Sunday, 15th December 2024

ಒಂಟಿ ಮನೆಯಲ್ಲಿ ಎವಿಡೆನ್ಸ್‌ ಹುಡುಕಿದ ಮಾನಸಾ

ಆ ಒಂದು ಕೊಲೆಯ ಸುತ್ತ ಅದೊಂದು ಒಂಟಿ ಮನೆ, ಅಲ್ಲಿ ವ್ಯಕ್ತಿಯೊಬ್ಬ ಅಸುನೀಗಿರುತ್ತಾನೆ. ಅದು ಸಹಜ ಸಾವು ಎಂದು ಕೆಲವರು, ಆತ್ಮಹತ್ಯೆ ಎಂದು ಉಳಿದವರು ವಾದಿಸುತ್ತಿರುತ್ತಾರೆ. ಈ ನಡುವೆ, ಇದು ಕೊಲೆ ಎಂಬ ಅನುಮಾನವೂ ಕಾಡಿರುತ್ತದೆ. ಸತ್ಯಾಂಶ ತಿಳಿಯಲು ಪ್ರಕರಣ ವನ್ನು ಪೊಲೀಸ್ ತನಿಖೆಗೆ ವಹಿಸಲಾಗುತ್ತದೆ. ಈ ಪ್ರಕರಣದ ತನಿಖೆಗೆ ಬರುವ ಅಧಿಕಾರಿಯೇ ಪ್ರಿಯಾ ರಾಥೋಡ್.

ಸತ್ತ ವ್ಯಕ್ತಿ ಯಾರು? ಆತನ ಸಾವಿಗೆ ಕಾರಣ ಏನು ಎಂಬುದು ಚಿತ್ರದ ಕ್ಲೈಮ್ಯಾಕ್ಸ್‌‌ನಲ್ಲಿ ತಿಳಿಯ ಲಿದೆಯಂತೆ. ತನಿಖಾಧಿಕಾರಿಯಾಗಿ ಮಾನಸಾ ಜೋಷಿ ನಟಿಸಿದ್ದಾರೆ. ಈ ಹಿಂದೆ ದೇವರನಾಡು ಚಿತ್ರದಲ್ಲಿ ಫೋರೆನ್ಸಿಕ್ ಅಧಿಕಾರಿಯಾಗಿ, ಅಮೃತಾ ಅಪಾರ್ಟ್‌’ ಮೆಂಟ್‌’ನಲ್ಲಿ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ್ದ ಮಾನಸಾ, ಈಗ ತನಿಖಾಧಿಕಾರಿಯಾಗಿ ಕಾಣಿಸಿ ಕೊಂಡಿದ್ದು, ರಗಡ್ ಲುಕ್‌ನಲ್ಲಿ ಮಿಂಚಿದ್ದಾರೆ.

ಈ ಪಾತ್ರ ಸಿಕ್ಕಿರುವುದು ಅವರಿಗೆ ಸಂತಸ ತಂದಿದೆ ಯಂತೆ. ಯಾವುದೇ ಒಂದು ವಿಚಾರದ ಬಗ್ಗೆೆ ಮಾಹಿತಿ ಕಲೆಹಾಕುವುದು ಸವಾಲಿನ ಕೆಲಸ. ಇನ್ನು ತೆರೆಯಲ್ಲಿ ತನಿಖಾಧಿಕಾರಿಯಾಗಿ ಕಾಣಿಸಿ ಕೊಳ್ಳುವುದು ಇನ್ನೂ ಚಾಲೆಂಜಿಂಗ್ ಎನ್ನುತ್ತಾರೆ ಮಾನಸಾ. ಕನ್ನಡ ಚಿತ್ರರಂಗದಲ್ಲೇ ತೀರ ಅಪರೂಪ ಎನ್ನಬಹುದಾದ, ವಿಭಿನ್ನ ಕಥಾಹಂದರದ ಎವಿಡೆನ್ಸ್‌ ಚಿತ್ರದ ಚಿತ್ರೀಕರಣ ಪೂರ್ಣ ಗೊಂಡಿದೆ. ಚಿತ್ರದ ಶೀರ್ಷಿಕೆ ಕೇಳಿದಾಕ್ಷಣ ಇದೊಂದು ಕ್ರೈಂ ಕಥೆಯ ಚಿತ್ರ ಎಂದು ಅನ್ನಿಸಬಹುದು. ಹೌದು, ಇದು ಕ್ರೈಂ, ಥ್ರಿಲ್ಲರ್ ಜಾನರ್‌ನಲ್ಲಿ ಸಾಗುವ ಸ್ಟೋರಿ. ಕೊಲೆಯ ಸುತ್ತ, ಸುತ್ತವ ಕಥೆಯೇ ಎವಿಡೆನ್ಸ್. ಎರಡೇ ಪಾತ್ರಗಳ ಮೂಲಕ ಚಿತ್ರಕಥೆ ಸಾಗುವುದು ವಿಶೇಷ. ಒಂದು ತನಿಖಾಧಿಕಾರಿ, ಮತ್ತೊಂದು ಅಪರಾಧಿ. ಈ ಎರಡು ಪಾತ್ರಗಳೇ ಚಿತ್ರದ ಜೀವಾಳ.

