Sunday, 8th September 2024

ತೋತಾಪುರಿಯಲ್ಲಿ ನವರಸಗಳ ಸವಿ

ನವರಸ ನಾಯಕ ಜಗ್ಗೇಶ್ ಮೂರು ವರ್ಷಗಳ ಬಳಿಕ ನಗುವಿನ ಕಚಗುಳಿ ಇಡಲು ಬಂದಿ ದ್ದಾರೆ. ಈ ಬಾರಿ ತೋತಾಪುರಿ ಸವಿ ಯೊಂದಿಗೆ ಹಾಸ್ಯದ ಹೊನಲನ್ನೇ ಹರಿಸಲಿದ್ದಾರೆ. ಜಗ್ಗಣ್ಣ ಹಳ್ಳಿಯ ಮುಗ್ಧ ಈರೇಗೌಡನಾಗಿ ಕಾಮಿಡಿ ಕಮಾಲ್ ಮಾಡಲಿದ್ದಾರೆ.

ನೀರ್ ದೋಸೆ ಚಿತ್ರದ ಬಳಿಕ ನಿರ್ದೇಶಕ ವಿಜಯ ಪ್ರಸಾದ್ ಹಾಗೂ ಜಗ್ಗೇಶ್ ಒಂದಾಗಿದ್ದಾರೆ ಎಂದಾಗಲೇ ಚಿತ್ರದ ಬಗ್ಗೆ ನಿರೀಕ್ಷೆಯೂ ಹೆಚ್ಚಿತ್ತು. ಕುತೂಹಲವೂ ಮೂಡಿತ್ತು. ಅದರಂತೆ ಚಿತ್ರವೂ ಮೂಡಿಬಂದಿದೆ ಟ್ರೇಲರ್‌ನಲ್ಲಿ ಅದು ಸ್ಪಷ್ಟವಾಗಿದೆ. ನೈಜತೆಯ ನೆಲಗಟ್ಟು ನೈಜತೆಯ ಪ್ರತಿ ಬಿಂಬವೇ ತೋತಾಪುರಿ.

ಮನುಷ್ಯ ತನ್ನ ಜೀವನದಲ್ಲಿ ಏನೆಲ್ಲಾ ಮಾಡುತ್ತಾನೋ ಅದೆಲ್ಲವನ್ನು ತೆರೆಯಲ್ಲಿ ಹೇಳಲಾ ಗಿದೆ. ಆತನ ತಪ್ಪು ಒಪ್ಪುಗಳು ಆತನಿಗೆ ಮನವರಿಕೆಯಾಗುವಂತೆ ಚಿತ್ರದಲ್ಲಿ ಕಟ್ಟಿಕೊಡ ಲಾಗಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಇಲ್ಲಿ ನಿಜ ಜೀವನದ ಕಥೆಯೇ
ಅಡಕ ವಾಗಿದೆ ಎನ್ನುತ್ತಾರೆ ಜಗ್ಗಣ್ಣ.

ವಿಶೇಷವಾದ ಸಿನಿಮಾ

ವಿಜಯ ಪ್ರಸಾದ್ ಕ್ರಿಯಾಶಿಲ ನಿರ್ದೇಶಕ ಅವರ ಸಿನಿಮಾ ಎಂದ ಮೇಲೆ ಹೊಸತನ ಇದ್ದೇ ಇರುತ್ತದೆ. ಹಾಗಾಗಿ ನಾನು ಈ ಚಿತ್ರ ದಲ್ಲಿ ನಟಿಸಲು ಒಪ್ಪಿದಾಗ ಕಥೆಯನ್ನೇ ಕೇಳಲಿಲ್ಲ. ಯಾಕೆಂದರೆ ನಿರ್ದೇಶಕರ ಮೇಲೆ ನಂಬಿಕೆ ಇತ್ತು. ಹಾಗಾಗಿಯೇ ನಟಿಸಿದೆ. ಚಿತ್ರದಲ್ಲಿ ಎಲ್ಲರಿಗೂ ಅನ್ವಯವಾಗುವ ಕಥೆ ಇದೆ ಎಂದು ಜಗ್ಗೇಶ್ ಸಂತಸದಿಂದ ನುಡಿಯುತ್ತಾರೆ.

