Friday, 19th July 2024

ತತ್ವ ಆದರ್ಶದ ಗೋಪಾಲ ಗಾಂಧಿ

ಮಹಾತ್ಮ ಗಾಂಧೀಜಿ ಅವರ ಆದರ್ಶ ತತ್ವಗಳು, ಎಲ್ಲೆೆಡೆಯೂ ಪ್ರಚಲಿತದಲ್ಲಿದೆ. ಅವರ ಆದರ್ಶ ಹಾಗೂ ತತ್ವಗಳನ್ನ ಅಂದರೆ ಪರಿಸರ, ಶಿಕ್ಷಣ, ಸ್ವಚ್ಚತೆ, ಗ್ರಾಾಮ ನೈರ್ಮಲ್ಯ, ಸತ್ಯ, ಅಹಿಂಸೆ, ನ್ಯಾಾಯ, ಭ್ರಷ್ಟಾಾಚಾರ ನಿರ್ಮೂಲನೆ ಈ ಆಶಯಗಳನ್ನು ಚಿಕ್ಕವರಾಗಿದ್ದಾಾಗ ಅಳವಡಿಸಿಕೊಂಡರೆ, ಮಕ್ಕಳು ದೇಶದ ಆಸ್ತಿಿಯಾಗುವುದರಲ್ಲಿ ಅನುಮಾನವಿಲ್ಲ. ಇಂತಹ ಆಶಯಗಳನ್ನು ಹೊತ್ತ ಚಿತ್ರವೇ ‘ಗೋಪಾಲಗಾಂಧಿ’ ಕತೆಯಾಗಿದೆ. ಮತ್ತು ಬಾಪೂಜಿ ಇಂದಿಗೂ ಎಷ್ಟು ಪ್ರಸ್ತುತವೆಂದು ಚಿತ್ರದಲ್ಲಿ ಹೇಳಲಾಗಿದೆ. ಎರಡು ಪಾತ್ರಗಳು ಸಿನಿಮಾದಲ್ಲಿ ಎರಡು ಪಾತ್ರಗಳು ಪ್ರಮುಖವಾಗಿ ಬಿಂಬಿತವಾಗಿವೆ. ಸ್ವಾಾತಂತ್ರ ಹೋರಾಟಗಾರರು, ನಿವೃತ್ತ ಮುಖ್ಯ ಶಿಕ್ಷಕರು, ಸಾಹಿತಿಗಳು ಆದ ರಾಮಣ್ಣ ಮೇಷ್ಟು ಗಾಂಧೀಜಿ ಪ್ರತಿನಿಧಿಯಾಗಿ ಕಂಡರೆ, ದಲಿತ ಕುಟುಂಬದ ಕಲಾಸಕ್ತಿಿ ಇರುವ ಏಳನೇ ತರಗತಿ ವಿದ್ಯಾಾರ್ಥಿ ಗೋಪಾಲ ಪ್ರಸಕ್ತ ತಲೆಮಾರಿನ ಪ್ರತಿನಿಧಿಯಾಗಿ ಕಾಣುತ್ತಾಾನೆ. ಮಾಸ್ಟರ್ ಸಂಜಯ್‌ರಾವ್ ಈ ಚಿತ್ರದ ಮೂಲಕ ನಟನಾಗಿ ಗುರುತಿಸಿಕೊಳ್ಳುತ್ತಿದ್ದಾರೆ.

ಎರಡು ಹಾಡುಗಳಿಗೆ ಸಾಹಿತ್ಯ ಒದಗಿಸಿರುವ ಡಾ.ದೊಡ್ಡರಂಗೇಗೌಡರು ಶಿಕ್ಷಕರಾಗಿ ಕಾಣಿಸಿಕೊಂಡಿದ್ದಾಾರೆ. ತಾರಾಗಣದಲ್ಲಿ ಹೆಚ್‌ಎಂಟಿ ವಿಜಯ್, ಚನ್ನೆೆಗೌಡ, ಶ್ರುತಿವೀರೇಶ್, ರಾ.ಪ್ರವೀಣ್, ಡಾ.ಓಂಸತೀಶ್, ತೀರ್ಥಣ್ಣ, ರಮೇಶ್‌ಬಾಬು ಮುಂತಾದವರು ಅಭಿನಯಿಸಿದ್ದಾಾರೆ. ಅನಾಮಿಕ ಹಾಗೂ ಕಥೆಗಳು ಸಂಕಲನದಿಂದ ಆಯ್ಕೆೆ ಕತೆ ವಿರಚಿತ ನಾಗೇಶ್.ಎನ್ ಅವರು ನಿರ್ದೇಶನ, ಸಂಕಲನ, ಸಾಹಿತ್ಯ ಜೊತೆಗೆ ಸಣ್ಣ ಪಾತ್ರಕ್ಕೆೆ ಬಣ್ಣ ಹಚ್ಚಿಿದ್ದಾಾರೆ.

 

ನಾಲ್ಕು ಗೀತೆಗಳಿಗೆ ಇಂದೂವಿಶ್ವನಾಥ್ ಸಂಗೀತ, ನಾಗೇಶ್‌ನಾರಾಯಣ್ ಸಂಕಲನ, ಪಿವಿಆರ್.ಸ್ವಾಾಮಿ ಛಾಯಾಗ್ರಹಣವಿದೆ. ಜನರನ್ನು ಆಹ್ವಾಾನಿಸಲು ಮೊದಲ ಆಮಂತ್ರಣ ಧ್ವನಿಸಾಂದ್ರಿಿಕೆ. ಅದಕ್ಕೆೆಂದೇ ಮೊನ್ನೆೆ ನಡೆದ ಕಾರ್ಯಕ್ರಮದಲ್ಲಿ ಸಾಯಿಪ್ರಕಾಶ್, ಸುಚೇಂದ್ರಪ್ರಸಾದ್ ಮತ್ತು ಶಿಕ್ಷಕ ಪಾತ್ರದಾರಿ ಹಾಜರಿದ್ದು ಆಡಿಯೋ ಸಿಡಿಯನ್ನು ಲೋಕಾರ್ಪಣೆ ಮಾಡಿದರು. ಹಿರಿ ಮಗನನ್ನು ಕಲಾವಿದ ಮಾಡುವ ಸಲುವಾಗಿ ಎಸ್. ಅಶೋಕ್‌ರಾವ್ ನಿರ್ಮಾಣ ಮಾಡಿರುವ ಚಿತ್ರವು ಸದ್ಯದಲ್ಲೆೆ ಬಿಡುಗಡಯಾಗುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

error: Content is protected !!