Thursday, 12th December 2024

ನಾನೊಂಥರಾ ಎಂದ ತಾರಕ್‌ ಏರಿಯಾದಲ್ಲಿ ಪ್ರತ್ಯಕ್ಷ

ನಾನೊಂಥರಾ ಎಂದು ಆಕ್ಷನ್‌ನಲ್ಲೇ ಅಬ್ಬರಿಸಿದ ತಾರಕ್, ಕೌಟುಂಬಿಕ ಕಥೆಯ ಚಿತ್ರದಲ್ಲಿ ಗಮನ ಸೆಳೆದವರು. ಈಗ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದು, ಏರಿಯಾ ಹುಡಗರ ಜತೆ ಪ್ರತ್ಯಕ್ಷವಾಗಿದ್ದಾರೆ. ಮತ್ತೊಂದು ಫ್ಯಾಮಿಲಿ ಎಂಟರ್‌ ಟೈನ್‌ಮೆಂಟ್ ಚಿತ್ರದ ಮೂಲಕ ಮಿಂಚಲು ಸಜ್ಜಾಗುತ್ತಿದ್ದಾರೆ.

ಚಿತ್ರದ ಶೀರ್ಷಿಕೆಯಂತೆ ಇದು ಪಡ್ಡೆ ಹುಡಗರ ನಡುವೆ ನಡೆಯುವ ಕಥೆ ಯಾಗಿದೆ. ಹಾಗಂತ ಹುಡುಗಾಟಿಕೆಗೆ ಚಿತ್ರ ಸೀಮಿತ  ವಾಗಿಲ್ಲ. ಇಲ್ಲಿ ಆಕ್ಷನ್ ಇದೆ, ಲವ್ ಇದೆ, ಮನಸೆಳೆಯುವ ತಾಯಿ ಮಗನ ಸಂಬಂಧದ ಕಥೆಯೂ ಇದೆ. ಇದೆಲ್ಲರದರ ಜತೆಗೆ ಒಂದಷ್ಟು ಥ್ರಿಲ್ಲಿಂಗ್ ಅಂಶವೂ ಕಥೆಯಲ್ಲಿ ಅಡಕವಾಗಿದೆ. ಅದು ಜನವಸತಿ ಪ್ರದೇಶ, ಅಲ್ಲಿ ವಾಸಿಸುವವರೆಲ್ಲ ಸಾಮಾನ್ಯ ವಾಗಿ ಮಧ್ಯಮ ವರ್ಗದ ಕುಟುಂಬದವರೆ. ಉತ್ತಮ ಜೀವನದ ಕನಸು ಕಾಣುವ ಅವರಿಗೆ ಮೇಲಿಂದ ಮೇಲೆ ಅನ್ಯಾಯ ವಾಗುತ್ತಿರುತ್ತದೆ. ಅಭಿವೃದ್ದಿಯ ನೆಪದಲ್ಲಿ ಕುಟಿಲ ರಾಜಕಾರಣಿಯೊಬ್ಬ, ಬಡವರಿಂದಲೂ ಹಣಪೀಕುವ ದುಷ್ಕಾರ್ಯ ಮಾಡು ತ್ತಿರುತ್ತಾರೆ.