ತೋತಾಪುರಿಯಲ್ಲಿ ಅದಿತಿ ನಾಯಕಿಯಾಗಿ ನಟಿಸಿದ್ದಾರೆ. ಇದೇ ಮೊದಲ ಬಾರಿಗೆ ಮುಸಲ್ಮಾನ ಹುಡುಗಿಯಾಗಿ ವಿಶೇಷ
ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಡಬಲ್ ಮೀನಿಂಗ್ ಡೈಲಾಗ್ ಹೊಡೆದು ರಂಜಿಸಿದ್ದಾರೆ. ಅದಿತಿಗೆ ಈ ಪಾತ್ರ ಬಲು 
ಅಚ್ಚುಮೆಚ್ಚಾಗಿದೆಯಂತೆ. ಈ ಸಂತಸವನ್ನು ವಿ.ಸಿನಿಮಾಸ್‌ನೊಂದಿಗೆ ಹಂಚಿಕೊಂಡಿದ್ದಾರೆ.

ವಿ.ಸಿ : ತೋತಾಪುರಿ ಚಿತ್ರವನ್ನು ಒಪ್ಪಿಕೊಳ್ಳಲು ಕಾರಣ?
ಅದಿತಿ : ಬಜಾರ್ ಸಿನಿಮಾದಲ್ಲಿ ನಟಿಸಿದ ಬಳಿಕ ನನಗೆ ಯಾವ ದೊಡ್ಡ ಪ್ರೊಡಕ್ಷನ್‌ನ ಸಿನಿಮಾದಲ್ಲಿ ನಟಿಸುವ ಅವಕಾಶ ಬಂದಿರಲಿಲ್ಲ. ಹೀಗಿರು ವಾಗಲೇ ಒಂದು ದಿನ ನಿರ್ದೇಶಕ ವಿಜಯ ಪ್ರಸಾದ್ ಕರೆ ಮಾಡಿ ತಮ್ಮ ಚಿತ್ರದ ಬಗ್ಗೆ ಹೇಳಿದರು. ಅದನ್ನು ಕೇಳಿ ಖುಷಿಯಾಯಿತು. ಕಥೆ ಕೇಳಿ ಬಲು ಮೆಚ್ಚುಗೆಯಾಯಿತು. ಅದರಲ್ಲೂ ದೊಡ್ಡ ನಿರ್ದೇಶಕರು, ಅವರ ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿದ್ದು ಖುಷಿಯಾಯಿತು. ನಟಿಸಲು ಸಂತಸ ದಿಂದಲೇ ಒಪ್ಪಿದೆ.

ವಿ.ಸಿ : ತೋತಾಪುರಿಯಲ್ಲಿ ನಿಮ್ಮ ಪಾತ್ರ ?
ಅದಿತಿ : ಈ ಚಿತ್ರದಲ್ಲಿ ನಾನು ಡೀಸೆಂಟ್ ಮುಸ್ಲಿಂ ಹುಡುಗಿಯಾಗಿ ನಟಿಸಿದ್ದು, ಶಕಿಲಾ ಭಾನು ಎಂಬ ಪಾತ್ರದಲ್ಲಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಮಧ್ಯಮ ವರ್ಗದ ತುಂಬು ಕುಟುಂಬದ ಹೆಣ್ಣು ಮಗಳಾಗಿ ಅಭಿನಯಿಸಿದ್ದೇನೆ. ನಿಜವಾಗಿಯೂ ಚಿತ್ರತಂಡವೇ ನನ್ನ ಕಟುಂಬ ಎಂಬಂತೆ ಭಾಸವಾಗುತ್ತಿತ್ತು. ನನಗೆ ಹಿಂದಿನಿಂದಲೂ ವಿಭಿನ್ನ ಪಾತ್ರದಲ್ಲಿ ನಟಿಸಬೇಕು ಎಂಬ ಆಸೆಯಿತ್ತು. ಅದು ಈ ಚಿತ್ರದ ಮೂಲಕ ಈಡೇರಿದೆ.

