Sunday, 24th November 2024

ದಿ ಕಾಶ್ಮೀರ್‌ ಸಾಂಗ್ ಅನಾವರಣ

ಕಾಶ್ಮೀರದಲ್ಲಿ ನಡೆದಿದ್ದ ಲಕ್ಷಾಂತರ ಕಾಶ್ಮೀರ ಪಂಡಿತರ ಹತ್ಯೆ, ಮಾನವ ಕ್ರೌರ್ಯದ ಪರಮಾವಧಿ, ಭೀಭತ್ಸ ಘಟನೆಯನ್ನು ಬಿಚ್ಚಿಟ್ಟಿದ್ದ ದಿ ಕಾಶ್ಮೀರಿ ಫೈಲ್ಸ್ ಸಿನಿಮಾ ಎಲ್ಲೆಡೆ ಉತ್ತಮ ಪ್ರದರ್ಶನ ಕಂಡಿತು. ಅಂದಿನ ಘನಘೋರ ಪರಿಸ್ಥಿತಿಯನ್ನು ಮನ ಮುಟ್ಟುವಂತೆ ಮಾತ್ರವಲ್ಲ, ಮನಸು ಘಾಸಿಗೊಳ್ಳುವಂತೆ ಸಿನಿಮಾದಲ್ಲಿ ಕಟ್ಟಿಕೊಡಲಾಗಿತ್ತು.

ಇದೀಗ ಅದೇ ಕಾಶ್ಮೀರದ ಕರಾಳತೆಯನ್ನು ಬಿಚ್ಚಿಡುವ ದಿ ಕಾಶ್ಮೀರ ಸಾಂಗ್ ಆಲ್ಬಂ ಬಿಡುಗಡೆಯಾಗಿದೆ. ನಾಯಕ ಆದಿತ್ಯ ಇಪ್ಪತ್ತೈದು ವರ್ಷಗಳ ನಂತರ ತನ್ನ ತವರೂರು ಕಾಶ್ಮೀರಕ್ಕೆ ಬಂದಾಗ ಹಳೆಯ ನೆನೆಪುಗಳನ್ನು ಮೆಲುಕು ಹಾಕುತ್ತಾ ಸಾಗುವ ಕಾಶ್ಮೀರದ ಕರಾಳತೆ ಈ ಹಾಡಿನಲ್ಲಿದೆ. ಶೇಖರ್ ಅಸ್ತಿತ್ವ ಸಾಹಿತ್ಯದ ದಿ ಕಾಶ್ಮೀರ್ ಹಾಡಿಗೆ ವೀರ್ ಸಮರ್ಥ್ ಸಂಗೀತ ನೀಡುವುದರ ಜತೆಗೆ ಗೀತೆಗೆ ದನಿಯಾಗಿದ್ದಾರೆ.

ಕ್ರಿಶ್ ಜೋಷಿ ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಹಾಡಿನಲ್ಲಿ ಕೋವಿದ್ ಮಿತ್ತಲ್ ಹಾಗೂ ವೀರ್ ಸಮರ್ಥ್ ನಟಿಸಿದ್ದಾರೆ. ಮನು ಛಾಯಾಗ್ರಹಣ, ದೀಪಕ್.ಕೆ.ರಾಜು ಸಂಕಲನ ಈ ಹಾಡಿಗಿದ್ದು, ಕೆಎಂ ಮೀಡಿಯಾ ಪ್ರೊಡಕ್ಷನ್‌ನಲ್ಲಿ ಹಾಡು ನಿರ್ಮಾಣ ವಾಗಿದೆ. ಶೇಖರ್ ಅಸ್ತಿತ್ವ ಎರಡು ದಿನದಲ್ಲಿ ಸಾಹಿತ್ಯ ಬರೆದುಕೊಟ್ಟಿದ್ದಾರೆ. ಸಾಂಗ್ ಕೈಗೆ ಸಿಕ್ಕಿದ ಮೇಲೆ ಜೋಶ್ ಇನ್ನೂ ಹೆಚ್ಚಾ ಯಿತು. ಈ ಹಾಡನ್ನು ಮನಾಲಿಯಲ್ಲಿ ಶೂಟ್ ಮಾಡಬೇಕು ಎಂಬ ಯೋಚನೆ ಇತ್ತು. ಆದರೆ ಸಾಧ್ಯವಾಗಲಿಲ್ಲ. ಹಾಡು ಭಾವನಾತ್ಮಕವಾಗಿ ಮೂಡಿಬಂದಿದೆ ಎಂದರು ನಿರ್ದೇಶಕ ಕ್ರಿಶ್ ಜೋಷಿ.