ಆಧುನಿಕತೆ ಎಷ್ಟೇ ಮುಂದುವರಿದರು ಮಹಿಳೆಯರು ಸೇಫ್ ಅಲ್ಲ ಎನ್ನುವ ಮಾತು ಅಲ್ಲಲ್ಲಿ ನಡೆಯುವ ಕೆಲವು ದುಷ್ಕೃತ್ಯಗಳಿಂದ ತಿಳಿದುಬರುತ್ತದೆ. ಇಂತಹದ್ದೇ ಅಂಶವನ್ನು ಹೊತ್ತು ತರುತ್ತಿಿದೆ ಮರಣಂ ಚಿತ್ರ. ಸಾಮಾಜಿಕ ಸಂದೇಶವನ್ನು ಸಾರುವ ನಿಟ್ಟಿಿನಲ್ಲಿ ಮಹೇಶ್ ಕೊಡಿಯಾಳ ಈ ಚಿತ್ರವನ್ನು ನಿರ್ಮಿಸುತ್ತಿಿದ್ದಾಾರೆ. ನಾನು ಚಿತ್ರ ಲೋಕಕ್ಕೆೆ ಬಂದು 6 ವರ್ಷಗಳಾದವು. ಮೊದಲು ಮೂವಿ ಟೆಕ್ ನಲ್ಲಿ ಸಿನಿಮಾ ಬಗ್ಗೆೆ ಕಲಿತು, ತೆಲುಗು ಚಿತ್ರಗಳಲ್ಲಿ ಸಹಾಯಕನಾಗಿ ಕೆಲಸ ಮಾಡಿ, ನಂತರ ‘ಮರಣಂ’ ಚಿತ್ರದ ಮೂಲಕ ಸಮಸ್ತ ಕನ್ನಡಿಗರಿಗೆ ಪರಿಚಯ ವಾಗುತ್ತಿಿದ್ದೇನೆ. ‘ಮರಣಂ’ ಚಿತ್ರವನ್ನು ನಮ್ಮ ಒಂದು ನೈಜ ಘಟನೆ ಆಧಾರಿತವಾಗಿ ನಿರ್ಮಿಸಿದ್ದೇವೆ.
ಈ ಚಿತ್ರ ಸಮಾಜಕ್ಕೆೆ ಸಂದೇಶವನ್ನು ನೀಡುವ ಚಿತ್ರ ವಾಗಿರುತ್ತದೆ. ಮಹಿಳೆಯರು ನಮ್ಮ ಸಮಾಜದಲ್ಲಿ ಎದುರುಸುತ್ತಿಿರುವ ಸಮಸ್ಯೆೆಗಳನ್ನು ಚಿತ್ರ ಬಿಂಬಿಸಲಿದೆ ಎನ್ನುತ್ತಾಾರೆ ಮಹೇಶ್ ಕೊಡಿಯಾಳ. ಈ ಚಿತ್ರದಲ್ಲಿ ಐದು ಕಥೆಗಳಿವೆ. ಒಂದು ಸಮಸ್ಯೆೆಯನ್ನು ಅವರವರ ದೃಷ್ಟಿಿಕೋನದಲ್ಲಿ ಅವರರವರ ಪರಿಚಯುಸುತ್ತಾಾ ಬರುತ್ತಾಾರೆ. ಕಡೆಗೆ ಆ ಎಲ್ಲಾ ಕಥೆಗಳು ಬಂದೂ ಒಂದೇ ಸಾಲಿನಲ್ಲಿ ಹೇಗೆ ಅಂತ್ಯವಾಗುತ್ತಾಾವೆ ಎನ್ನುವುದೇ ಈ ಚಿತ್ರದ ಸಸ್ಪೆೆನ್‌ಸ್ ಆಗಿದೆ.
ನರರೂಪ ರಾಕ್ಷಸರಾದ ದಕಾಯಿತರ ಹಿಡಿತದಿಂದ, ಪರಿಚಯವೇ ಇಲ್ಲದ ಹುಡುಗಿಯನ್ನು ನಾಯಕ ಹೇಗೆ ಕಾಪಾಡುತ್ತಾಾನೆ ಎನ್ನುವದೇ ಈ ಚಿತ್ರದ ಒಂದು ಎಳೆಯ ಕಥೆ. ಸುಮಾರು 20 ನಿಮಿಷಗಳು ಕ್ಲೈಮ್ಯಾಾಕ್‌ಸ್ ಹೊಂದಿರುವ ಈ ಚಿತ್ರ ವೀಕ್ಷಕರಿಗೆ ಒಂದು ಒಳ್ಳೇ ಅನುಬೂತಿಯನ್ನು ಜತೆಗೆ ಆಶ್ಚರ್ಯವನ್ನು ಮೂಡಿಸುತ್ತದೆ.
‘ಮರಣಂ’ ಚಿತ್ರಕ್ಕೆೆ ಸಂಗೀತ ನಿರ್ದೇಶಕ ಅನಂತ್ ಆರ್ಯನ್ ಸಂಗೀತ ನೀಡಿದ್ದಾಾರೆ. ಕಥೆಗೆ ತಕ್ಕಂತೆ ಸಂಗೀತ ನೀಡಿದ್ದಾಾರೆ. ಇನ್ನುಳಿದಂತೆ ಮಸ್ಥಾಾನ್ ಷರೀಪ್, ಗುಣಶೇಖರ್, ರಾಮು, ಮುಂತಾದವರು ಚಿತ್ರದ ತಾಂತ್ರಿಿಕ ವರ್ಗದಲ್ಲಿದ್ದಾಾರೆ.