Sunday, 24th November 2024

ಮಧುರ ಬಾಂಧವ್ಯದ ಸುಂದರ ಪಯಣ – ವಿಕಿಪೀಡಿಯ

ವಿಭಿನ್ನ ಶೀರ್ಷಿಕೆಯ ವಿಕಿಪೀಡಿಯ ತೆರೆಗೆ ಬಂದಿದೆ. ಟೈಟಲ್ ಕೇಳಲು ಹಿತವಾಗಿದೆ. ಅಂತೆಯೇ ಚಿತ್ರದ ಕಥೆಯಲ್ಲಿ ಗಟ್ಟಿತನವಿದೆ. ಸುಮಧುರ ಬಾಂಧವ್ಯದ ಸುಂದರ ಪಯಣ ತೆರೆಯಲ್ಲಿ ಸಾಗುತ್ತದೆ. ವಿಕಿಪೀಡಿಯ ವೀಕ್ಷಿಸುತ್ತಾ, ಕಳೆದ ದಿನಗಳ ಆ ಸವಿ ನೆನಪನ್ನು ಮೆಲುಕು ಹಾಕಬಹುದಾಗಿದೆ. ವಿಕಿಪೀಡಿಯ ಚಿತ್ರದ ಬಗ್ಗೆ ನಟ ಯಶವಂತ್ ವಿ.ಸಿನಿಮಾಸ್ ನೊಂದಿಗೆ ಮಾತನಾಡಿ ದ್ದಾರೆ.

ವಿ.ಸಿ : ವಿಕಿಪೀಡಿಯ ನಾಯಕನ ಪರಿಚಯದ ಕಥೆಯೆ ?
ಯಶವಂತ್ : ಖಂಡಿತಾ ಇಲ್ಲ. ಇಲ್ಲಿ ಸುಂದರ ಪಯಣದ ಸೊಗಸಾದ ಕಥೆಯಿದೆ. ಈ ಪಯಣದಲ್ಲಿ ನಮ್ಮ ಜೀವನದ ನಿಜವಾದ ಪ್ರಿತಿಯನ್ನು ನೆನೆಪಿಸುತ್ತಾ ಸಾಗುತ್ತದೆ. ಕಳೆದು ಹೋದ ಸಂಬಂಧಗಳನ್ನು ಮರುಸ್ಥಾಪಿಸುತ್ತದೆ. ಲವ್, ಎಮೋಷನ್ಸ್, ಸೆಂಟಿಮೆಂಟ್, ಕಾಮಿಡಿ ಹೀಗೆ ಎಲ್ಲವೂ ಚಿತ್ರದ ಕಥೆಯಲ್ಲಿ ಬೆರೆತಿವೆ.

ವಿ.ಸಿ : ಇದೇ ಶಿರ್ಷಿಕೆ ಇಡಲು ಕಾರಣ ?
ಯಶವಂತ್ : ಚಿತ್ರದ ನಾಯಕ ವಿಕಾಸ್. ಆತನನ್ನು ಎಲ್ಲರೂ ಪ್ರೀತಿಯಿಂದ ವಿಕ್ಕಿ ಎಂದು ಕರೆಯುತ್ತಾರೆ. ಈತ ಬಲು ಎಮೋಷನ್ ಹುಡುಗ, ತನ್ನ ಹಳೆಯ ದಿನಗಳನ್ನು ನೆನೆಯುತ್ತಾ ಸಾಗುತ್ತಾನೆ. ವಿಕ್ಕಿಯ ಈ ಪಯಣವೇ ವಿಕಿಪೀಡಿಯ. ಸಿನಿಮಾ ಸೆಟ್ಟೇರಿದಾಗ , ನಮ್ಮ ಚಿತ್ರಕ್ಕೆ ಶೀರ್ಷಿಕೆ ಸೂಚಿಸುವಂತೆ ಸಿನಿಪ್ರಿಯರಿಗೆ ತಿಳಿಸಿದ್ದೆವು. ಹಲವರು ವಿವಿಧ ಬಗೆಯ ಟೈಟಲ್‌ಗಳು ಬಂದವು. ಕೊನೆಗೆ ವಿಕಿಪೀಡಿಯ ಎಂಬ ಶೀರ್ಷಿಕೆ ಇಡಲಾಗಿತು. ತೆರೆಯಲ್ಲಿ ವಿಕ್ಕಿಯ ಜೀವನದ ಮಜಲುಗಳೇ ಈ ವಿಕಿಪೀಡಿಯ. ವಿಕ್ಕಿಯ ಜೀವನದಲ್ಲಿ ಬಂದು ಆತನಿಗೆ ರಚನಾತ್ಮಕ ಜೀವನವನ್ನು ಕಟ್ಟಿಕೊಡುವುದೇ ರಚನಾ, ಆಕೆಯೇ ಚಿತ್ರದ ನಾಯಕಿ. ನಾನು ವಿಕಾಸ್ ಪಾತ್ರದಲ್ಲಿ ನಾನು ನಟಿಸಿ ದ್ದೇನೆ. ನನ್ನ ಜತೆಯಾಗಿ ಆಶಿಕಾ ಸೋಮ ಶೇಖರ್ ಅಭಿನಯಿಸಿದ್ದಾರೆ.

