Sunday, 24th November 2024

ರಿಯಾದಲ್ಲಿ ಹಾರರ್‌ ಸದ್ದು

ಇಡೀ ಭಾರತೀಯ ಚಿತ್ರರಂಗವೇ ಚಂದನವನದತ್ತ ತಿರುಗಿ ನೋಡುವಂತಾಗಿದೆ. ಹಾಗಾಗಿಯೇ ಇಂದು ಪರಭಾಷಾ ಚಿತ್ರರಂಗದ ನಿರ್ಮಾಪಕರು ಕನ್ನಡ ಚಿತ್ರರಂಗದತ್ತ ಒಲವು ತಾಳುತ್ತಿದ್ದಾರೆ. ಕನ್ನಡದಲ್ಲಿ ಚಿತ್ರ ನಿರ್ಮಾಣ ಮಾಡಲು ಉತ್ಸುಕರಾಗಿದ್ದಾರೆ.

ಅಂತೆಯೇ ಟಾಲಿವುಡ್ ನಿರ್ಮಾಪಕ ನರೇಶ್ ವಿಜಯ ಕನ್ನಡ ಚಿತ್ರರಂಗದ ಅಭಿಮಾನ ದಿಂದ ರಿಯಾ ಎಂಬ ಚಿತ್ರವನ್ನು ನಿರ್ಮಿಸಿ ದ್ದಾರೆ. ಇವರ ಪತ್ನಿ ವಿಜಯಾ ನರೇಶ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ರಿಯಾ ಶೀರ್ಷಿಕೆ ಕೇಳಲು ಹಿತವಾಗಿದೆ ಅಂತೆಯೇ ಚಿತ್ರದ ಕಥೆಯೂ ಇದೆ. ರಿಯಾ ಹಾರರ್ ಸಿನಿಮಾ ಹಾಗಂತ ಅಷ್ಟಕ್ಕೆ ಚಿತ್ರ ಸೀಮಿತವಾಗಿಲ್ಲ. ಇಲ್ಲಿ ಲವ್ ಇದೆ, ಅದಕ್ಕೂ ಮಿಗಿಲಾಗಿ ಎಮೋಷನಲ್ ಕಥೆಯೂ ಇದೆ.

ಈ ಹಿಂದೆ ಹಲವು ಹಾರರ್ ಸಿನಿಮಾಗಳು ತೆರೆಗೆ ಬಂದಿವೆ, ಆದರೆ ಆ ಎಲ್ಲಾ ಸಿನಿಮಾ ಗಳಿಗಿಂತ ಈ ಚಿತ್ರ ಕೊಂಚ ಭಿನ್ನವಾಗಿದೆ. ಇಂದಿನ ಟ್ರೆಂಡ್‌ಗೆ ಹೊಂದಿಕೊಳ್ಳುವಂತೆ ಈ ಚಿತ್ರವನ್ನು ತೆರೆಯಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಕಾರ್ಯನಿಮಿತ್ತ ಸುಂದರ
ತಾಣಕ್ಕೆ ತೆರಳುವ ಗೆಳೆಯರ ತಂಡವೊಂದು ಅಲ್ಲಿನ ಹೋಂಸ್ಟೇನಲ್ಲಿ ತಂಗುತ್ತದೆ.

ಸುಂದರ ಪರಿಸರದಲ್ಲಿ ಎಲ್ಲರೂ ಸಂತೋಷವಾಗಿರುವಾಗ , ಕೆಲವು ಘಟನೆಗಳು ಅಲ್ಲಿದ್ದ ವರನ್ನು ಬಿಡದೆ ಕಾಡುತ್ತದೆ . ಅದು ಯಾಕೆ, ಅದರ ಹಿಂದಿನ ಮರ್ಮಾ ಏನು ಎಂಬುದನ್ನು ಚಿತ್ರದಲ್ಲಿ ಥ್ರಿಲ್ಲರ್, ಹಾರರ್ ಅಂಶಗಳ ಮೂಲಕ ಕಟ್ಟಿಕೊಡಲಾಗಿದೆ. ನಾಯಕನಾದ ಖಳನಾಯಕ ಕಾರ್ತಿಕ್ ವರ್ಣೆಕರ್ ನಾಯಕನಾಗಿ ನಟಿಸಿದ್ದು, ನಾಯಕಿ ಯಾಗಿ ಸಾವಿತ್ರಿ ಬಣ್ಣಹಚ್ಚಿದ್ದಾರೆ. ಕಾರ್ತಿಕ್ ಈ ಚಿತ್ರಕ್ಕೆ ಖಳನಾಯಕನಾಗಿ ನಟಿಸಲು ಆಯ್ಕೆಯಾಗಿದ್ದರು. ಆದರೆ ಕೊನೆಗೆ ನಾಯಕನಾಗಿಯೇ ನಟಿಸಿದರು. ಈ ಚಿತ್ರದಲ್ಲಿ ಕಾರ್ತಿಕ್ ಸಂಗೀತಗಾರನಾಗಿ ಕಾಣಿಸಿಕೊಂಡಿದ್ದಾರೆ.

ಒಂದು ಮಧುರ ಗಾನ ಸಂಯೋಜಿಸಲು ಪ್ರಶಾಂತ ಸ್ಥಳಕ್ಕೆ ತೆರಳುತ್ತಾರೆ. ಆದರೆ ಅಲ್ಲಿ ನಾನಾ ಸಮಸ್ಯೆಗಳು ತಲೆದೂರುತ್ತವೆ.
ಅಲ್ಲಿಂದ ಹೇಗೆ ಪಾರಾಗಿ ಬರುತ್ತಾರೆ ಎಂಬುದೇ ಚಿತ್ರದ ಸಸ್ಪೆನ್ಸ್, ಅದನ್ನು ತೆರೆಯಲ್ಲಿ ನೋಡಿದರೆ ಚೆಂದ. ಉಳಿದಂತೆ ಶ್ವೇತಾ, ಅನನ್ಯಾ ಮತ್ತಿತರರು ಚಿತ್ರದ ತಾರಾಬಳಗದಲ್ಲಿದ್ದಾರೆ.