Sunday, 24th November 2024

ಕರೋನಾ ಕಾಲದಲ್ಲಿ ಕಾರ್ ಉದ್ಯಮ

ಕೋವಿಡ್19 ಸೋಂಕಿನಿಂದಾಗಿ ವಿಶ್ವದ ಎಲ್ಲಾ ದೇಶಗಳ ಆರ್ಥಿಕತೆ ಪೆಟ್ಟು ತಿಂದಿದೆ. ಎಲ್ಲಾ ವಲಯಗಳಂತೆಯೇ ಕಾರು ಮಾರಾಟವೂ ತೀವ್ರ ಇಳಿತ ಕಂಡಿತ್ತು. ಈ ಆಗಸ್‌ಟ್‌‌ನಲ್ಲಿ ಈ ಉದ್ದಿಮೆ ಚೇತರಿಕೆ ಕಂಡಿರುವುದು ಸಂತಸದ ವಿಷಯ.

ಹಾಗೆ ನೋಡಿದರೆ 2020ರ ವರ್ಷ ಎಲ್ಲಾ ರೀತಿಯ ವ್ಯವಹಾರಗಳಿಗೂ ಒಂದಲ್ಲ ಒಂದು ಸವಾಲು ಎದುರಾಗುತ್ತಲೇ ಇದೆ. ಒಂದೋ ಅವರ ಸೇವೆಗಳನ್ನು ಕೇಳುವವರಿಲ್ಲದೇ ಅವುಗಳು ಮುಚ್ಚುವ ಸ್ಥಿತಿಯಲ್ಲಿರುವ, ಅಧೋಗತಿಯಲ್ಲಿರುವುದಾದರೆ, ಇನ್ನೊೊಂದು ಅವುಗಳು ಅನಿವಾರ್ಯವಾಗಿದ್ದರೂ ಆ ಸೇವೆಯನ್ನು ನೀಡಲು ಅಸಾಧ್ಯವೆನಿಸಿ ಆ ಸಂಸ್ಥೆೆಗಳು ಕಷ್ಟಪಡುತ್ತಿರುವುದೂ ನಡೆದಿದೆ. ಪ್ರತಿಯೊಂದು ಬ್ಯುಸಿನೆಸ್ ಕೂಡ ಹೇಗೆ ತಾನು ಈ ಪರಿಸ್ಥಿತಿಗೆ ತಕ್ಕ ಹಾಗೆ ತನ್ನನ್ನು ತಾನು
ಬದಲಾಯಿಸಿಕೊಳ್ಳುತ್ತದೆ ಅನ್ನುವುದರ ಮೇಲೆ ಅದರ ಗೆಲುವು ನಿರ್ಧಾರವಾಗಿದೆ.

ಇದು ಕಾರ್ ಉದ್ಯಮಕ್ಕೂ ಅನ್ವಯವಾಗುತ್ತದೆ. ಇಷ್ಟು ದಿನ ಕೋವಿಡ್-19 ಲಾಕ್‌ಡೌನ್ ದೆಸೆಯಿಂದ ಕಾರ್‌ಗಳ ಮಾರಾಟಕ್ಕೆ ತಟ್ಟಿದ್ದ ಬಿಸಿ ನಿಧಾನವಾಗಿಯಾದರೂ ತಣ್ಣಗಾಗುತ್ತಿರುವ, ಹಾಗೂ ಕೋವಿಡ್ ಭಯದಿಂದ ಸಾರ್ವಜನಿಕ ಸಾರಿಗೆಗಳಿಂದ ಜನ ದೂರವಾಗಿರುವುದರಿಂದ, ಸ್ವಂತ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಮಾರ್ಚ್‌ನಿಂದೀಚೆಗೆ ಈ ಆಟೋ ಲೋಕದ ಆಟ-ಪರದಾಟ ಗಳ ಒಂದು ಕಿರುನೋಟದೊಂದಿಗೆ ಈಗ ಹೇಗಿದೆ ಇಂಡಸ್ಟ್ರಿ ಎನ್ನುವುದರ ಮೇಲೂ ಒಂದು ಕಣ್ಣೋಟದ ಪ್ರಯತ್ನ ಇಲ್ಲಿದೆ.