ವಿ.ಸಿ : ಈ ಕಥೆ ಹೊಳೆದಿದ್ದು ಹೇಗೆ ?
ಯಶವಂತ್ : ನಾವು ಜೀವನದಲ್ಲಿ ಕಳೆದ ಕೆಲವೊಂದು ಮಧುರ ನೆನಪುಗಳು ಮನದಲ್ಲಿ ಅಚ್ಚಲೀಯದೇ ಉಳಿದಿರುತ್ತವೆ. ಕೆಲವೊಂದು ಘಟನಾವಳಿಗಳ ಸಂದರ್ಭ, ಅವು ನಮಗೆ ತೋದಂತೆ ಮನದಲ್ಲಿ ಪಟಲದಲ್ಲಿ ಮೆಲುಕು ಹಾಕುತ್ತವೆ. ಅಂತೆಯೇ ವಿಕಿಪೀಡಿಯ ಸುಂರದ ನೆನಪುಗಳ ಬುತ್ತಿಯನ್ನು ಹೊತ್ತ ಕಥೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಇದು ಜೀವನಾನುಭದ ಕಥೆ. ನನ್ನ ಸ್ನೇಹಿತನ ಬದುಕಿನಲ್ಲಿ ನಡೆದ ಕೆಲವೊಂದು ಘಟನಾವಳಿಗಳನ್ನು ಆಯ್ದುಕೊಂಡು ಈ ಕಥೆ ಹೆಣೆದೆ. ಬಳಿಕ ಗೆಳೆಯರ ಬಳಿ ಹೇಳಿದೆ.

ಎಲ್ಲರೂ ಕಥೆ ಮೆಚ್ಚಿ, ಒಟ್ಟಿಗೆ ಬಂಡವಾಳ ಹೂಡಿದರು. ಚಿತ್ರ ಸೆಟ್ಟೇರಿತು. ಮಲೆನಾಡಿನ ಸುಂದರ ತಾಣದಲ್ಲಿ ಚಿತ್ರದ ಚಿತ್ರೀಕರಣ ನಡೆಸಿದೆವು. ಸೋಮು ಹೊಯ್ಸಳ ನಿರ್ದೇಶನ ದಲ್ಲಿ ಚಿತ್ರ ಮೂಡಿಬಂದಿದೆ.

ವಿ.ಸಿ : ಚಿತ್ರದ ಹಾಡುಗಳ ಬಗ್ಗೆ ಹೇಳುವುದಾದರೆ ?
ಯಶವಂತ್ : ಕಥೆಗೆ ತಕ್ಕಂತೆ ಚಿತ್ರದ ಹಾಡುಗಳು ಮೂಡಿಬಂದಿವೆ. ಪ್ರಮೋದ್ ಮರವಂತೆ ಸಾಹಿತ್ಯದ ಹಾಡುಗಳು ಕೇಳಲು
ಮಧುರವಾಗಿವೆ. ರಾಕ್ ಅಂಡ್ ನಿಲ್ ಸಂಗೀತ ಸಂಯೋಜಿಸಿದ್ದಾರೆ. ರಘು ದೀಕ್ಷಿತ್ ಕಂಠಸಿರಿಯಲ್ಲಿ ಮೂಡಿಬಂದಿರುವ ಹಾಡಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಸಿನಿಮಾ ನೋಡುತ್ತಿದ್ದರೆ, ನಾವು ಕಳೆದ ಆ ದಿನಗಳ ಸುಂದರ ನೆನಪುಗಳು ನಮ್ಮ ಕಣ್ಣಮುಂದೆ ಹಾದುಹೋಗುತ್ತವೆ. ಒಮ್ಮೆಲೆ ನಮ್ಮನ್ನು ಹೊಸ ಭಾವ ಆವರಿಸಿದಂತಾಗುತ್ತವೆ. ಎಲ್ಲರ ಮನಸಿಗೂ ನಾಟುವ ಕಥೆ ಈ ಚಿತ್ರದಲ್ಲಿದೆ.