Thursday, 12th December 2024

ವಾಮನ ತಂಡ ಸೇರಿದ ಸಂಪತ್‌

ಧನ್ವೀರ್ ನಟಿಸುತ್ತಿರುವ ವಾಮನ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಈಗಾಗಲೇ ಎರಡು ಹಂತದ ಶೂಟಿಂಗ್ ಮುಗಿಸಿರುವ ಚಿತ್ರತಂಡ ಈಗ ಮೂರನೇ ಹಂತದ ಚಿತ್ರೀಕರಣದಲ್ಲಿ ಬ್ಯುಸಿ ಯಾಗಿದೆ.

ಇದೀಗ ವಾಮನ ಬಳಗಕ್ಕೆ ಮತ್ತೊಬ್ಬ ಸದಸ್ಯ ಎಂಟ್ರಿ ಕೊಟ್ಟಿದ್ದಾರೆ. ಬಹುಭಾಷಾ ನಟ ಸಂಪತ್ ವಾಮನ ತಂಡ ಸೇರಿ ಕೊಂಡಿದ್ದಾರೆ. ವಾಮನ ಚಿತ್ರದಲ್ಲಿ ಸಂಪತ್ ಖಳನಾಯಕನಾಗಿ ಬಣ್ಣ ಹಚ್ಚಿದ್ದಾರೆ. ಇಡೀ ಮಾಫಿಯಾವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಅತ್ಯಂತ ಕ್ರೂರಿಯಾಗಿ ಬದುಕುವ ವಿಲನ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೂರು ಶೇಡ್‌ನಲ್ಲಿ ಸಂಪತ್
ಅಬ್ಬರಿಸಲಿದ್ದಾರೆ.

ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿ ಬರಹಗಾರನಾಗಿ, ಸಂಭಾಷಣಾಕಾರನಾಗಿ ಗುರುತಿಸಿ ಕೊಂಡಿರುವ ಎಸ್.ಶಂಕರ್ ರಾಮನ್, ವಾಮನ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈಕ್ವಿನಾಕ್ಸ್ ಗ್ಲೋಬಲ್ ಎಂಟರ್‌ಟೇನ್‌ಮೆಂಟ್ ಬ್ಯಾನರ್‌ನಲ್ಲಿ ಚೇತನ್ ಗೌಡ ಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ. ಸಾಹಸ ಪ್ರಧಾನ ಕಥೆಯ ವಾಮನ ಚಿತ್ರದಲ್ಲಿ ಧನ್ವೀರ್ ಆಕ್ಷನ್ ಲುಕ್‌ನಲ್ಲಿ ಮಿಂಚ ಲಿದ್ದಾರೆ. ರಚನಾ ರೈ ನಾಯಕಿಯಾಗಿ ನಟಿಸುತ್ತಿದ್ದಾರೆ.

ಮಹೇನ್ ಸಿಂಹ ಛಾಯಾಗ್ರಾಹಣ, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಸುರೇಶ್ ಆರ್ಮುಗಂ ಸಂಕಲನ, ಅರ್ಜುನ್ ರಾಜ್, ಜಾಲಿ ಬಾಸ್ಟಿನ್ ಸಾಹಸ ಈ ಸಿನಿಮಾಕ್ಕಿದೆ. ಈಗಾಗಲೇ ರಿಲೀಸ್ ಆಗಿರುವ ಚಿತ್ರದ ಪೋಸ್ಟರ್ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.