Saturday, 20th April 2024

ಮತ್ತೆ ಪುಟಿದೇಳುವೆ, ನಿಮ್ಮೆಲ್ಲರ ಮನಗೆಲ್ಲುವೆ

ಕನ್ನಡ ಚಿತ್ರರಂಗದ ಕನಸುಗಾರ ರವಿಮಾಮ. ಕಂಡ ಕನಸಿನಂತೆ ಸಾಗಿ ಆ ಕನಸನನ್ನು ನನಸು ಮಾಡಿದ ಹಠವಾದಿ. ಸಿನಿಮಾ ನಿರ್ಮಾಣವೇ ಕಡು ಕಷ್ಟ ಎಂದು ಕುಳಿತಿರುವಾಗ, ಕೋಟಿ ಕೋಟಿ ಬಂಡವಾಳ ಸುರಿದು ಸಿನಿಮಾ ನಿರ್ಮಾಣ ಮಾಡಿದ ಛಲಗಾರ.

ಸಿನಿಮಾ ಸೋತರೂ ಹಠ ಬಿಡದೆ, ಪುಟಿದೇಳುವ ಮನೋಭಾವ ರವಿಚಂದ್ರನ್ ಅವರದ್ದು. ಒಂದು ಕಾಲದಲ್ಲಿ ರವಿಮಾಮನ ಸಿನಿಮಾಗಳು ಎಂದರೆ ಬಿರುಗಾಳಿಯನ್ನೇ ಎಬ್ಬಿಸುತ್ತಿದ್ದವು. ಮಧುರ ಹಾಡುಗಳು ಮನಗೆಲ್ಲುತ್ತಿದ್ದವು. ಕಾಲ ಬದಲಾದಂತೆ ಆ ಕಾಲಕ್ಕೆ ತಕ್ಕಂತೆ ಸಿನಿಮಾಗಳನ್ನು ನೀಡುತ್ತಾ ಬರುತ್ತಿದ್ದಾರೆ ರವಿಮಾಮ. ಆದರೆ ಇತ್ತೀಚಿನ ದಿನಗಳಲ್ಲಿ ಕ್ರೇಜಿಸ್ಟಾರ್ ಅಭಿನಯಿಸಿದ ಕೆಲವು ಸಿನಿಮಾಗಳು ಸೋತಿವೆ.

ಆದರೂ ರವಿಮಾಮ ಸೋಲಿನಿಂದ ಕಂಗೆಟ್ಟಿಲ್ಲ. ಮತ್ತೆ ಪುಟಿದೇಳುವ ಪಣತೊಟ್ಟಿದ್ದಾರೆ. ಲಯಕ್ಕೆ ಮರಳಿ ಮತ್ತೆ ಪ್ರೇಕ್ಷಕರನ್ನು ಮನರಂಜಿಸುವ ಶಪಥ ಮಾಡಿದ್ದಾರೆ. ಈಗಾಗಲೇ ಹಲವು ಹೊಸ ಸಿನಿಮಾಗಳನ್ನು ಘೋಷಿಸಿದ್ದಾರೆ. ಆ ಸಿನಿಮಾಗಳು ಅದ್ದೂರಿಯಾಗಿಯೇ ಮೂಡಿಬರಲಿವೆ. ನಾನು ಮನೆ ಖಾಲಿ ಮಾಡಿದಾಗ ದುಡ್ಡು ಖಾಲಿಯಾಗಿದೆ ಹಾಗಾಗಿ ಮನೆ ಖಾಲಿ ಮಾಡಿದ ಎಂದು ಹೇಳಿದರು. ನಾನು ಮೂವತ್ತು ವರ್ಷಗಳಿಂದ ಹಣ ಕಳೆದುಕೊಳ್ಳುತ್ತಲೇ ಇದ್ದೇನೆ. ಅದು ನಿಮಗಾಗಿ, ನಿಮ್ಮ ಮನಗೆಲ್ಲುವ ಸಲುವಾಗಿ. ನಾನು ಸೋತಿಲ್ಲ. ನನ್ನಲ್ಲಿ ಗೆಲ್ಲುವ ಹುಮ್ಮಸ್ಸು ಇನ್ನೂ ಇದೆ. ಆವೇಶವೂವಿದೆ.

