Saturday, 14th December 2024

ಯಶೋಧಾಳಾದ ಸಮಂತಾ

Samantha

ತೆಲುಗಿನ ಖ್ಯಾತ ನಟಿ ಸಮಂತಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪೌರಾಣಿಕ ಕಥಾಹಂದರದ ಶಾಕುಂತಲಾ ಚಿತ್ರದಲ್ಲಿಯೂ ಸಮಂತಾ ನಟಿಸುತ್ತಿದ್ದಾರೆ. ಈಗ ಮತ್ತೊಂದು ಮಹಿಳಾ ಪ್ರಧಾನ ಸಿನಿಮಾ ಯಶೋಧಾ ಚಿತ್ರದಲ್ಲಿಯೂ ಸಮಂತಾ ನಾಯಕಿ ಯಾಗಿ ನಟಿಸುತ್ತಿದ್ದಾರೆ.

ಶ್ರೀದೇವಿ ಮೂವಿಸ್ ಬ್ಯಾನರ್‌ನಲ್ಲಿ ಯಶೋಧಾ ಸಿನಿಮಾ ಮೂಡಿಬರುತ್ತಿದ್ದು,. ಸಿನಿಮಾದ ಗ್ಲಿಂಪ್ಸ್ ಬಿಡುಗಡೆ ಯಾಗಿದೆ. ನಾಯಕಿ ಪ್ರಧಾನ ಚಿತ್ರ ಇದಾಗಿದ್ದು, ಸಮಂತಾ, ಯಶೋಧಾ ಪಾತ್ರದಲ್ಲಿ ಬಣ್ಣಹಚ್ಚಿದ್ದಾರೆ. ಬಹುತೇಕ ಶೂಟಿಂಗ್ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದೆ. ಶ್ರೀದೇವಿ ಪ್ರೊಡಕ್ಷನ್‌ನಲ್ಲಿ ನಿರ್ಮಾಣವಾಗಿರುವ ಹದಿನಾಲ್ಕನೇ ಸಿನಿಮಾ ಇದಾಗಿದ್ದು, ಶಿವಲೆಂಕಾ ಕೃಷ್ಣ ಪ್ರಸಾದ್ ಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ. ಹರಿ ಮತ್ತು ಹರೀಶ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಫ್ಯಾಮಿಲಿ ಮ್ಯಾನ್ ೨ ವೆಬ್ ಸಿರೀಸ್ ಮೂಲಕ ಸಂಮತಾ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಆ ಒಂದು ಕಾರಣಕ್ಕೆ ಎಲ್ಲಿಯೂ ಕಾಂಪ್ರಮೈಸ್ ಆಗದೇ, ಎಲ್ಲೆಡೆ ಸಲ್ಲುವ ಸಿನಿಮಾ ಮಾಡಿದ್ದೇವೆ. ಈ ಸಿನಿಮಾ ದಲ್ಲಿನ ಸಮಂತಾ ಅವರ ಡೆಡಿಕೇಷನ್ ತೆರೆಮೇಲೆ ಕಾಣಿಸಲಿದೆ. ಅವರ ನಟನೆಯನ್ನು ನೋಡುವುದೇ ಚೆಂದ, ಇಡೀ ಸಿನಿಮಾದಲ್ಲಿ ಗ್ರಾಫಿಕ್ಸ್ ಮೆರಗು ನೀಡುತ್ತದೆ ಎನ್ನುತ್ತಾರೆ ನಿರ್ಮಾಪಕರು.

ಯಶೋಧ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆಯಾ ಗಲಿದೆ. ಆಗಸ್ಟ್ ೧೨ಕ್ಕೆ  ಯಶೋಧಾ ತೆರೆಗೆ ಬರಲಿದೆ. ಚಿತ್ರದಲ್ಲಿ ಸ್ಟಾರ್ ನಟರ ದಂಡೇ ಇದೆ. ವರಲಕ್ಷ್ಮೀ ಶರತ್‌ಕುಮಾರ್, ಉನ್ನಿ ಮುಕುಂ ದನ್, ರಾವ್ ರಮೇಶ್, ಮುರಳಿ ಶರ್ಮಾ, ಸಂಪತ್ ರಾಜ್, ಶತ್ರು, ಮಧುರಿಮಾ, ಕಲ್ಪಿಕಾ ಗಣೇಶ್, ದಿವ್ಯಾ ಶ್ರೀಪಾದ್, ಪ್ರಿಯಾಂಕಾ ಶರ್ಮಾ ಸೇರಿ ಹಲವರು ಚಿತ್ರದಲ್ಲಿ ನಟಿಸಿದ್ದಾರೆ.

ಮಣಿಶರ್ಮಾ ಸಂಗೀತ, ಪಲ್ಗುಮ್ ಚಿನ್ನರಾಯನ, ಡಾ.ಚಲ್ಲ ಭಾಗ್ಯಲಕ್ಷ್ಮಿ ಸಂಭಾಷಣೆ, ಚಂದ್ರಬೋಸ್ ರಾಮ ಜೋಗಯ್ಯ ಶಾಸ್ತ್ರಿ ಸಾಹಿತ್ಯ, ಎಂ.
ಸುಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ. ಮಾತಾಂಡ್ ವೆಂಕಟೇಶ್ ಸಂಕಲನ ಈ ಚಿತ್ರಕ್ಕಿದೆ.