ಕ್ರೇಜಿಸ್ಟಾರ್ ರವಿಚಂದ್ರನ್ ಅಂದರೆ ಹಾಗೆ. ಅಂದುಕೊಂಡಿದ್ದನ್ನು ಸಾಧಿಸುವ ಛಲಗಾರ. ಕನ್ನಡ ಚಿತ್ರರಂಗದ ಕನಸುಗಾರ. ಒಂದೇ ಮಾತಿನಲ್ಲಿ ಹೇಳುವುದಾದರೆ ಸ್ಯಾಂಡಲ್ವುಡ್ನ ಶೋ ಮ್ಯಾನ್.
ಈಗ ರವಿಮಾಮ ಮತ್ತೆ ತೆರೆಯಲ್ಲಿ ಮಿಂಚಲು ಸಿದ್ಧವಾಗಿದ್ದಾರೆ. ಅದು ರವಿ ಬೋಪಣ್ಣನಾಗಿ. ಶಿರ್ಷಿಕೆಯಲ್ಲಿಯೇ ಗಮನಸೆಳೆದಿದ್ದ ಈ ಚಿತ್ರ ಈಗ ಟ್ರೇಲರ್, ಸಾಂಗ್ ಮೂಲಕ ನಿರೀಕ್ಷೆ ಹೆಚ್ಚಿಸಿದೆ. ಕ್ರೇಜಿಸ್ಟಾರ್ ಜತೆಗೆ ಕಿಚ್ಚ ಸುದೀಪ್ ಈ ಚಿತ್ರದಲ್ಲಿ ನಟಿಸಿರುವುದು ಚಿತ್ರದ ಬಗ್ಗೆ ಕುತೂಹಲ ಇಮ್ಮಡಿಗೊಳ್ಳುವಂತೆ ಮಾಡಿದೆ.
ರವಿಚಂದ್ರನ್ ಸಿನಿಮಾಗಳಲ್ಲಿ ಒಂದಲ್ಲ ಒಂದು ವಿಶೇಷತೆ ಇದ್ದೇ ಇರುತ್ತದೆ. ಅಂತೆಯೇ ರವಿ ಬೋಪಣ್ಣ ಹೊಸತನವನ್ನು ಹೊತ್ತು ಬಂದಿದೆ. ಕ್ರೇಜಿಸ್ಟಾರ್ ವಿಭಿನ್ನ ಲುಕ್ನಲ್ಲಿ ಕಂಗೊಳಿಸಿ ದ್ದಾರೆ. ಚಿತ್ರಕ್ಕೆ ಹೊಸತನ ತುಂಬಿದ್ದಾರೆ. ಸಮಾಜದ ವ್ಯವಸ್ಥೆ ಹದಗೆಟ್ಟಾಗ ನಮ್ಮ ನ್ಯಾಯಾಂಗ ವ್ಯವಸ್ಥೆ ಅದನ್ನು ಹೇಗೆ ಸರಿಪಡಿಸುತ್ತದೆ ಎಂಬುದು ಚಿತ್ರದಲ್ಲಿದೆ.
ದಿಟ್ಟ ಹೋರಾಟಗಾರ
ರವಿಬೋಪಣ್ಣ ಚಿತ್ರದ ಪೋಸ್ಟರ್ ನೋಡಿದಾಕ್ಷಣ ಚಿತ್ರದಲ್ಲಿ ಸಾಮಾಜಿಕ ನ್ಯಾಯದ ಕುರಿತ ಕಥಾಹಂದರವಿದೆ ಎಂಬುದು ಸ್ಪಷ್ಟವಾಗುತ್ತದೆ. ಅಂತೆಯೇ ಗಟ್ಟಿ ಕಥೆಯೂ ಇರುವುದು ಮನದಟ್ಟಾಗುತ್ತದೆ. ಕೆಲವೊಂದು ನೈಜ ಘಟನೆಗಳ ಸುತ್ತ ಚಿತ್ರದ ಕಥೆ ಸಾಗುತ್ತದೆ. ಇಲ್ಲಿ ಲವ್ ಇದೆ, ಎಮೋಷನ್ಸ್ ಇದೆ. ಮನ ಸೆಳೆಯುವ ಸೆಂಟಿಮೆಂಟ್ ದೃಶ್ಯಗಳು, ಸಾಹಸ ಸನ್ನಿವೇಶ ಗಳೂ ಕೂಡ ಚಿತ್ರದಲ್ಲಿವೆ. ಒಟ್ಟಾರೆ ಪ್ರೇಕ್ಷಕರಿಗೆ ಅಗತ್ಯವಾದ ಎಲ್ಲಾ ಅಂಶಗಳು ಇಲ್ಲಿ ಮಿಳಿತವಾಗಿವೆ ಎನ್ನುತ್ತಾರೆ ರವಿಮಾಮ.
ವಿಭಿನ್ನ ಶೇಡ್ನಲ್ಲಿ ರವಿಮಾಮ
ಈ ಚಿತ್ರದಲ್ಲಿ ರವಿಮಾಮ ಪುಟ್ನಂಜ, ಶಾಂತಿ ಕ್ರಾಂತಿ, ಮಲ್ಲನ ಗೆಟಪ್ನಲ್ಲಿ ಕಂಗೊಳಿಸಿ ದ್ದಾರೆ. ಜತೆಗೆ ಮೂರು ವಿಭಿನ್ನ ಶೇಡ್ ಗಳಲ್ಲಿ ಮಿಂಚಿದ್ದಾರೆ. ನಾಯಕನ ಜೀವನದಲ್ಲಿ ನಡೆದ ಅಹಿತಕರ ಘಟನೆಗಳು, ಅದಕ್ಕಾಗಿ ನಡೆಯುವ ಕಾನೂನು ಹೋರಾಟ ಎಲ್ಲವೂ ಸಿನಿಮಾ ದಲ್ಲಿವೆ. ಇದೆಲ್ಲವನ್ನೂ ಗಮನಿಸಿದರೆ ರವಿಬೋಪಣ್ಣ, ಕ್ರೇಜಿಸ್ಟಾರ್ ಅವರಿಗೆ ಮತ್ತೊಂದು ಹೊಸ ಆರಂಭ ನೀಡಲಿದೆ ಎಂಬುದಂತು ಖಾತ್ರಿಯಾಗಿದೆ.
