Thursday, 12th December 2024

ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ

ಮೊಬೈಲ್ ಗೀಳಿನ ಕಟು ಸತ್ಯ

ಇದು ಮೊಬೈಲ್ ಜಮಾನ. ಸರ್ವವೂ ಮೊಬೈಲ್‌ಮಯ, ಕೈಯಲ್ಲಿ ಮೊಬೈಲ್ ಇಲ್ಲದಿದ್ದರೆ ಏನೂ ನಡೆಯುವುದಿಲ್ಲ. ಆದರೆ ಅದೇ ಮೊಲೈಲ್ ನಮ್ಮಲ್ಲಿ ಎಂತಹ ಬದಲಾವಣೆ ತಂದಿದೆ. ಮೊಬೈಲ್ ಗೀಳಿಗೆ ನಮ್ಮ ಅಮೂಲ್ಯ ಜೀವನವನ್ನು ಹೇಗೆ ಕಳೆದುಕೊಳ್ಳುತ್ತಿದ್ದೇವೆ. ಸಂಬಂಧಗಳನ್ನು ಹೇಗೆ ಮರೆಯು ತ್ತಿದ್ದೇವೆ ಎಂಬ ಕಟು ಸತ್ಯವನ್ನು ಸೆಲ್ಪಿ ಮಮ್ಮಿ ಗೂಗಲ್ ಡ್ಯಾಡಿ ಸಿನಿಮಾ ಮೂಲಕ ಹೇಳಲು ಹೊರಟ್ಟಿದ್ದಾರೆ ನಿರ್ದೇಶಕ ಮಧು.

ಚಿತ್ರದ ಶೀರ್ಷಿಕೆ ಕೇಳಿದರೆ ಇದು ಮೊಬೈಲ್ ಗೀಳಿನ ಕಥೆ ಎಂಬುದು ಸ್ಪಷ್ಟವಾಗುತ್ತದೆ. ಇದು ಕಟು ಸತ್ಯದ ಕಥೆ ಎಂಬುದು ಮನದಟ್ಟಾಗುತ್ತದೆ. ಅಪ್ಪ ಸಾಪ್ಟವೇರ್ ಕಂಪನಿಯ ಉದ್ಯೋಗಿ ಸದಾ ಕೆಲಸದ ಒತ್ತಡದಲ್ಲಿಯೇ ಇರುತ್ತಾರೆ. ಇನ್ನು ಮಮ್ಮಿಗೋ ಸದಾ ಸೆಲ್ಫಿ ಹುಚ್ಚು. ಇದನ್ನು ನೋಡಿದ ಅವರ ಮಕ್ಕಳಲ್ಲಿ ಯೂ ಮೊಬೈಲ್ ಗೀಳು ಸಹಜವಾಗಿಯೇ ಅಂಟಿಕೊಳ್ಳುತ್ತದೆ. ಆಕರ್ಷಕ ಗೇಮ್‌ಗಳು ಮಕ್ಕಳನ್ನು ಸೆಳೆಯುತ್ತವೆ. ಇದು ಅವರ ಶಿಕ್ಷಣ, ಆಟ ಒಡನಾಟ ಇವೆಲ್ಲದರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನಿರ್ದೇಶಕರು ಚಿತ್ರದಲ್ಲಿ ಪ್ರಯತ್ನ ಮಾಡಿದ್ದಾರೆ.

