Sunday, 15th December 2024

ತ್ರಿವಿಕ್ರಮನಾಗಿ ಅಬ್ಬರಿಸಿದ ವಿಕ್ರಮ್‌

ಪ್ರಶಾಂತ್.ಟಿ.ಆರ್

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್, ತ್ರಿವಿಕ್ರಮನಾಗಿ ಅಬ್ಬರಿಸುತ್ತಿದ್ದಾರೆ. ಚೊಚ್ಚಲ ಚಿತ್ರದಲ್ಲಿಯೇ ಆಕ್ಷನ್, ಸೆಂಟಿಮೆಂಟ್ ಮೂಲಕವೇ ಗಮನ ಸೆಳೆಯುತ್ತಿದ್ದಾರೆ. ಟೀಸರ್, ಹಾಡುಗಳಲ್ಲೆ ಗಮನಸೆಳೆದಿರುವ ತ್ರಿವಿಕ್ರಮ ಈಗಾ ಗಲೇ ಪ್ರೇಕ್ಷಕರ ಮನಗೆದ್ದಿದೆ. ಹಾಗಾಗಿಯೇ ಸಿನಿ ಪ್ರಿಯರು ಕೂಡ ತ್ರಿವಿಕ್ರಮನನ್ನು ಆತ್ಮಿಯ ವಾಗಿಯೇ ಬರಮಾಡಿ ಕೊಂಡಿದ್ದಾರೆ. ವಿಕ್ಕಿ ಕೂಡ ಚಿತ್ರದಲ್ಲಿ ಮೆಚ್ಚುವ ಅಭಿನಯ ತೋರಿ ದ್ದಾರೆ. ಚಿತ್ರಕ್ಕಾಗಿ ಅಗತ್ಯ ತಯಾರಿ ಮಾಡಿ ಕೊಂಡಿದ್ದು ಅಕ್ಷರಶಃ ಮಿಂಚಿದ್ದಾರೆ. ತಮ್ಮ ಚೊಚ್ಚಲ ಚಿತ್ರದ ಬಗ್ಗೆ ವಿಕ್ರಮ್ ವಿ.ಸಿನಿಮಾಸ್‌ನೊಂದಿಗೆ ಮಾತನಾಡಿ ದ್ದಾರೆ.

ವಿ.ಸಿನಿಮಾಸ್: ತ್ರಿವಿಕ್ರಮ ಆಕ್ಷನ್ ಹಾಗೂ ಸೆಂಟಿಮೆಂಟ್‌ಗೆ ಸೀಮಿತವಾಗಿದೆಯೆ?
ವಿಕ್ರಮ್: ತ್ರಿವಿಕ್ರಮ ಲವ್, ಆಕ್ಷನ್, ಸೆಂಟಿಮೆಂಟ್, ಫ್ಯಾಮಿಲಿ ಎಂಟರ್‌ಟೇನ್‌ಮೆಂಟ್ ಎಲ್ಲವನ್ನೂ ಒಳಗೊಂಡಿದೆ. ಚಿತ್ರದಲ್ಲಿ ಮಧ್ಯಮ ವರ್ಗದ ಯುವಕನ ಹೋರಾಟದ ಕಥನವಿದೆ. ಅದು ಪ್ರೀತಿಗಾಗಿ ಇರಬಹುದು, ಉತ್ತಮ ಬದುಕು ಕಟ್ಟಿಕೊಳ್ಳಲು ಇರಬಹುದು. ಅದನ್ನು ತೆರೆ ಯಲ್ಲಿ ನೋಡಿದರೆ ಸ್ಪಷ್ಟವಾಗುತ್ತದೆ.

ಅದಕ್ಕೂ ಹೆಚ್ಚಾಗಿ ತೆರೆಯಲ್ಲಿ ನಮ್ಮನ್ನು ನಾವು ಕಂಡುಕೊಳ್ಳಬಹುದು. ನಮ್ಮ ಜೀವನದಲ್ಲಿ ನಡೆದ, ನಡೆಯುತ್ತಿರುವ ಘಟನೆಗಳು ತೆರೆಯಲ್ಲಿ ಹಾದು ಹೋಗುತ್ತವೆ. ಹಾಗಾಗಿ ತ್ರಿವಿಕ್ರಮ ಪ್ರತಿಯೊಬ್ಬರಿಗೂ ಹತ್ತಿರವಾದ ಕಥೆಯನ್ನು ಒಳಗೊಂಡಿದೆ.

ವಿ.ಸಿ: ನಿಮ್ಮದು ಶ್ರೀಮಂತ ಕುಟುಂಬ, ಆದರೂ ಮಧ್ಯಮ ವರ್ಗದ ಹುಡುಗನ ಕಥೆಗೆ ಹೇಗೆ ಹೊಂದಿಕೊಂಡಿರಿ?
ವಿಕ್ರಮ್: ನಾನು ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದು, ಬೆಳೆದ್ದು ಸತ್ಯ. ಆದರೆ ನಮ್ಮ ಅಪ್ಪ ಜೀವನ ಎಂದರೆ ಏನು ಎಂಬುದನ್ನು ಕಲಿಸಿಕೊಟ್ಟರು. ನಮಗೆ ಬಯಸಿದ್ದೆಲ್ಲಾ ಸುಲಭವಾಗಿ ಸಿಗದೆ, ಅದಕ್ಕಾಗಿ ಎಷ್ಟು ಶ್ರಮಿಸಬೇಕು, ಹೇಗೆ ಉತ್ತಮ ಜೀವನ ಕಟ್ಟಿಕೊಳ್ಳ ಬೇಕು ಎಂಬ ಮಾರ್ಗದರ್ಶನ ನೀಡಿದರು. ಅದೇ ಮಾರ್ಗದಲ್ಲಿ ನಡೆಸಿದರು.

