

ನಿರ್ದೇಶಕ ವಿನಯ್ ಚಂದ್ರ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರುತ್ತಿದ್ದು, ವಿಸಿಕಾ ಫಿಲಂಸ್ ಬ್ಯಾನರ್‌ನಲ್ಲಿ ಚರಣ್ ಸುವರ್ಣ, ಹನಿ ಚೌಧರಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದ ಒಂದು ಮುಖ್ಯ ಪಾತ್ರದಲ್ಲಿ ನಿಸರ್ಗಾ ಗೌಡ ನಟಿಸು ತ್ತಿದ್ದಾರೆ. ನಿಸರ್ಗ ಗೌಡ ಈಗಾಗಲೇ ಕನ್ನಡದ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದು, ಈ ಚಿತ್ರದಲ್ಲಿಯೂ ತಮ್ಮ ಅಭಿನಯ ಮುಂದುವರಿಸಿದ್ದಾರೆ. ಎಂಬತ್ತು, ತೊಂಬತ್ತರ ದಶಕದಲ್ಲಿ ಚಿತ್ರದ ಕಥೆ ಸಾಗುತ್ತದೆ. ಸರೋಜಿನಿ ನಾಯ್ಡು ಅವರ ಬಯೋಪಿಕ್‌ನಲ್ಲಿ ನಟಿಸುತ್ತಿರುವುದು ಖುಷಿ ತಂದಿದೆ.

ನನ್ನ ಪಾತ್ರ ತುಂಬಾ ಚಾಲೆಂಜಿಂಗ್ ಆಗಿದೆ. ಇದೇ ರೀತಿಯ ಪಾತ್ರಗಳನ್ನು ನಾನು ಬಯಸು ತ್ತಿದ್ದೆ. ಕೊನೆಗೂ ನನ್ನ ಕನಸಿ ಪಾತ್ರ ಸಿಕ್ಕಿದೆ ಎನ್ನುತ್ತಾರೆ ನಿಸರ್ಗಾ. ಕನಸಿನ ಸರೋಜಿ ನಾಯ್ಡು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಮೂಡಿ ಬರಲಿದೆ.