Friday, 13th December 2024

ಐದು ಭಾಷೆಗಳಲ್ಲಿ ತೋತಾಪುರಿ

ನಿರ್ದೇಶಕ ವಿಜಯ್ ಪ್ರಸಾದ್ ಹಾಗೂ ನವರಸ ನಾಯಕ ಜಗ್ಗೇಶ್ ನೀರ್ ದೋಸೆ ಚಿತ್ರದ ಬಳಿಕ ಮತ್ತೆ ಒಂದಾಗಿದ್ದಾರೆ. ಈ ಬಾರಿಯೂ ಪ್ರೇಕ್ಷಕರಿಗೆ ಕಾಮಿಡಿ ಕಚಗುಳಿ ಇಡಲಿದ್ದಾರೆ.

ಈಗಾಗಲೇ ಚಿತ್ರೀಕರಣ ಮುಗಿಸಿರುವ ತೋತಾಪುರಿ ಚಿತ್ರತಂಡ ಬಹುತೇಕ ಎಲ್ಲಾ ಕಾರ್ಯ ಗಳನ್ನು ಪೂರ್ಣಗೊಳಿಸಿದ್ದು, ಇನ್ನೇನು ಬಿಡುಗಡೆಯ ದಿನಾಂಕವನ್ನು ಘೋಷಿಸಲಿದೆ. ಅದಕ್ಕೂ ಮೊದಲೇ ಸಿನಿಪ್ರಿಯರಿಗೆ ಸರ್‌ಪ್ರೈಸ್ ನೀಡಿದೆ. ಅದು ತೋತಾಪುರಿ ಐದು ಭಾಷೆ ಗಳಲ್ಲಿ ಬರಲಿದೆ ಎನ್ನುವುದು. ಹೌದು ಕನ್ನಡ, ತೆಲುಗು, ತಮಿಳು ಹಿಂದಿ ಹಾಗೂ ಮಲ ಯಾಳಂನಲ್ಲಿ ಚಿತ್ರ ತೆರೆಗೆ ಬರಲಿದೆ. ಈ ಬಗ್ಗೆ ಪೋಸ್ಟರ್‌ವೊಂದನ್ನು ಬಿಡುಗಡೆ ಮಾಡಿ ರುವ ಚಿತ್ರತಂಡ ‘ದೇವ್ರಾಣೆಗು ನಮ್ದು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ, ನಮ್ದು ಬರೀ ಸಿನಿಮಾ.

ದೃಷ್ಟಿ ಬಿದ್ರು ಪರ್ವಾಗಿಲ್ಲ ಆದ್ರೆ ವಕ್ರ ದೃಷ್ಠಿ ಬೀಳ್ದೇ ಇರ‍್ಲಿ’ ಎಂದು ಪೋಸ್ಟರ್‌ನಲ್ಲಿ ಬರೆದುಕೊಂಡಿದೆ. ಇದನ್ನು ನೋಡಿದ ಸಿನಿಪ್ರಿಯರ ತಲೆಯಲ್ಲಿ ಹುಳಬಿಟ್ಟ ಹಾಗಾಗಿದೆ. ಪ್ಯಾನ್ ಇಂಡಿಯಾ ಚಿತ್ರಗಳ ಬಗ್ಗೆ ಈ ಹಿಂದೆ ಜಗ್ಗೇಶ್ ಗರಂ ಆಗಿದ್ದರು. ಹಾಗಾಗಿ ತೋತಾಪುರಿ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ ಎಂಬುದಾಗಿ ಚಿತ್ರತಂಡ ಹೇಳಿದೆ. ತೋತಾಪುರಿ ಎರಡು ಭಾಗದಲ್ಲಿ ಮೂಡಿಬರಲಿದ್ದು, ಮೊದಲ ಭಾಗ ತೆರೆಗೆ ಬಂದ ಬಳಿಕ ಎರಡನೇ ಭಾಗದ ಚಿತ್ರೀಕರಣ ಆರಂಭ ವಾಗಲಿದೆ.

ತೋತಾಪುರಿ ರೊಮ್ಯಾಂಟಿಕ್ ಕಾಮಿಡಿ ಸಿನಿಮಾವಾಗಿದ್ದು, ಚಿತ್ರದಲ್ಲಿ ಜಗ್ಗೇಶ್ ರೈತನ ಪಾತ್ರದಲ್ಲಿ ನಟಿಸಿದ್ದಾರೆ. ಜಗ್ಗಣ್ಣನಿಗೆ ಜತೆಯಾಗಿ ಅದಿತಿ ಪ್ರಭುದೇವ ಬಣ್ಣಹಚ್ಚಿದ್ದು ಮುಸ್ಲಿಂ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಡಾಲಿ ಧನಂಜಯ ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಸುಮನ್ ರಂಗನಾಥ್, ವೀಣಾ ಸುಂದರ್ ದತ್ತಣ್ಣ ಮತ್ತಿತರರು ಚಿತ್ರದ ತಾರಾ ಬಳಗದಲ್ಲಿದ್ದಾರೆ. ಅನೂಪ್ ಸೀಳೀನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಕೆ.ಎ.ಸುರೇಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದು ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.