Thursday, 12th December 2024

ಭೂ ನಾಟಕ ಮಂಡಳಿಯಲ್ಲಿ ಸಾಮಾಜಿಕ ಮೌಲ್ಯ

ಕನ್ನಡ ಚಿತ್ರರಂಗದ ಪ್ರಸಿದ್ಧ ನಿರ್ದೇಶಕ ಜಿ.ವಿ.ಅಯ್ಯರ್ ಅವರ ಪುತ್ರ ಜಿ.ವಿ.ರಾಘವೇಂದ್ರ ಅಯ್ಯರ್ ಚಿತ್ರರಂಗದಲ್ಲಿ ಸಕ್ರಿಯ  ರಾಗಿದ್ದಾರೆ. ಜಿವಿ ಅಯ್ಯರ್ ಪ್ರೊಡಕ್ಷನ್ಸ್ ಆರಂಭಿಸಿ ಭೂನಾಟಕ ಮಂಡಳಿ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ.

ಇಂದಿನ ಆಧುನಿಕ ಕಾಲ ಘಟ್ಟದಲ್ಲಿ ಮರೆಯಾಗುತ್ತಿರುವ ಕೌಟುಂಬಿಕ ಮೌಲ್ಯಗಳು, ಈ ನಡುವೆ ಮಕ್ಕಳು ತಮ್ಮ ಹಿರಿಯರಿಂದ ಆತ್ಮವಿಶ್ವಾಸವನ್ನು ಹೇಗೆ ಪಡೆದುಕೊಳ್ಳಬೇಕು. ಅದರಿಂದ ಸಮಾಜದಲ್ಲಿ ಎದುರಾಗುವ ಸವಾಲುಗಳನ್ನು ಹೇಗೆ ನಿಭಾಯಿಸಬೇಕು ಎಂಬ ಕಥೆ ಈ ಚಿತ್ರದಲ್ಲಿದೆ. ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಸಮಾಜಕ್ಕೆ ಅಗತ್ಯವಾದ ಅಂಶ ಗಳು ಚಿತ್ರದಲ್ಲಿರುವುದು ಸ್ಪಷ್ಟವಾಗಿದೆ.

ಮಾಸ್ಟರ್ ತುಷಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗಾಯಕ ರಾಜೇಶ್ ಕೃಷ್ಣನ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಸ್ಪರ್ಶ ರೇಖಾ ತಾಯಿಯ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಮಾ.ಮಹೇಂದ್ರ, ವೀಣಾರಾವ್, ಸುಜಾತ ರಾಘವೇಂದ್ರ ಅಯ್ಯರ್ ಸೇರಿದಂತೆ ಹಲವರು ಚಿತ್ರದಲ್ಲಿ ನಟಿಸಿದ್ದಾರೆ. ಇದೇ ತಿಂಗಳ ೨೩ ರಂದು ಭೂನಾಟಕ ಮಂಡಳಿ ತೆರೆಗೆ ಬರಲಿದೆ.

***

೨೦೧೭ರಲ್ಲಿ ನಮ್ಮ ತಂದೆಯವರ ನೂರನೇ ಜನ್ಮದಿನದ ನೆನಪಿಗಾಗಿ ಈ ಚಿತ್ರವನ್ನು ಆರಂಭಿಸಿದೆವು. ಚಿತ್ರವನ್ನು ಬಿಡುಗಡೆ
ಮಾಡಬೇಕೆನ್ನುವ ವೇಳೆಗೆ ಕರೋನಾ ಕಾಡಿತು. ಬಿಡುಗಡೆಯೂ ತಡವಾಯಿತು. ಭೂನಾಟಕ ಮಂಡಳಿ ನೈಜಘಟನೆ ಆಧಾರಿತ ಚಿತ್ರವಾಗಿದೆ. ಮಕ್ಕಳ ಎದುರೇ ತಪ್ಪು ಮಾಡುವವರಿಗೆ ಮಕ್ಕಳಿಂದಲೇ ಸಂದೇಶ ಹೇಳುವ ಪ್ರಯತ್ನ ಮಾಡಿದ್ದೇವೆ.
– ರಾಘವೇಂದ್ರ ಅಯ್ಯರ್ ನಿರ್ದೇಶಕ

ಭೂ ನಾಟಕ ಮಂಡಳಿ ಎಲ್ಲಾ ಕಾಲಕ್ಕೂ ಅನ್ವಯವಾಗುವ ಸಿನಿಮಾ. ಹಲವು ವಿಚಾರಗಳನ್ನು ಒಳಗೊಂಡಿರುವ, ಹಲವಾರು
ದೃಷ್ಟಿಕೋನಗಳ ಚಿತ್ರವಿದು. ಸಮಾಜ, ಮಕ್ಕಳು, ಮನೆಯ ವಾತಾವರಣ, ಆಚೆಯ ವಾತಾವರಣ ಎಲ್ಲವನ್ನೂ ಸೇರಿಸಿ ಚಿತ್ರದ ಕಥೆ ಹೆಣೆದು ಅದನ್ನು ಎಲ್ಲರಿಗೂ ಹೊಂದಿಕೆಯಾಗುವಂತೆ ತೆರೆಯಲ್ಲಿ ಕಟ್ಟಿಕೊಡಲಾಗಿದೆ.
-ರಾಜೇಶ್ ಕೃಷ್ಣನ್ ನಟ