Thursday, 12th December 2024

ಕಾಕ್ಟೆ ಲ್‌ನಲ್ಲಿ ಥ್ರಿಲ್ಲರ್ ಸ್ಟೋರಿ

ಸಸ್ಪೆನ್ಸ್, ಥ್ರಿಲ್ಲರ್ ಕಥೆಯ ಕಾಕ್ಟೈಲ್ ಚಿತ್ರ ಸೆಟ್ಟೇರಿದೆ. ಚಿತ್ರದಲ್ಲಿ ಪ್ರಚಲಿತ ವಿದ್ಯಾಮಾನಗಳ ಕಥೆಯೂ ಇರಲಿದೆ. ಬೆಂಗಳೂರಿನ ವರಸಿದ್ದಿ ವಿನಾಯಕನ ಸನ್ನಿದಿ ಯಲ್ಲಿ ಸಿನಿಮಾದ ಮಹೂರ್ತ ಸಮಾರಂಭವು ಸರಳವಾಗಿ ನಡೆಯಿತು.

ವಿ.ಮೈನಸ್ ಮತ್ತು ಸುವ್ವಾಲಿ ಚಿತ್ರಗಳನ್ನು ನಿರ್ಮಾಣ ಮಾಡಿರುವ ಶ್ರೀರಾಮ್ ಈ ಸಿನಿಮಾದ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಅನುಪಮ್‌ಕೇರ್ ನಟನಾ ಶಾಲೆಯಲ್ಲಿ ತರಬೇತಿ ಪಡೆದುಕೊಂಡಿರುವ ವಿರೇಶ್ ಕೇಶವ್ ನಾಯಕ ನಾಗಿ ನಟಿಸುತ್ತಿದ್ದಾರೆ. ಈ ಹಿಂದೆ ನರಗುಂದ ಬಂಡಾಯ ಮತ್ತು ಯುವರತ್ನ ಚಿತ್ರಗಳಲ್ಲಿ ಕೇಶವ್ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ನಾಯಕಿ ಜತೆಗೆ ಇತರೆ ತಾರಾಗಣ ಆಯ್ಕೆ ಪ್ರಕ್ರಿಯೆ ಮುಂದಿನ ದಿನಗಳಲ್ಲಿ ಪೂರ್ಣಗೊಳ್ಳಲಿದೆ.

ಸಂಗೀತ ಲೋಕಿ, ಛಾಯಾಗ್ರಹಣ ರವಿವರ್ಮ, ಸಂಕಲನ ಮೋಹನ್ ಅವರದಾಗಿದೆ. ವಿಜಯಲಕ್ಷೀ ಕಂಬೈನ್ಸ್ ಮೂಲಕ ಡಾ.ಶಿವಪ್ಪ ಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ. ಬೆಂಗಳೂರು, ಮೈಸೂರು ಹಾಗೂ ಮಡಿಕೇರಿಯ ಸುಂದರ ತಾಣಗಳಲ್ಲಿ ಜುಲೈ ಹದಿನೈದರಿಂದ ಚಿತ್ರೀಕರಣ ಶುರು ಮಾಡಲು ತಂಡವು ಪ್ಲಾನ್ ಮಾಡಿದೆ.