Sunday, 6th October 2024

ಶಬರಿ ಅವತಾರ ತಾಳಿದ ರಚಿತಾರಾಮ್

ಕೆ.ಕೆ.ಪ್ರೊಡಕ್ಷನ್ಸ್ ಅಂಡ್ ಅಸೋಸಿಯೇಷನ್ಸ್ ಹಾಗೂ ಎಟಿಎಂ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಶಬರಿ ಸರ್ಚಿಂಗ್ ಫಾರ್ ರಾವಣ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಮಹಿಳಾ ಪ್ರದಾನ ರಿವೇಂಜ್, ಥ್ರಿಲ್ಲರ್ ಕಥಾಹಂದರ
ಇರುವ ಈ ಚಿತ್ರದಲ್ಲಿ ಡಿಂಪಲ್‌ಕ್ವೀನ್ ರಚಿತಾರಾಮ್ ಶಬರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದು ರಚಿತಾ ಅವರ 36ನೇ ಚಿತ್ರವಾಗಿದೆ. ರಾಮನವಮಿಯ ದಿನದಂದೇ ರಚಿತಾರಾಮ್ ಶಬರಿಯಾಗಿ ಅಭಿಮಾನಿಗಳ ಮುಂದೆ
ಬಂದಿದ್ದಾರೆ. ರಾಮನವಮಿ ಹಬ್ಬದ ವಿಶೇಷವಾಗಿ ಶಬರಿ ಸಚಿಂಗ್ ಫಾರ್ ರಾವಣ ಚಿತ್ರದ ಫಸ್ಟ್ ಲುಕ್ ಮತ್ತು ಶೀರ್ಷಿಕೆಯನ್ನು ಬಿಡುಗಡೆ ಮಾಡಲಾಗಿದೆ.

ಪೋಸ್ಟರ್‌ನಲ್ಲಿ ಉಗ್ರಾವತಾರ ತಾಳಿರುವ ರಚಿತಾರಾಮ್ ಅವರ ವಿಭಿನ್ನಲುಕ್ ಸಾಕಷ್ಟು ಕುತೂಹಲ ಮೂಡಿಸಿದೆ. ಇನ್ನು ಈ ಚಿತ್ರಕ್ಕೆ ನವೀನ್ ಶೆಟ್ಟಿ ಅವರು ಆಕ್ಷನ್‌ಕಟ್ ಹೇಳುತ್ತಿದ್ದಾರೆ. ಕೇಶವ್-ಚೇತನ್ ಚಿತ್ರಕಥೆ ಹೆಣೆದಿದ್ದಾರೆ. ಇದುವರೆಗೆ ಸಂಕಲನಕಾರ ನಾಗಿ ಗುರುತಿಸಿಕೊಂಡಿದ್ದ ನವೀನ್ ಶೆಟ್ಟಿ ಶಬರಿ ಚಿತ್ರದ ಮೂಲಕ ನಿರ್ದೇಶಕರಾಗಿ ಭಡ್ತಿ ಪಡೆದಿದ್ದಾರೆ.

ಮಹಿಳಾ ಪ್ರಧಾನ ಕಥಾಹಂದರ ಒಳಗೊಂಡಿರುವ ಈ ಚಿತ್ರದಲ್ಲಿ ರಾವಣ ಯಾರಾಗಲಿದ್ದಾರೆ ಎನ್ನುವುದು ಇನ್ನೂ ಕುತೂಹಲ ವಾಗಿದೆ. ಕರೋನಾ ಹಾವಳಿ ಕಡಿಮೆಯಾದರೆ, ಮೇ ತಿಂಗಳ ಕೊನೆಯಲ್ಲಿ ಈ ಚಿತ್ರದ ಚಿತ್ರೀಕರಣ ಪ್ರಾರಂಭಿಸುವುದಾಗಿ ನಿರ್ದೇಶಕ ನವೀನ್ ಶೆಟ್ಟಿ ತಿಳಿಸಿದ್ದಾರೆ. ಇನ್ನು ಶಬರಿ ಸಚಿಂಗ್ ಫಾರ್ ರಾವಣ ಚಿತ್ರಕ್ಕೆ ಅನೂಪ್ ಸೀಳಿನ್ ಅವರ ಸಂಗೀತ ಸಂಯೋಜಿಸಿ ದ್ದಾರೆ.

ಸುರೇಶ್ ಆರ್ಮುಗಂ ಸಂಕಲನ, ವಿಶಾಲ್‌ಕುಮಾರ್‌ಗೌಡ ಛಾಯಾಗ್ರಹಣ ಚಿತ್ರರಕ್ಕಿದೆ. ರಘು ಮುಖರ್ಜಿ, ಅಚ್ಯುತ್‌ಕುಮಾರ್,
ಪ್ರದೀಪ್ ನಾರಾಯಣ್, ಅರ್ಚನಾ ಕೊಟ್ಟಿಗೆ ಚಿತ್ರದ ಪ್ರಮುಖ ಪಾತ್ರವರ್ಗದಲ್ಲಿದ್ದಾರೆ.