ಇದನ್ನೆಲ್ಲ ಗಮನಿಸುವ ನಾಯಕ ಆ ಕುಟಿಲತೆಯನ್ನು ಹೇಗೆ ಮೆಟ್ಟಿನಿಲ್ಲುತ್ತಾನೆ. ಅದಕ್ಕಾಗಿ ತಮ್ಮ ಏರಿಯಾ ಹುಡುಗರೊಂದಿಗೆ ಸೇರಿ ಹೇಗೆ ಪ್ಲಾನ್ ಹೆಣೆಯು ತ್ತಾನೆ ಎಂಬುದೇ ಚಿತ್ರದ ಕಥೆ. ಈಗಾಗಲೇ ಚಿತ್ರದ ಕಥೆ ಸಿದ್ಧವಾಗಿದ್ದು, ಚಿತ್ರವೂ ಸೆಟ್ಟೇರಿದೆ. ಇನ್ನೇನು ಚಿತ್ರೀಕರಣಕ್ಕೆ ತೆರಳಬೇಕು ಎನ್ನುವಷ್ಟರಲ್ಲಿ ಕರೋನಾ ತಡೆಯೊಡ್ಡಿದೆ. ಹಾಗಾಗಿ ಲಾಕ್‌ಡೌನ್ ಮುಗಿದ ಬಳಿಕ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು ಹಾಗೂ ಮಂಗಳೂರಿ ನಲ್ಲಿ ಶೂಟಿಂಗ್ ನಡೆಸಲು ಚಿತ್ರತಂಡ ಪ್ಲಾನ್ ಮಾಡಿದೆ.

ಇನ್ನು ಈ ಚಿತ್ರದ ಜತೆಗೆ ಪ್ಯಾರಡಕ್ಸ್ ಚಿತ್ರದಲ್ಲಿಯೂ ತಾರಕ್ ಬಣ್ಣಹಚ್ಚಲಿದ್ದಾರೆ. ಕಂಪ್ಲೀಟ್ ಮನರಂಜನೆಯ ಪ್ಯಾಕೇಜ್ ಈ ಚಿತ್ರದಲ್ಲಿದೆಯಂತೆ. ಈ ಚಿತ್ರದಲ್ಲಿಯೂ ಕೂಡ ಆಕ್ಷನ್‌ನಲ್ಲಿಯೇ ಮಿಂಚಲಿದ್ದಾರೆ. ಅದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಆರಂಭಿಸಿ ದ್ದಾರೆ. ಕಮರ್ಷಿಯಲ್ ಚಿತ್ರಗಳ ಜತೆಗೆ ಕಲಾತ್ಮಕ ಚಿತ್ರಗಳತ್ತಲ್ಲೂ ತಾರಕ್ ಗಮನಹರಿಸಿದ್ದಾರೆ. ಇನ್ನೂ ಹೆಸರಿಡದ ಚಿತ್ರದಲ್ಲಿ ನಟಿಸಲು ಒಪ್ಪಿಗೆ ಸೂಚಿಸಿದ್ದಾರೆ. ಅಪ್ಪ ಮಗನ ಸಂಬಂಧದ ಬಗ್ಗೆ ಕಥೆ ಈ ಚಿತ್ರದಲ್ಲಿ ಸಾಗುತ್ತದೆ. ಜೀವನದಲ್ಲಿ ಹಣವೇ ಮುಖ್ಯ ವಾದಾಗ ಸಂಬಂಧದಲ್ಲಿ ಹೇಗೆ ಬಿರುಕು ಮೂಡುತ್ತದೆ ಎಂಬುದನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗುತ್ತಿದೆಯಂತೆ. ಗೋಕಾಕ್ ಸುತ್ತಮುತ್ತ ಸುಂದರ ತಾಣಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸಲು ಸಿನಿಮಾ ಟೀಂ ಪ್ಲಾನ್ ಮಾಡಿದೆ.

ನನ್ನನ್ನು ನಾನು ಸಂಪೂರ್ಣ ನಟನೆಗೆ ತೊಡಗಿಸಿಕೊಂಡಿದ್ದೇನೆ. ಈಗಲೂ ಒಳ್ಳೆಯ ಪಾತ್ರಗಳು ಸಿಕ್ಕಿವೆ, ಮುಂದೆ ಮತ್ತಷ್ಟು ಚಾಲೆಂಜಿಂಗ್ ಪಾತ್ರಗಳಲ್ಲಿ ನಟಿಸಬೇಕು ಎಂಬ ಆಸೆಯಿಂದೆ, ಅಂತಹ ಕಥೆಗಳಾಗಿ ಕಾಯುತ್ತಿದ್ದೇನೆ ಎನ್ನುತ್ತಾರೆ ತಾರಕ್.