ವಿ.ಸಿ : ಜಗ್ಗೇಶ್ ಅವರೊಂದಿಗೆ ನಟಿಸಿದ ಅನುಭವ ಹೇಗಿತ್ತು ?
ಅದಿತಿ : ಜಗ್ಗೇಶ್ ಸರ್ ಪಾಸಿಟವ್ ವೈಬ್ಸ್ ಇರುವ ವ್ಯಕ್ತಿ, ಅವರು ಪ್ರಬುದ್ಧ ನಟರು. ಅವರ ಜತೆ ನಟಿಸಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಅವರೊಂದಿಗೆ ನಟಿಸಿದ ಮೇಲೆ ನನ್ನ ಬಗ್ಗೆ ನನಗೆ ನಂಬಿಕೆ ಜಾಸ್ತಿಯಾಗಿದೆ. ಎಂತಹ ಪಾತ್ರ ನೀಡಿದರೂ ಲೀಲಾ ಜಾಲವಾಗಿ ಅಭಿಯಿಸಬಹುದು.

ವಿ.ಸಿ : ಚಿತ್ರದಲ್ಲಿ ಡಬಲ್ ಮೀನಿಂಗ್ ಡೈಲಾಗ್ ಗಳೆ ಹೆಚ್ಚಾಗಿವೆಯಲ್ಲ?
ಅದಿತಿ : ಚಿತ್ರದಲ್ಲಿ ಕೆಲವು ಸಂಭಾಷಣೆಗಳು ಡಬ್ಬಲ್ ಮೀನಿಂಗ್ ಅಂತ ಅನ್ನಿಸಬಹುದು. ಆ ಬಳಿಕ ಬರುವ ಸಂಭಾಷಣೆಗಳು
ಮೌಲ್ಯಯುತವಾಗಿವೆ. ವ್ಯಕ್ತಿತ್ವಕ್ಕೆ ಪೂರಕಾದ ಸಂಭಾಷಣೆಯೂ ಇದ್ದು, ಅವು ಬದುಕಿಗೆ ಅಗತ್ಯವಾದ ಮಾತುಗಳಾಗಿವೆ.

ವಿ.ಸಿ : ಸಿನಿಮಾದ ಹಾಡಿನ ಬಗ್ಗೆ ಹೇಳುವುದಾದರೆ ?
ಅದಿತಿ : ಹಾಡುಗಳೆ ಚಿತ್ರದ ಆಹ್ವಾನ ಪತ್ರಿಕೆಯಂತೆ. ಬಾಗ್ಲು ತೆರಿ ಮೇರಿ ಜಾನ್.. ಹಾಡನ್ನು ಎಲ್ಲರೂ ಮೆಚ್ಚಿದ್ದಾರೆ. ಈ ಹಾಡಿನ
ಚಿತ್ರೀಕರಣ ಮಾಡುವಾಗಲೇ ಖಂಡಿತಾ ಈ ಹಾಡನ್ನು ಪ್ರೇಕ್ಷಕರು ಪ್ರೀತಿಯಿಂದ ಸ್ವೀಕರಿಸುತ್ತಾರೆ ಅನ್ನಿಸಿತ್ತು. ನಮ್ಮ ನಿರೀಕ್ಷೆಗೂ ಮೀರಿ ಹಾಡು ಹಿಟ್ಟಾಗಿದೆ. ಇದು ನಮಗೂ ಸಂತಸ ತಂದಿದೆ.

error: Content is protected !!