Sunday, 15th December 2024

ಆರ್‌ಆರ್‌ಆರ್‌ ಚಿತ್ರದಲ್ಲಿ ಅರುಣ್

Arun Sagar

ಕನ್ನಡ ಚಿತ್ರರಂಗದಲ್ಲಿ ಪೋಷಕ ನಟರಾಗಿ, ಹಾಸ್ಯ ನಟರಾಗಿ ಪ್ರಸಿದ್ಧಿ ಪಡೆದಿರುವ ಅರುಣ್ ಸಾಗರ್ ಗೆ ಭರ್ಜರಿ ಆಫರ್ ಸಿಕ್ಕಿದೆ. ಅದು ಪ್ರಸಿದ್ಧ ನಿರ್ದೇಶಕ ರಾಜಮೌಳಿ ನಿರ್ದೇಶಿಸಿರುವ ಆರ್‌ಆರ್‌ಆರ್ ಚಿತ್ರದಲ್ಲಿ ಅರುಣ್ ಅರುಣ್ ಕಾಣಿಸಿಕೊಂಡಿದ್ದಾರೆ.

ಅರುಣ್ ಸಾಗರ್ ಮೂಲತಃ ರಂಗಭೂಮಿ ಕಲಾವಿದರು. ಹಾಗಾಗಿ ಅವರಿಗೆ ಯಾವ ಪಾತ್ರ ನೀಡಿದರು, ಅದಕ್ಕೆ ಜೀವತುಂಬಿ ಅಭನಯಿಸುತ್ತಾರೆ. ಅದಕ್ಕಾಗಿಯೇ, ರಾಜಮೌಳಿ ಅವರು ತಮ್ಮ ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದ್ದಾರೆ. ಈ ಸಿನಿಮಾದಲ್ಲಿ ಬರುವ ಇಬ್ಬರು ಹೀರೋಗಳಲ್ಲಿ ಒಬ್ಬರಿಗೆ ಹೆಸರಿಡುವ ಪಾತ್ರದಲ್ಲಿ ಅರುಣ್ ಸಾಗರ್ ಕಾಣಿಸಿಕೊಳ್ಳುತ್ತಿದ್ದಾರೆ. ಆರಂಭದಲ್ಲಿಯೇ ಅವರು ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಅರುಣ್ ಸ್ಯಾಂಡಲ್ ವುಡ್‌ನಿಂದ ಟಾಲಿವುಡ್‌ಗೆ ಹಾರಿದ್ದಾರೆ.

ಸದ್ಯ ರಾಜಮೌಳಿ ಆರ್‌ಆರ್ ಆರ್ ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇದು ಹೈ ಬಜೆಟ್ ಚಿತ್ರವಾಗಿದ್ದು ಬಿಡುಗಡೆಗೂ ಮುನ್ನವೇ ಕುತೂಹಲ ಕೆರಳಿಸಿದೆ. ಟೀಸರ್ ಹಾಡುಗಳ ಮೂಲಕವೇ ಕಾತರತೆ ಹೆಚ್ಚಿಸಿರುವ ಆರ್ ಆರ್ ಆರ್ ಚಿತ್ರದ ಟ್ರೇಲರ್ ಶುಕ್ರವಾರ ರಿಲೀಸ್ ಆಗಲಿದೆ.

ಆರ್‌ಆರ್‌ಆರ್ ಚಿತ್ರದಲ್ಲಿ ಜ್ಯೂ.ಎನ್‌ಟಿಆರ್ ಹಾಗೂ ರಾಮ್ ಚರಣ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಬಾಲಿವುಡ್ ನಟ ಅಜಯ್ ದೇವಗನ್ ಚಿತ್ರದ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಆಲಿಯಾ ಭಟ್ ಅಭಿನಯಿಸಿದ್ದಾರೆ. ಜನವರಿ ಏಳರಂದು ಆರ್‌ಆರ್‌ಆರ್ ತೆರೆಗೆ ಬರಲಿದೆ.