ಮೊದಲನೆಯದಾಗಿ, ಈ ಕರೋನಾ ಮಹಾಮಾರಿಯಿಂದಾಗಿ ಸಾರ್ವಜನಿಕ ಸಾರಿಗೆ ಹೇಗಿದ್ದರೂ ದೊಡ್ಡ ಹೊಡೆತ ತಿಂದಿರುವುದು ಇದ್ದೇ ಇದೆ. ಆದರೆ ಇದರೊಂದಿಗೆ ಇನ್ನೂ ಹೆಚ್ಚಿನ ಹೊಡೆತ ಆಗಿರುವುದು ಆಟೋಗಳು ಹಾಗೂ ಕ್ಯಾಬ್ ಸರ್ವಿಸ್‌ಗಳಿಗೆ. ಓಲಾ, ಊಬರ್‌ನಂತಹ ಸೇವೆಗಳು ಭಾರತದಲ್ಲಷ್ಟೇ ಅಲ್ಲ, ಎಲ್ಲೆೆಡೆ ದೊಡ್ಡ ಹೊಡೆತ ತಿಂದಿರುವುದು ಅಲ್ಲದೇ ವಾಹನಗಳನ್ನು ಬಾಡಿಗೆಗೆ ಓಡಿಸುತ್ತಿದ್ದ ಇನ್ನೂ ದೊಡ್ಡ  ವರ್ಗಕ್ಕೂ ಇದೇ ಗತಿಯಾಗಿರುವುದು ಬೇಸರದ ಸಂಗತಿ.

ಇವೆಲ್ಲವುಗಳ ಅರಿವಿದ್ದುಕೊಂಡೇ, ಅವುಗಳನ್ನು ಗಮನಿಸಿಕೊಂಡೇ ನಾವು ಇಂದು ಕಾರ್‌ನ ಮಾರುಕಟ್ಟೆೆ ಹೇಗಿದೆ ಎನ್ನುವು
ದನ್ನು ಗಮನಿಸುವ ಪ್ರಯತ್ನಪಡೋಣ. ಬಳಸಿದ ಕಾರ್‌ಗಳಿಗೆ ಬಂದಿದೆ ಬೆಲೆ ಕಾರ್ ಮಾರುಕಟ್ಟೆೆಯಲ್ಲಿ ಬಳಸಿದ ಕಾರ್‌ಗಳ ಮಾರುಕಟ್ಟೆೆಗೆ ಹಿಂದೆಂದಿಗಿಂತಲೂ ಹೆಚ್ಚಿನ ಬೆಲೆ ಸಿಕ್ಕಿದೆ. ಇದಕ್ಕೆೆ ಕಾರಣ ಒಂದು ಹೊಸ ಕಾರ್‌ಗಳ ತಯಾರಿಕೆಯಲ್ಲಿ ಇಳಿಕೆ. ಇನ್ನೊೊಂದು ಯರ್ರಾಬಿರ್ರಿಿ ಕಾರು ಖರೀದಿ ಮಾಡುತ್ತಿದ್ದವರಿಗೂ ಒಂದೋ ಖರ್ಚು ಕಡಿಮೆ ಮಾಡುವುದರ ಅನಿವಾರ್ಯತೆ ಬಂದಿದೆ.

ಇವೆಲ್ಲವುಗಳಿಂದಾಗಿ ಬಳಸಿದ ಕಾರುಗಳಿಗೆ ಡಿಮ್ಯಾಾಂಡಪ್ರೋ ಡಿಮ್ಯಾಾಂಡು. ಈ ವರ್ಷದ ಮಾರ್ಚ್‌ನ ವೇಳೆಗೆ ಹೆಚ್ಚಿನೆಲ್ಲ ಕಾರ್ ತಯಾರಕರು ಲಾಕ್‌ಡೌನ್‌ನ ಕಾರಣದಿಂದ ತಮ್ಮ ಕಾರ್ ತಯಾರಿಕಾ ಪ್ರಕ್ರಿಯೆಯನ್ನು ನಿಲ್ಲಿಸಿದ್ದರಿಂದ ಕಾರ್‌ಗಳ ಬೇಡಿಕೆ ಇದೀಗ ಮತ್ತೆ ಆರಂಭವಾಗಿದ್ದರೂ ಸಾಕಷ್ಟು ಕಾರ್ ಗಳಿಲ್ಲದಿರುವುದರಿಂದ ಅವುಗಳ ಬೆಲೆಯೂ ಇಳಿಯುವುದು ಬಿಡಿ, ಏರುವ ಸಾಧ್ಯತೆ ಯೇ ಅಧಿಕ. ಇನ್ನು ಅಮೆರಿಕಾದಲ್ಲಂತೂ ಹೊಸ ಕಾರ್‌ಗಳು ಹಾಗೂ ಹಳೆ ಕಾರ್‌ಗಳ ಬೆಲೆ ಏರಿಕೆ ಕಂಡುಬಂದಿದೆ.

