Thursday, 12th December 2024

ವಿಕ್ರಾಂತ್‌ ರೋಣ – ರಿಲೀಸ್ ಡೇಟ್ ಫಿಕ್ಸ್, ಫೆ.24ಕ್ಕೆ ತೆರೆಗೆ

ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ವಿಕ್ರಾಂತ್ ರೋಣ ಚಿತ್ರದ ಬಿಡುಗಡೆಗೆ ಯಾವಾಗ ಎಂಬ ಪ್ರಶ್ನೆ ಸಿನಿಪ್ರಿಯರಲ್ಲಿತ್ತು. ಅದಕ್ಕಾಗಿ ಬಹುದಿನ ಗಳಿಂದ ಕಾದುಕುಳಿತ್ತಿದ್ದರು.

ಕರೋನಾ ಹಿನ್ನೆಲೆಯಲ್ಲಿ ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆಯಾಗಿರಲಿಲ್ಲ. ಆದರೂ ಚಿತ್ರತಂಡದಿಂದ ಯಾವುದಾದರೂ ಸಿಹಿಸುದ್ಧಿ ಸಿಗಬ ಹುದೇ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಅಂತೂ ಸಿನಿಮಾ ಬಿಡು ಗಡೆಯ ದಿನಾಂಕ ಘೋಷಣೆಯಾಗಿದೆ. ವಿಕ್ರಾಂತ್ ರೋಣ 2022 ರ ಫೆಬ್ರವರಿ 24 ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

ಈ ಸುದ್ಧಿಯನ್ನು ಚಿತ್ರತಂಡ ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗಪಡಿಸಿದೆ. ವಿಕ್ರಾಂತ್ ರೋಣ ಆರಂಭ ದಿಂದಲೂ ಸದ್ದು ಮಾಡುತ್ತಲೇ ಇದೆ. ಪೋಸ್ಟರ್, ಗ್ಲಿಂಫ್ ಟೀಸರ್ ಮೂಲಕವೇ ಕುತೂಹಲ ಕೆರಳಿಸಿದೆ. ಜತೆಗೆ ನಿರ್ದೇಶಕರು ಚಿತ್ರದ ಪ್ರತಿ ಪಾತ್ರದ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚುವಂತೆ ಮಾಡಿದ್ದರು. ಅದರಲ್ಲೂ ಕಿಚ್ಚ ಸುದೀಪ್ ಬರ್ತ್‌ಡೇಗೆ ರಿಲೀಸ್ ಆದ ಗ್ಲಿಂಪ್ಸ್ ಟೀಸರ್ ವಿಕ್ರಾಂತ್ ರೋಣನ ಬಗ್ಗೆ ನಿರೀಕ್ಷೆ ಇಮ್ಮಡಿಗೊಳ್ಳುವಂತೆ ಮಾಡಿತು.

ಸದ್ಯ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡಲು ವಿಕ್ರಾಂತ್ ರೋಣ ತಂಡ ಒಂದು ಟೀಸರ್ ಬಿಡುಗಡೆ ಮಾಡಿದೆ. ಈ ಟೀಸರ್‌ನಲ್ಲಿ ಕಿಚ್ಚ ಸುದೀಪ್ ಬೈಕ್‌ನಲ್ಲಿ ಕುಳಿತು ಖಡಕ್ ಲುಕ್‌ನಲ್ಲಿ ಮಿಂಚಿದ್ದಾರೆ. ದಟ್ಟ ಕಾನನದ ಹಿನ್ನೆಲೆಯಲ್ಲಿ ಚಿತ್ರದ ಕಥೆ ಸಾಗಲಿದೆ ಎಂಬುದನ್ನು ಈ ಟೀಸರ್ ಖಚಿತ ಪಡಿಸು ತ್ತದೆ. ಈ ಜಗತ್ತಿಗೆ ಹೊಸ ಹೀರೋ ಸಿಗಲಿದ್ದಾನೆ ಎಂಬ ಕ್ಯಾಪ್ಷನ್ ಕೂಡ ಟೀಸರ್‌ನಲ್ಲಿ ಗಮನ ಸೆಳೆಯುತ್ತದೆ. ವಿಶೇಷ ಎಂದರೆ ವಿಕ್ರಾಂತ್ ರೋಣ ತ್ರಿಡಿಯಲ್ಲಿ ಮೂಡಿ ಬರಲಿದೆ.

ರಂಗಿತರಂಗ ಖ್ಯಾತಿಯ ನಿರ್ದೇಶಕ ಅನೂಪ್ ಭಂಡಾರಿ, ವಿಕ್ರಾಂತ್ ರೋಣನಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಹೈಬಜೆಟ್ ಚಿತ್ರ ಇದಾಗಿದ್ದು, ಅದ್ದೂರಿಯಾಗಿ ಸಿನಿಮಾ ಮೂಡಿಬಂದಿದೆ. ಜಾಕ್‌ಮಂಜುನಾಥ್ ಹಾಗೂ ಅಲಂಕಾರ್ ಪಾಂಡಿಯನ್  ಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ. ಈ ಚಿತ್ರಕ್ಕಾಗಿ ಹೈದರಾಬಾದ್‌ನಲ್ಲಿ ಬೃಹತ್ ಕಾಡಿನ ಸೆಟ್ ಹಾಕಿ ಅಲ್ಲಿಯೇ ಚಿತ್ರೀಕರಣ ನಡೆಸಲಾಗಿದೆ. ಚಿತ್ರದ ಪ್ರತಿ ಸನ್ನಿವೇಶವೂ ಅದ್ಭುತವಾಗಿ ಮೂಡಿಬಂದಿವೆ. ನಿರೂಪ್ ಭಂಡಾರಿ ಕೂಡ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ನೀತಾ ಅಶೋಕ್, ನಿರೂಪ್ ಜತೆಯಾಗಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫೆರ್ನಾಂಡಿಸ್ ಈ ಚಿತ್ರದ ವಿಶೇಷ ಪಾತ್ರದಲ್ಲಿ ನಟಿಸಿದ್ದು, ಗಡಂಗ್ ರಕ್ಕಮ್ಮ ಎಂಬ ಪಾತ್ರದಲ್ಲಿ ಗಮನಸೆಳೆಯಲಿದ್ದಾರೆ. ಜತೆಗೆ ಒಂದು ಸ್ಪೆಷಲ್ ಹಾಡಿನಲ್ಲಿ ಕಿಚ್ಚನ ಜತೆ ಸೊಂಟ ಬಳುಕಿಸಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾವಾಗಿರುವ ವಿಕ್ರಾಂತ್ ರೋಣ ಕನ್ನಡ, ತೆಲುಗು, ತಮಿಳು, ಹಿಂದಿ ಮಲಯಾಳಂ ಸೇರಿದಂತೆ ಸುಮಾರು ಹತ್ತೊಂಬತ್ತು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.