Thursday, 12th December 2024

ತಾಯ್ತದೊಂದಿಗೆ ಬಂದ ಹರ್ಷಿಕಾ

ಹರ್ಷಿಕಾ ಪೂಣಚ್ಚ ಬೆಂಗಾಲಿ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ಹಲವು ದಿನಗಳಿಂದ ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ತಾಯ್ತ ಹಿಡಿದು ಮತ್ತೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ.

ಹಾಸ್ಯ ನಟ ಸಾಧುಕೋಕಿಲ ಸಹೋದರ, ಲಯಕೋಕಿಲ ತಾಯ್ತ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಂಗೀತ ನಿರ್ದೇಶಕರಾಗಿ ಪ್ರಸಿದ್ಧ ಪಡೆದಿದ್ದ ಲಯ ಕೋಕಿಲ ಈಗ ನಿರ್ದೇಶಕನಾಗಿಯೂ ಬಡ್ತಿ ಪಡೆದಿದ್ದು, ಚಿತ್ರ ನಿರ್ದೇಶನಕ್ಕೆ ತಯಾರಿ ನಡೆಸಿದ್ದಾರೆ. ತಮ್ಮ ಚೊಚ್ಚಲ ಚಿತ್ರಕ್ಕೆ ತಾಯ್ತ ಎಂದು ಹೆಸರಿಟ್ಟಿದ್ದಾರೆ. ರಾಮನಗರದ ದರ್ಗಾದಲ್ಲಿ ಚಿತ್ರದ ಮಹೂರ್ತವೂ ನೆರವೇರಿದೆ. ಲಯಕೋಕಿಲ ಅವರೆ ಕ್ಲಾಪ್ ಮಾಡುವ ಮೂಲಕ ತಮ್ಮ ನಿರ್ದೇಶನ ಕಾರ್ಯ ಆರಂಭಿಸಿದರು. ರಾಮನಗರದ ಆಸುಪಾಸಿನಲ್ಲಿ ಮೊದಲ ದಿನದ ಚಿತ್ರೀಕರಣವೂ ನಡೆದಿದೆ.

ಆಗಸ್ಟ್ ೫ ರಿಂದ ಚಿಕ್ಕಮಗಳೂರು, ಹೊರನಾಡು ಮುಂತಾದ ಕಡೆ ನಿರಂತರ ಚಿತ್ರೀಕರಣ ನಡೆಯಲಿದೆ. ಡಾ.ಶಾಹಿದ್ ಕಥೆ ಬರೆದಿದ್ದು, ಚಿತ್ರ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ನಿರ್ದೇಶನದ ಜತೆಗೆ ಸಂಗೀತ ನಿರ್ದೇಶನದ ಜವಾಬ್ದಾರಿಯೂ ಲಯ ಕೋಕಿಲ ಅವರದ್ದಾಗಿದೆ. ರಾಮನಾರಾಯಣ್ ಸಾಹಿತ್ಯದಲ್ಲಿ ಗೀತೆಗಳು ಮೂಡಿಬರಲಿವೆ. ಆನಂದ್ ಛಾಯಾಗ್ರಹಣ ಹಾಗೂ ಮೋಹನ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ವಿಭಿನ್ನವಾದ ಕಥಾಹಂದರ ಹೊಂದಿರುವ ತಾಯ್ತ ಸಮಾಜಕ್ಕೆ ಉತ್ತಮ ಸಂದೇಶವನ್ನು ಸಾರಲಿದೆಯಂತೆ.

ರಿಹಾನ್ ತಾಯ್ತ ಚಿತ್ರದ ನಾಯಕನಾಗಿ ನಟಿಸುತ್ತಿದ್ದು ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪರಿಚಯವಾಗಲಿದ್ದಾರೆ. ನಾಯಕನ ತಾಯಿಯ ಪಾತ್ರ ದಲ್ಲಿ ಸುಮಾ ಶಾಸ್ತ್ರಿ ಕಾಣಿಸಿಕೊಳ್ಳುತ್ತಿದ್ದಾರೆ. ಶೋಭ್ ರಾಜ್, ಕಲೀಲ್, ಮಿಮಿಕ್ರಿ ಮಂಜು, ಕಾರ್ತಿಕ್ ಶರ್ಮ ಮುಂತಾದವರು ಈ ಚಿತ್ರದ ತಾರಾ ಬಳಗದಲ್ಲಿ ದ್ದಾರೆ.