ಆ ಆಸೆ ಎಂದಿಗೂ ಕಡಿಮೆಯಾಗುವುದಿಲ್ಲ. ಈಗ ಬದಲಾಗಲು ಬಯಸಿದ್ದೇನೆ. ಅದಕ್ಕಾಗಿ ಮೊದಲು ನನ್ನನ್ನು ನಾನು ಗೆಲ್ಲ ಬೇಕಾಗಿದೆ. ಇನ್ನು ಮುಂದೆ ಏಕಾಂಗಿಯ ಪಾತ್ರ ಯಾವತ್ತು ಇರುವದುದಿಲ್ಲ. ಆ ಟೊಪ್ಪಿ ಕಿತ್ತೆಸೆದೆ. ಇನ್ನು ಯಾವತ್ತೂ ಬಿ
ಹ್ಯಾಪಿ ಟು ಅಲೋನ್ ಅನ್ನಲ್ಲ. ಮುಂದೆ ವಿ ಆರ್ ಹ್ಯಾಪಿ ಆಲ್ ಎನ್ನುತ್ತೇನೆ. ನಿಮ್ಮ ಮನಗೆಲ್ಲಲು ಏನೆಲ್ಲಾ ಬೇಕೋ ಅದೆಲ್ಲ ವನ್ನೂ ಮಾಡುತ್ತೇನೆ. ನಾನು ಯಾರಿಗೂ ಪ್ರತಿಸ್ಫರ್ಧಿಯೂ ಅಲ್ಲ. ಸದ್ಯ ನನಗೆ ನಾನೇ ಪ್ರತಿಸ್ಫರ್ಧಿ.

ನಾನು ದುಡ್ಡಿಗಾಗಿ ಯಾವತ್ತು ಬಯಸಿದವನಲ್ಲ. ನನಗೆ ಹಣಬೇಕಿರುವುದು ಸಿನಿಮಾ ಮಾಡಲು. ಐಷಾರಾಮಿಯಾಗಿ ಬದುಕಿಗಲ್ಲ. ಐಷಾರಾಮಿಯಾಗಿ ಸಿನಿಮಾ ಮಾಡಲು. ಅದಕ್ಕಾಗಿಯೇ ಮರಳಿ ಬರುತ್ತೇನೆ ಮತ್ತೆ ನಿಮ್ಮ ಮನಗೆಲ್ಲುತ್ತೇನೆ.

*

ರಣಧೀರ, ಪ್ರೇಮ, ಲೋಕ , ಪುಟ್ನಂಜ.. ಹೀಗೆ ಹಲವು ಹಿಟ್ ಚಿತ್ರಗಳನ್ನು ನೀಡಿದ್ದೇನೆ. ಶಾಂತಿಕ್ರಾಂತಿಯಂತಹ ಅದ್ಧೂರಿ
ಸಿನಿಮಾಗಳನ್ನು ನಿರ್ಮಿಸಿದ್ದೇನೆ. ಇವೆಲ್ಲವೂ ನನ್ನ ತಂದೆ ತಾಯಿ ಇದ್ದಂತೆ. ಇಂದಿಗೂ ಕೂಡ ಎಲ್ಲರಿಗೂ ಆ ಸಿನಿಮಾ ನೆನಪಾ ಗುತ್ತವೆ. ಆ ಚಿತ್ರದ ಗೀತೆಗಳು ಮನದಲ್ಲಿ ಗುನುಗುನಿಸುತ್ತವೆ. ನನಗೆ ಭಯ ಅನ್ನುವುದೇ ತಿಳಿದಿರಲಿಲ್ಲ. ಹಾಗಾಗಿಯೇ ಅದ್ಧೂರಿ ಸಿನಿಮಾಗಳನ್ನು ಮಾಡುತ್ತಾ, ಹಣ ಕಳೆಯುತ್ತಿದ್ದೆ. ನನ್ನ ಜೀವನದಲ್ಲಿ ಮಕ್ಕಳು ಬಂದಾಗ ಭಯ ಆರಂಭವಾಯಿತು. ಅವರಿಗಾಗಿ ಏನನ್ನಾದರೂ ಮಾಡಲೇಬೇಕೆನ್ನಿಸಿತು. ಅದಕ್ಕಾಗಿ ಸಿನಿಮಾ ಮಾಡುತ್ತೇನೆ. ನನ್ನ ನಗು ಮನಸು ನೋಡಿ ನನ್ನನ್ನು ಪ್ರೀತಿಸಿ. ನಾನು ನನ್ನ ಸಿನಿಮಾದ ಮೂಲಕ ನಿಮಗೆ ಪೀತಿ ತೋರುತ್ತೇನೆ. ಕೊನೆಯವರೆಗೂ ಕನ್ನಡ ಚಿತ್ರರಂಗಕ್ಕೆ ಕೊಡುಗೆ ನೀಡುತ್ತೇನೆ.
– ವಿ.ರವಿಚಂದ್ರನ್

error: Content is protected !!