Thursday, 12th December 2024

1980 ರಲ್ಲಿ ಪ್ರಿಯಾಂಕಾ

ಪೂಜಶ್ರೀ ಪ್ರೊಡಕ್ಷನ್ ಮತ್ತು ನೇಸರ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಮೂಡಿಬಂದಿರುವ 1980 ಸಿನಿಮಾದ ಟೀಸರ್ ಬಿಡುಗಡೆ ಯಾಗಿದೆ.

ಪ್ರಿಯಾಂಕಾ ಉಪೇಂದ್ರ ನಾಯಕಿಯಾಗಿ ನಟಿಸಿರುವ ಈ ಸಿನಿಮಾ, ಈಗಾಗಲೇ ಬಹುತೇಕ ಶೂಟಿಂಗ್? ಮುಗಿಸಿಕೊಂಡಿದ್ದು, ಇನ್ನೇನು ತೆರೆಗೆ ಬರಲಿದೆ. ಲಾಕ್‌ಡೌನ್ ಬಳಿಕ ಸಿಕ್ಕ ಸಿನಿಮಾ ಇದು. ಕಥೆ ಕೇಳಿದ ತಕ್ಷಣ ಒಪ್ಪಿಕೊಂಡೆ. ಅಷ್ಟೇ ಅದ್ಬುತವಾಗಿದೆ. ಆರಂಭದಲ್ಲಿ ಶೂಟಿಂಗ್ ಹೇಗಿರುತ್ತದೆ ಎಂದು ಟೆನ್ಷನ್ ಇತ್ತು. ಯಾವ ಸಮಸ್ಯೆ ಇಲ್ಲದೆ ಸಲೀಸಾಗಿ ಅಚ್ಚುಕಟ್ಟಾಗಿ ಶೂಟಿಂಗ್ ಮುಗಿಸಿದ್ದಾರೆ ನಿರ್ದೇಶಕರು.

ಹೊಸ ಟೀಮ್‌ನಲ್ಲಿ ಕೆಲಸ ಮಾಡಿ ಖುಷಿಯಾಯ್ತು. ಇತ್ತೀಚಿನ ದಿನಗಳಲ್ಲಿ ಮೇಕಿಂಗ್ ವಿಚಾರದಲ್ಲಿ ಎಲ್ಲರೂ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಬರವಣಿಗೆ ತುಂಬ ಮಹತ್ವದ್ದು. ಇಲ್ಲಿ ಬರವಣಿಗೆಯೂ ಚೆನ್ನಾಗಿದೆ ಎಂದರು ಪ್ರಿಯಾಂಕಾ.
ನಿರ್ದೇಶಕ ರಾಜ್‌ಕಿರಣ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದು ನನ್ನ ಮೊದಲ ಸಿನಿಮಾ. ಶೀರ್ಷಿಕೆಗೆ ತಕ್ಕಂತೆ ಇದು 1980 ಕಾಲ ಘಟ್ಟದಲ್ಲಿ ನಡೆಯುವ ಕಥೆ. ಸೈಕಲಾಜಿಕಲ್ ಥ್ರಿಲ್ಲರ್ ಶೈಲಿ ಎನ್ನಬಹುದು.

ಈ ಸಿನಿಮಾ ಸಿದ್ಧವಾಗಲು ನನ್ನ ಇಡೀ ಟೀಮ್ ಶ್ರಮಿಸಿದೆ ಎಂದರು ನಿರ್ದೇಶಕರು. ಚಿತ್ರದಲ್ಲಿ ಮತ್ತೊಂದು ಪ್ರಮುಖ ಪಾತ್ರಕ್ಕೆ
ಬಣ್ಣ ಹಚ್ಚಿರುವ ಮಾಡೆಲ್ ಕಂ ನಟಿ ಶರಣ್ಯ ಶೆಟ್ಟಿ, ಇದು ನನ್ನ ಮೊದಲ ಸಿನಿಮಾ. ಚಿತ್ರದ ಕಥೆ ಕೇಳಿಯೇ ಸಿನಿಮಾವನ್ನು
ಆಯ್ದುಕೊಂಡೆ. ಈ ಚಿತ್ರದಲ್ಲಿ ಜಾಸ್ತಿ ಮಾತನಾಡುವ ಹುಡುಗಿಯ ಪಾತ್ರ ನನ್ನದು. ಹೊಸ ತಂಡ ಎಂಬುದಕ್ಕಿಂತ ನಾನೂ ಚಿತ್ರ ರಂಗಕ್ಕೆ ಹೊಸಬಳೇ ಎಂದರು.

ಇನ್ನು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಟೀಸರ್ ಬಿಡುಗಡೆ ಆಗಿದ್ದು, ಚಿತ್ರಕ್ಕೆ ಆರ್‌ಕೆ ಪ್ರೊಡಕ್ಷನ್ಸ್‌ ಮತ್ತು ಪೂಜಶ್ರೀ ಬಂಡವಾಳ ಹೂಡಿದ್ದಾರೆ. ಶ್ರೀಧರ್, ಅರವಿಂದ್ ರಾವ್, ರಮೇಶ್ ಪಂಡಿತ್, ಶಂಕರ್ ಅಶ್ವತ್ಥ್‌, ಕಿಶೋರ್ ಕುಮಾರ್,
ವಿಶಾಲ್ ಧೀರಜ್, ಧನುಷ್ ಗೌಡ, ಮಾಸ್ಟರ್ ಕೃತಿಕಾ, ಭಾನು ಪ್ರಿಯಾ ತಾರಾಗಣದಲ್ಲಿದ್ದಾರೆ.

ಜೀವ ಆಂಟೋನಿ ಛಾಯಾಗ್ರಹಣ, ಚಿಂತನ್ ವಿಕಾಸ್ ಅವರ ಸಂಗೀತ, ಸಂಕಲನ ಲೋಕೇಶ್ ಪುಟ್ಟೇಗೌಡ, ನರೇಂದ್ರ ಬಾಬು ಸಂಭಾಷಣೆ ಬರೆದಿದ್ದಾರೆ