ಹಾಗಾಗಿ ನಮ್ಮ ಸಮಾಜದಲ್ಲಿ ಮಧ್ಯಮ ವರ್ಗದ ಕುಟುಂಬದ ಬದುಕು, ಬವಣೆ ಹೇಗಿರುತ್ತದೆ ಎಂಬುದನ್ನು ಬಲ್ಲೆ. ಎದುರಾದ ಸವಾಲುಗಳನ್ನು ಎದುರಿಸಿ ಉತ್ತಮ ಜೀವನ ರೂಪಿಸಿಕೊಳ್ಳಲು ಮಧ್ಯಮ ವರ್ಗದವರು ಸಿದ್ಧವಾಗಿರುತ್ತಾರೆ. ಈ ಚಿತ್ರದಲ್ಲಿ ನೈಜವಾದ ವಿಕ್ಕಿಯನ್ನು ಕಾಣಬಹು ದಾಗಿದೆ.

ವಿ.ಸಿ: ಈ ರೀತಿಯ ಕಥೆಯ ಮೂಲಕವೇ ಚಂದನವನಕ್ಕೆ ಬರಬೇಕು ಎಂಬ ಆಸೆಯಿತ್ತೆ?
ವಿಕ್ರಮ್: ಸಿನಿಮಾರಂಗಕ್ಕೆ ಬರಬೇಕು ಎಂಬ ಆಸೆಯಿತ್ತು. ಅದಕ್ಕಾಗಿ ಒಳ್ಳೆಯ ಕಥೆಯ ಹುಡುಕಾಡದಲ್ಲಿದ್ದೆ. ಅದರಲ್ಲೂ ಪ್ರೇಕ್ಷಕರಿಗೆ ಹಿಡಿಸುವ, ನಿಜ ಜೀವನಕ್ಕೆ ಹತ್ತಿರವಾದ ಕಥೆಯ ಮೂಲಕವೇ ಚಂದನವನಕ್ಕೆ ಬರಬೇಕು ಎಂದುಕೊಂಡಿದ್ದೆ. ಅದೇ ಸಮಯಕ್ಕೆ ತ್ರಿವಿಕ್ರಮನ ಕಥೆ ಕೇಳಿದೆ. ಕಥೆ ತುಂಬಾ ಮೆಚ್ಚುಗೆಯಾಯಿತು. ನಟಿಸಲು ಒಪ್ಪಿದೆ.

ವಿ.ಸಿ: ಚೊಚ್ಚಲ ಚಿತ್ರಕ್ಕೆ ತಯಾರಿ ಹೇಗಿತ್ತು?
ವಿಕ್ರಮ್: ಚಿತ್ರದ ಕಥೆ ಕೇಳಿದ ಮೇಲೆ ನಿರ್ದೇಶಕರು ಹೇಳಿದಂತೆ ತಯಾರಿ ನಡೆಸಿದೆ. ಹಿಂದಿನಿಂದಲೂ ಅಭಿನಯ ತರಂಗದಲ್ಲಿ ನಟನೆಯ ಬಗ್ಗೆ ಒಂದಷ್ಟು ಕಲಿತ್ತಿದ್ದೆ. ಆಕ್ಷನ್, ಡ್ಯಾನ್ಸ್ ಬಗ್ಗೆ ತರಬೇತಿ ಪಡೆದು ಅಭಿನಯಿಸಲು ಸಿದ್ಧವಾದೆ. ಚಿತ್ರಕ್ಕೆ ಹಿರಿಯರ ಸಹಕಾರ ಸಿಕ್ಕಿತು. ಹಾಗಾಗಿ ಅಂದುಕೊಂಡಂತೆ ಚಿತ್ರ ಮೂಡಿಬಂದಿದೆ.

ವಿ.ಸಿ: ಸಿನಿಮಾದ ಬಗ್ಗೆ ನಿರೀಕ್ಷೆ ಹೇಗಿದೆ ?
ವಿಕ್ರಮ್: ಇದು ನನ್ನ ಮೊದಲ ಸಿನಿಮಾ. ಕಥೆಗೆ ತಕ್ಕಂತೆ ನಟಿಸಿದ್ದೇನೆ. ಪ್ರೇಕ್ಷಕರು ನಮ್ಮ ಕೈ ಹಿಡಿಯುತ್ತಾರೆ ಎಂಬ ನಂಬಿಕೆ ನನಗಿದೆ.

***

ನಗೂ ಅಪ್ಪನ ಥರ ನಟಿಸಬೇಕು ಎಂಬ ಬಹಳ ಆಸೆ ಇದೆ. ಚಿತ್ರಕ್ಕಾಗಿ ಅವರ ಸಲಹೆ ಕೇಳಿದೆ. ಅವರು ಹೇಳಿದ್ದು ಒಂದೇ ಮಾತು, ಸಿನಿಮಾ ಒಪ್ಪಿಕೊಂಡಿದ್ದೀಯಾ ಮಾಡುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡು. ಶ್ರಮವಹಿಸಿದರೆ ಖಂಡಿತಾ ಗೆಲವು ಸಾಧ್ಯ ಎಂದು ಸಲಹೆ ನೀಡಿದ್ದರು.

***

ಅಭಿನಯ ತರಂಗದಲ್ಲಿ ನಟನೆಯ ಬಗ್ಗೆ ಕಲಿತೆ. ಆಕ್ಷನ್, ಡ್ಯಾನ್ಸ್ ಬಗ್ಗೆ ತರಬೇತಿ ಪಡೆದು ಅಭಿನಯಿಸಲು ಸಿದ್ಧವಾದೆ.