ಸವಾಲಿನ ಚಿತ್ರೀಕರಣ ಪಾತ್ರಕ್ಕೆ ತಯಾರಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಹಲವು ಸಿನಿಮಾಗಳನ್ನು ವೀಕ್ಷಿಸಿ, ಕಥೆಗೆ ತಕ್ಕಂತೆ ಸಿದ್ಧ ವಾದೆ. ನಿರ್ದೇಶಕರು ಕೂಡ ಹಲವು ಸಲಹೆ, ಮಾರ್ಗದರ್ಶನ ನೀಡಿದರು. ಇದೂ ಕೂಡ ಉತ್ತಮವಾಗಿ ನಟಿಸಲು ಸಹಾಯಕ ವಾಯಿತು ಎನ್ನುತ್ತಾರೆ ಮಾನಸಾ. ಇನ್ನು ಇಬ್ಬರೇ ಪಾತ್ರಧಾರಿಗಳು ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದಾಗ ನನಗೂ  ಅಚ್ಚರಿ ಯಾಯಿತು. ಆದರೆ ಕಥೆಗೆ ಇಲ್ಲಿ ಪ್ರಾಮುಖ್ಯತೆ ಇದ್ದುದ್ದರಿಂದ ತಮ್ಮ ಪಾತ್ರವನ್ನು ಅಚ್ಚು ಕಟ್ಟಾಗಿ ನಿಭಾಯಿಸಲು ಸಾಧ್ಯವಾಯಿ ತಂತೆ. ಕನಕಪುರ ರಸ್ತೆಯಲ್ಲಿರುವ ಭೂಮಿಕಾ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಸಲಾಯಿತು. ಅಲ್ಲೇ ಚಿತ್ರದ ಸಂಪೂರ್ಣ ಚಿತ್ರೀಕರಣವು ನಡೆಯಿತು.

ಚಿತ್ರದ ಮತ್ತೊಂದು ವಿಶೇಷ ಎಂದರೆ ಐದು ದಿನದಲ್ಲೇ ಚಿತ್ರೀಕರಣ ಮುಗಿಸಿದ್ದು. ಹಗಲು, ರಾತ್ರಿ ಐದು ದಿನಗಳ ಕಾಲ ನಿರಂತರ ವಾಗಿ ಚಿತ್ರೀಕರಣ ನಡೆಯಿತು. ಬೇರೆ ಪಾತ್ರದ ಶೂಟಿಂಗ್ ಸಂದರ್ಭದಲ್ಲಿ, ನಾನು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೆ. ಒಂದೇ ಸ್ಥಳ ದಲ್ಲಿ ಶೂಟಿಂಗ್ ನಡೆಸಿದ್ದರಿಂದ ಇದು ಸಾಧ್ಯವಾಯಿತು. ಪಾತ್ರದಲ್ಲಿ ತಲ್ಲೀನರಾಗಿದ್ದರಿಂದ, ನಿರಂತರ ಚಿತ್ರೀಕರಣವಿದ್ದರು, ಎಲ್ಲಿಯೂ ಒತ್ತಡ ಎಂದು ಭಾಸವಾಗಲೇ ಇಲ್ಲ. ಪ್ರತಿ ಸನ್ನಿವೇಶದಲ್ಲೂ ಕುತೂಹಲ ಕೆರಳಿಸುವ ಎವಿಡೆನ್ಸ್, ಪ್ರೇಕ್ಷಕರಿಗೆ ಖಂಡಿತ ಇಷ್ಟವಾಗುತ್ತದೆ ಎಂಬ ನಿರೀಕ್ಷೆ ಮಾನಸಾ ಅವರಲ್ಲಿದೆ.

ಮತ್ತೊಂದು ಪ್ರಮುಖ ಪಾತ್ರದಲ್ಲಿ ರೋಬೋ ಗಣೇಶ್ ಅಭಿನಯಿಸಿದ್ದಾರೆ. ಪ್ರವೀಣ್ ರಾಮಕೃಣ್ಣ ಕಥೆ, ಚಿತ್ರಕಥೆ ಬರೆದು
ನಿರ್ದೇಶನ ಮಾಡುತ್ತಿದ್ದಾರೆ. ಧೃತಿ ಪ್ರೊಡಕ್ಷನ್ಸ್‌‌ನಲ್ಲಿ ಪ್ರವೀಣ್ ಮತ್ತು ಸ್ನೇೇಹಿತರು ಸೇರಿ ನಿರ್ಮಿಸುತ್ತಿರುವ ಚಿತ್ರಕ್ಕೆ ರವಿ ಸುವರ್ಣ ಛಾಯಾಗ್ರಹಣ, ಕಾರ್ತಿಕ್ ವೆಂಕಟೇಶ್ ಸಂಗೀತವಿದೆ.