ಉಪೇಂದ್ರ, ಆರ್.ಚಂದ್ರು ಕಾಂಬಿನೇಷನ್‌ದಲ್ಲಿ ವಿಭಿನ್ನತೆ, ವಿಶೇಷತೆ ಇರುವ ‘ಕಬ್ಜ’ ಚಿತ್ರವು ಕನ್ನಡ ಸೇರಿದಂತೆ ಏಲು ಭಾಷೆಗಳಲ್ಲಿ ತೆರೆಗೆ ಬರಲಿದೆ. ಈಗಾಗಲೇ ಚಿತ್ರದ ಮಹೂರ್ತ ಕೂಡ ನೆರವೇರಿದೆ. ಕತೆಯು 80ರ ದಶಕದ ಭೂಗತಲೋಕದ ಕುರಿತಾಗಿದೆ. ಹಾಗಂತ ಒಂದೇ ರಾಜ್ಯದ ಕತೆಯಾಗಿರದೆ ಎಲ್ಲಾಾ ಕಡೆ ಅನ್ವಯವಾಗುವಂತೆ ಚಿತ್ರಕತೆ ರೂಪಿಸಲಾಗಿದೆ. ‘ಹೊಸ ರೀತಿಯ ಭೂಗತಲೋಕದ ನೋಟ’ವೆಂದು ಇಂಗ್ಲೀಷ್ ಅಡಿಬರಹವಿದೆ. ಮೊದಲು ಒಂದು ಎಳೆಯನ್ನು ನಟ ಶಿವರಾಜ್‌ಕುಮಾರ್ ಅವರಿಗೆ ಹೇಳಿದಾಗ ಇದೊಂದು ಇಂಡಿಯನ್ ಸಿನಿಮಾವಾಗುತ್ತದೆಂದು ಪ್ರಶಂಸೆ ವ್ಯಕ್ತಿಿಪಡಿಸಿದ್ದರು. ನಂತರ ಉಪೇಂದ್ರ ಕೇಳಿ ಇವತ್ತಿಿನ ಟ್ರೆೆಂಡ್‌ಗೆ ಸರಿಹೊಂದುತ್ತದೆ ಮುಂದುವರಿಸಿ ಎಂದು ಹುರಿದುಂಬಿಸಿದ್ದಾಾರೆ. ಕನ್ನಡ-ತೆಲುಗು-ತಮಿಳು ಭಾಷೆಯಲ್ಲಿ ಚಿತ್ರೀಕರಣ ಗೊಳ್ಳುತ್ತದೆ. ಉಳಿದಂತೆ ಆಯಾ ಪ್ರಾಾದೇಶಿಕ ಭಾಷೆಯ ನಿರ್ಮಾಪಕರು ಡಬ್ಬಿಿಂಗ್ ಮಾಡಲು ಮುಂದೆ ಬಂದಿದ್ದಾಾರೆ. ಎಂದು ನಿರ್ದೇಶಕ-ನಿರ್ಮಾಪಕ ಚಂದ್ರು ಸಂತಸ ಹಂಚಿಕೊಂಡರು.
80ರ ಕಾಲಘಟ್ಟದ ಘಟನೆಗಳು ಚಿತ್ರದಲ್ಲಿದ್ದರೂ ಯಾವುದೇ ವ್ಯಕ್ತಿಿಗೆ ಸಂಬಂದಿಸಿರುವುದಿಲ್ಲ. ಒಂದಷ್ಟು ನೈಜ ಅಂಶಗಳನ್ನು ತೆಗೆದುಕೊಂಡು ಅದಕ್ಕೆೆ ಸಿನಿಮಾಟಿಕ್ ಸ್ಫರ್ಶವನ್ನು ಕೊಡಲಾಗುವುದು. ನೋಡುವವರಿಗೆ ಇದು ನಮ್ಮದೆ ಅಂತ ಭಾಸವಾಗುತ್ತದೆ. ಒಟ್ಟಾಾರೆ ಭೂಗತ ಜಗತ್ತಿಿಗೆ ಹೊಸ ಭಾಷ್ಯ ಬರೆಯಲಿದ್ದಾಾರಂತೆ. ‘ಕಬ್ಜ’ದಲ್ಲಿ ಉಪೇಂದ್ರ ಅವರೊಂದಿಗೆ ತೆಲುಗಿನ ಜಗಪತಿಬಾಬು ನಟಿಸುವುದು ಪಕ್ಕಾಾ ಆಗಿದೆ. ನಾನಾಪಾಟೇಕರ್, ನಾಯಕಿಯಾಗಿ ಕಾಜಲ್‌ಅಗರ್‌ವಾಲ್ ಅವರೊಂದಿಗೆ ಒಂದು ಸುತ್ತಿಿನ ಮಾತುಕತೆಯು ಫಲಪ್ರದವಾಗಿದೆ. ಕರ್ನಾಟಕದ ಸುಂದರ ತಾಣಗಳು, ಬಾಂಬೆ, ಮಧ್ಯಪ್ರದೇಶ ಮುಂತಾದ ಕಡೆ ಪಯಣ ಬೆಳೆಸಲು ಯೋಜನೆ ಹಾಕಲಾಗಿದೆ. ಉಪೇಂದ್ರ ಅವರು ಮೂರು ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳುತ್ತಿಿದ್ದಾಾರೆ.
ಛಾಯಾಗ್ರಹಣ ಎ.ಜೆ.ಶೆಟ್ಟಿಿ, ಕಲೆ ಶಿವಕುಮಾರ್, ಸಾಹಸ ರವಿವರ್ಮ,ರಾಮ್‌ಲಕ್ಷಣ್, ನೃತ್ಯ ರಾಜುಸುಂದರಂ, ಗಣೇಶ್‌ಆಚಾರ್ಯ, ಪ್ರಸಾಧನ ಸಿದ್ದೇಶ್, ಅಶೋಕ್, ಸುರೇಶ್, ಸಂಕಲನ ವಿನಯ್.ಎಂ.ಕುಮಾರ್ ನಿರ್ವಹಿಸುತ್ತಿಿದ್ದಾಾರೆ. ಕಂಠೀರವ ಸ್ಟುಡಿಯೋದಲ್ಲಿ ನಡೆದ ಅದ್ದೂರಿ ಮಹೂರ್ತ ಸಮಾರಂಭಕ್ಕೆೆ ಶಿವರಾಜ್‌ಕುಮಾರ್ ಮೊದಲ ದೃಶ್ಯಕ್ಕೆೆ ಕ್ಲಾಾಪ್ ಮಾಡಿ ಶುಭ ಹಾರೈಸಿದರು.