ಮಧುರ ದಾಂಪತ್ಯ
ಕ್ರೇಜಿಸ್ಟಾರ್ಗೆ ಜತೆಯಾಗಿ ರಾಧಿಕಾ ಕುಮಾರಸ್ವಾಮಿ ಹಾಗೂ ಕಾವ್ಯಾ ಶೆಟ್ಟಿ ಬಣ್ಣಹಚ್ಚಿದ್ದಾರೆ. ಈ ಇಬ್ಬರೂ ಕೂಡ ಗ್ಲಾಮರ್ ಲುಕ್ನಲ್ಲಿ ಮಿಂಚಿದ್ದಾರೆ. ರಾಧಿಕಾ ಎಮೋಷನ್ನಲ್ಲಿ ಗಮನಸೆಳೆದರೆ, ಕಾವ್ಯಾ ಶೆಟ್ಟಿ ಗ್ಲಾಮರಸ್ ಲುಕ್ನಲ್ಲಿ ಕಣ್ಮನೆ ಸೆಳೆಯು ತ್ತಾರೆ. ಕಿಚ್ಚ ಸುದೀಪ್ ವಕೀಲನ ಪಾತ್ರದಲ್ಲಿ ನಟಿಸಿದ್ದು, ಅವರ ಪಾತ್ರಕ್ಕೆ ಸಾಕಷ್ಟು ಮಹತ್ವ ಇದೆ. ಕನಸುಗಾರನ ಕನಸಿನ ಹೊಸ ಲೋಕ ತೆರೆಯಲ್ಲಿ ಅನಾವರಣವಾಗಲಿದೆ. ಪ್ರತಿ ದೃಶ್ಯಗಳು ಕಣ್ಣಿಗೆ ಹಬ್ಬ ನೀಡುತ್ತವೆ.
***
ಪ್ರತಿಯೊಬ್ಬ ಮನುಷ್ಯನಲ್ಲಿಯೂ ಒಬ್ಬ ಮಾತನಾಡುತ್ತಿರುತ್ತಾನೆ ಅವನೇ ಕ್ರೇಜಿ ಎಂದು ಇಲ್ಲಿ ಹೇಳುವ ಪ್ರಯತ್ನ ಮಾಡಿದ್ದೇನೆ. ಜತೆಗೆ ಕರ್ಮದ ವಿಚಾರವೂ ಕಥೆಯಲ್ಲಿದೆ. ಚಿತ್ರವನ್ನು ಕಣ್ತುಂಬಿಕೊಂಡು ಚಿತ್ರಮಂದಿರದಿಂದ ಹೊರಬಂದ ಮೇಲೂ ಚಿತ್ರದ ಕಥೆ ಬಿಡದೆ ಕಾಡುತ್ತದೆ. ನಮ್ಮೊಳಗೆ ಆತ್ಮ ಸಾಕ್ಷಿ ಅನ್ನುವುದಿದೆ, ಅದು ನಮ್ಮನ್ನು ಪ್ರತಿ ಕ್ಷಣವೂ ಎಚ್ಚರಿಸುತ್ತಿರುತ್ತದೆ. ಆದರೂ ನಾವು ತಿಳಿದೆ ತಪ್ಪು ಮಾಡುತ್ತೇವೆ. ನಮ್ಮೊಳಗೆ ಒಬ್ಬ ವಕೀಲ, ನ್ಯಾಯಾಧೀಶ ಇದ್ದರೆ ನಮ್ಮ ತಪ್ಪುಗಳ ಬಗ್ಗೆ ನಾವೇ ನಿರ್ಧರಿಸ ಬಹುದು.
ಕಾಲಕ್ಕೆ ತಕ್ಕಂತೆ ಚಿತ್ರರಂಗ ಬದಲಾಗುತ್ತಿದೆ. ಅಂತೆಯೇ ಸಿನಿಮಾ ಮೇಕಿಂಗ್, ಸ್ಟೋರಿ ಯೂ ಬದಲಾಗುತ್ತಿದೆ. ಬದಲಾಗಬೇಕು. ಪ್ರಸ್ತುತ ಪ್ರೇಕ್ಷಕರು ಯಾವ ರೀತಿಯ ಕಥೆಯನ್ನು ಬಯಸುತ್ತಾರೋ ಆ ರೀತಿಯ ಕಥೆ ಈ ಚಿತ್ರದಲ್ಲಿದೆ. ತೆರೆಯಲ್ಲಿ ಚಿತ್ರವನ್ನು ನೋಡುತ್ತಿದ್ದರೆ ಭಾವನಾ ಲೋಕಕ್ಕೆ ಹೋದಂತೆ ಭಾಸವಾಗುತ್ತದೆ. ಹಾಡುಗಳು ಮನದಲ್ಲಿ ಮಧುರ ಗಾನ
ಮೂಡಿಸುತ್ತವೆ.