Sunday, 15th December 2024

ಕನ್ನಡದ ಕಟ್ಟಾಳುವಿನ ಕಥೆ ಪಂಪ

ಆದಿಕವಿ ಪಂಪನ ಹೆಸರಿನಲ್ಲಿ ಕನ್ನಡ ಚಿತ್ರವೊಂದು ಮೂಡಿಬಂದಿದ್ದು ಬಿಡುಗಡೆಗೆ ಸಿದ್ಧವಾಗಿದೆ. ಸಸ್ಪೆನ್ಸ್, ಥ್ರಿಲ್ಲರ್ ಕಥಾ ಹಂದರದ ಚಿತ್ರ ಇದಾಗಿದ್ದುಮ ಬಹಳ ವರ್ಷಗಳ ಬಳಿಕ ಎಸ್.ಮಹೇಂದರ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಸದ್ಯ ಈ ಚಿತ್ರದ ಹಾಡುಗಳು ಬಿಡುಗಡೆಯಾಗಿವೆ. ಹಿರಿಯ ನಿರ್ದೇಶಕ ಟಿ.ಎಸ್.ನಾಗಾ ಭರಣ ಚಿತ್ರದ ಹಾಡು ಗಳನ್ನು ಬಿಡುಗಡೆ ಮಾಡಿ ಸಿನಿಮಾ ತಂಡಕ್ಕೆ ಶುಭಕೋರಿದರು. ಪಂಪ ಚಿತ್ರವನ್ನು ಟೋಟಲ್ ಕನ್ನಡ ವಿ.ಲಕ್ಷ್ಮಿಕಾಂತ್ ನಿರ್ಮಿಸಿದ್ದಾರೆ. ಹಂಸಲೇಖಾ ಅವರ ಸಂಗೀತ ಮತ್ತು ಸಾಹಿತ್ಯ ಈ ಚಿತ್ರಕ್ಕಿದೆ. ಚಿತ್ರದ ನಾಯಕನಾಗಿ ಹರಹರ ಮಹಾದೇವ ಖ್ಯಾತಿಯ ಕೀರ್ತಿಭಾನು ನಟಿಸಿದ್ದು, ನಾಯಕಿಯಾಗಿ ಸಂಗೀತಾ ಶೃಂಗೇರಿ ಬಣ್ಣಹಚ್ಚಿದ್ದಾರೆ.

ರಾಘವ್ ನಾಯಕ್, ಅರವಿಂದ್, ಆದಿತ್ಯ ಶೆಟ್ಟಿ, ರೇಣುಕಾ, ರವಿಭಟ್, ಶ್ರೀನಿವಾಸ ಪ್ರಭು, ಪೃಥ್ವಿರಾಜ್ ಮತ್ತು ಚಿಕ್ಕಹೆಜ್ಜಾಜಿ ಮಹದೇವ್ ಇತರೆ ಪಾತ್ರಗಳಲ್ಲಿ ನಟಿಸಿದ್ದಾರೆ. ಕನ್ನಡಾ ಭಿಮಾನಿ ಪ್ರೊಫೆಸರ್ ಪಂಪ ಅವರ ಹತ್ಯೆಯಾದ ಮೇಲೆ ನಡೆಯುವ ಕುತೂಹಲಕಾರಿ ಘಟನೆಗಳೇ ಈ ಚಿತ್ರದ ಕಥಾವಸ್ತು. ಯಾರ ಮನಸ್ಸನ್ನೂ ನೋಯಿಸದ ಪಂಪರನ್ನು ಕೊಲೆ ಮಾಡುವ ದ್ವೇಷ ಯಾರಿಗಿತ್ತು.

ಇವರ ಹತ್ಯೆಯ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಚಿತ್ರದಲ್ಲಿ ಎಳೆಎಳೆಯಾಗಿ ಬಿಚ್ಚಿಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಎಸ್.ಮಹೇಂದರ್. ಹದಿಹರೆಯದ ಪ್ರೀತಿ-ಪ್ರೇಮ, ಭಾಷೆಯ ಮೇಲಿನ ಅಭಿಮಾನ, ಹೋರಾಟ ಇವೆಲ್ಲವೂ ಪಂಪ ಚಿತ್ರದಲ್ಲಿವೆ. ಕನ್ನಡ ಸಾಹಿತ್ಯ, ಸಂಗೀತದ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಬಂದ ನಾನು ಒಂದು ಸರಳವಾದ ಕಥೆ ಇಟ್ಟುಕೊಂಡು ಈ ಚಿತ್ರವನ್ನು ಮಾಡಿದ್ದೇನೆ. ಸೆಪ್ಟೆಂಬರ್ ೯ಕ್ಕೆ ಚಿತ್ರವವನ್ನು ಬಿಡುಗಡೆ ಮಾಡುವ ಯೋಜನೆ ಯೂ ಇದೆ ಎಂದು ನಿರ್ಮಾಪಕ ಲಕ್ಷಿಕಾಂತ್ ಹೇಳಿದರು. ರಮೇಶ್‌ಬಾಬು ಛಾಯಾ ಗ್ರಹಣ, ಮೋಹನ್ ಕಾಮಾಕ್ಷಿ ಸಂಕಲನ ವಿದೆ.

***

ಪಂಪ ಮರ್ಡರ್ ಮಿಸ್ಟರಿಯ ಕಥೆಯನ್ನು ಒಳಗೊಂಡಿದೆ. ಜತೆಗೆ ಅದ್ಭುತವಾದ ಲವ್ ಸ್ಟೋರಿಯೂ ಕೂಡ ಚಿತ್ರದಲ್ಲಿದೆ. ಪಾತ್ರಗಳು ನೈಜವಾಗಿರಬೇಕೆಂಬ ಉದ್ದೇಶದಿಂದ ಎಲ್ಲ ಪಾತ್ರಗಳಿಗೆ ಹೊಸ ಕಲಾವಿದರನ್ನೇ ಆಯ್ಕೆಮಾಡಿಕೊಂಡಿದ್ದೇವೆ. ಒಂದಷ್ಟು ವಿಷಯಗಳು ನೇರವಾಗಿವೆ. ಹಳದಿ ಕಣ್ಣಿಂದ ಸಿನಿಮಾ ನೋಡಬಾರದು ಅಷ್ಟೇ. ಕನ್ನಡ ನೆಲದಲ್ಲಿ ಹುಟ್ಟಿದ
ಪ್ರತಿ ಯೊಬ್ಬರೂ ನೋಡಲೇಬೇಕಾದ ಕಂಟೆಂಟ್ ಈ ಚಿತ್ರದಲ್ಲಿದ್ದು, ಬೆಂಗಳೂರು, ತೀರ್ಥಳ್ಳಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಹಂಸಲೇಖಾ ಅವರ ಜತೆ ಇಪ್ಪತ್ತಾರು ಚಿತ್ರಗಳನ್ನು ಮಾಡಿದ್ದೇನೆ. ಇದು ಅವರದೇ ಸಂಗೀತನಾ ಎಂದು ಆಶ್ಚರ್ಯಪಡುವ ಹಾಗೆ ಈ ಚಿತ್ರದ ಹಾಡುಗಳು ಮೂಡಿಬಂದಿವೆ.
-ಎಸ್.ಮಹೇಂದರ್ ನಿರ್ದೇಶಕ