ನೈಜ ಘಟನೆ
ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ನೈಜ ಘಟನೆಯಾಧಾರಿತ ಚಿತ್ರ. ನಿರ್ದೇಶಕ ಮಧು ತಮ್ಮ ಸುತ್ತಮುತ್ತ ಕಣ್ಣಾರೆ ಕಂಡ ಘಟನೆಗಳಿಗೆ ಕಥೆಯ ರೂಪ ನೀಡಿ, ಅದಕ್ಕೆ ಚಿತ್ರಕಥೆ ರಚಿಸಿ, ಸಂಭಾಷಣೆ ಬರೆದು ಸಿನಿಮಾ ರೂಪದಲ್ಲಿ ತರುತ್ತಿದ್ದಾರೆ. ಚಿಕ್ಕಮಕ್ಕಳು ಕೂಡ ಮೊಬೈಲ್ ಗೀಳಿನಿಂದ ಹೊರತಾಗಿಲ್ಲ, ಮೊಬೈಲ್ ಇಲ್ಲದೆ ಊಟ ಪಾಟ ಯಾವುದೂ ಅವರಿಗೆ ಬೇಕಾಗಿಲ್ಲ. ಹೀಗಾದರೆ ಶಾಲೆಯಲ್ಲಿ ಅವರ ನಡವಳಿಕೆ ಹೇಗಿರುತ್ತದೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾ ಗಿದೆ. ಮೊಬೈಲ್ ಗೀಳಿಗೆ ಪರಿಹಾರವನ್ನು ಸೂಚಿಸುವ ಪ್ರಯತ್ನ ಚಿತ್ರದಲ್ಲಿದೆ. ನೈಜ ಕಥೆಗೆ ಒಂದಷ್ಟು ಕಾಮಿಡಿ ಬೆರೆಸಿ. ಮನ ರಂಜನೆಯ ಅಂಶಗಳನ್ನು ಸೇರಿಸಿ ಪ್ರೇಕ್ಷಕರ ಮನ ಮುಟ್ಟುವಂತೆ ತೆರೆಗೆ ತರಲಾಗುತ್ತಿದೆ.

ಮಜಾ ಕೊಡಲಿದ್ದಾರೆ ಸೃಜನ್

ಚಿತ್ರದ ಪ್ರಮುಖ ಪಾತ್ರದಲ್ಲಿ ಸೃಜನ್ ಲೋಕೇಶ್ ನಟಿಸಿ ದ್ದಾರೆ. ಇವರಿಗೆ ಜತೆಯಾಗಿ ಮೇಘನಾರಾಜ್ ಬಣ್ಣಹಚ್ಚಿದ್ದಾರೆ. ಸೃಜನ್ ಸಾದಾ ಸೀದ ಅಭಿನಯದ ಮೂಲಕ ಪಂಚಿಂಗ್ ಡೈಲಾಗ್ ಹೊಡೆದು ಪ್ರೇಕ್ಷಕರನ್ನು ನಗಿಸುತ್ತಾರೆ. ಉಳಿದಂತೆ ಸುಂದರ್ ರಾಜ್, ಅಚ್ಯುತ್ ಕುಮಾರ್ ಮಜಾ ಟಾಕೀಸ್ ಖ್ಯಾತಿಯ ಪವನ್ ಮತ್ತಿತರರು ಚಿತ್ರದ ತಾರಾಬಳಗದಲಿದ್ದಾರೆ. ಬೆಂಗಳೂರು ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.

ಪೋಷಕರೇ ನಿರ್ಮಾಪಕರು

ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಚಿತ್ರದಲ್ಲಿ ಪೋಷಕರು ಹಾಗೂ ಮಕ್ಕಳಿಗೆ ಒಳ್ಳೆಯ ಸಂದೇಶವೂ ಇದೆ. ವಿಶೇಷ ಎಂದರೆ ಪೂಷಕರೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸುಮಾರು ಎಂಬತ್ತು ಜನ ಪೋಷಕರು ಸೇರಿ ಚಿತ್ರ ನಿರ್ಮಾಣಕ್ಕೆ ಬಂಡ ವಾಳ ಹೂಡಿದ್ದಾರೆ. ಇದೊಂದು ಸಾಮಾಜಿಕ ಕಳ ಕಳಿಯ ಚಿತ್ರ ಎಂಬುದು ಇದರಿಂದ ಸ್ಪಷ್ಟವಾಗಿದೆ. ಪೋಷಕರಲ್ಲಿರುವ ಕೆಲ ಸದ ಒತ್ತಡ ಹಾಗೂ ಮೊಬೈಲ್ ಗೀಳು ಅವರ ಮಕ್ಕಳಿಗೂ ಹೇಗೆ ಆವರಿಸುತ್ತಿದೆ ಎಂಬುದನ್ನು ಎಲ್ಲಾ ಪೋಷಕರಿಗೂ ತಿಳಿ ಹೇಳು ವ ನಿಟ್ಟಿನಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ಮುಂದಿನ ವಾರ ಚಿತ್ರ ತೆರೆಗೆ ಬರಲಿದೆ. ಅದಕ್ಕೂ ಮೊದಲೇ ಚಿತ್ರದ ಡಬ್ಬಿಂಗ್ ರೈಟ್ಸ್ ಗೆ ಪರಭಾಷೆಯಿಂದಲೂ ಬಹಳ ಬೇಡಿಕೆ ಬರುತ್ತಿದೆ.