ಭಾರತದಲ್ಲಿ ಜನವರಿಯ ತುಲನೆಯಲ್ಲಿ ಜುಲೈ ವೇಳೆಗೆ ಹಳೇ ಕಾರ್‌ಗಳ ಬೇಡಿಕೆಯಲ್ಲಿ ದೊಡ್ಡ ಏರಿಕೆ ಕಂಡುಬಂದಿದೆ. ಹೈದರಾಬಾದ್‌ನಲ್ಲಿ ಶೇ.81, ಮುಂಬೈನಲ್ಲಿ ಶೇ.75 ಹಾಗೂ ಬೆಂಗಳೂರಿನಲ್ಲಿ ಶೇ.73 ಹೆಚ್ಚು ಬೇಡಿಕೆಯನ್ನು ಹಳೇ ಕಾರ್ ಕಂಡಿವೆ. ಈ ರೀತಿಯ ಏರಿಕೆ ಕೊಯಂಬತ್ತೂರು, ವಿಜಯವಾಡಾ, ವಿಶಾಖಪಟ್ಟಣ, ಜೈಪುರ, ಮುಂತಾದ ಎರಡನೆಯ ಸ್ತರದ ನಗರ ಗಳಲ್ಲೂ ಕಂಡಿದೆ. ಎರಡು ಲಕ್ಷಕ್ಕೂ ಕಡಿಮೆ ಬೆಲೆಯ ಸೆಕೆಂಡ್ ಹ್ಯಾಾಂಡ್ ಕಾರ್‌ಗಳತ್ತ ಬೆಂಗಳೂರು ಹಾಗೂ
ಹೈದರಾಬಾದ್‌ನ ಕಾರ್ ಖರೀದಿದಾರರು ಕಣ್ಣಿಟ್ಟಿದ್ದು, ಟೂವೀಲರ್‌ಗಳಿಗಂತೂ ದೆಹಲಿಯಲ್ಲಿ ಶೇ.183 ಹಾಗೂ ಮುಂಬೈಯಲ್ಲಿ ಶೇ.81 ರಷ್ಟು ಹೆಚ್ಚು ಬೇಡಿಕೆ ಕಾಣಸಿಕ್ಕಿದೆ.

ಜಿಎಸ್‌ಟಿ ಇಳಿಕೆ ಸಾಧ್ಯತೆ
ಈ ಮಹಾಮಾರಿಯ ಕಾರಣದಿಂದ ಕಳೆದ ಕೆಲ ತಿಂಗಳುಗಳಲ್ಲಿ ಅತಿ ಕಡಿಮೆ ಸೇಲ್‌ಸ್‌ ಕಂಡಿರುವ ಅಟೋಮೊಬೈಲ್
ಉದ್ಯಮದ ಅಧೋಗತಿಯನ್ನು ಅಂತ್ಯಗೊಳಿಸಲು ಭಾರತ ಸರಕಾರ ಒಂದಷ್ಟು ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಗಳು
ಕಂಡುಬರುತ್ತಿದೆ. ಅವುಗಳಲ್ಲಿ ಮೊದಲನೆಯದು, ಕಾರ್‌ಗಳ ಮೇಲಿರುವ ಜಿಎಸ್‌ಟಿಯಲ್ಲಿ 10 ಶೇಕಡಾದಷ್ಟು ಇಳಿಕೆಯನ್ನು ಮಾಡುವುದು. ಕರೋನಾ ಕಾರಣದಿಂದ ಕಳೆದ ವರ್ಷಗಳಿಗೆ ಹೋಲಿಸಿದರೆ 75 ಶೇಕಡಾ ಕಡಿಮೆ ಸೇಲ್‌ಸ್‌ ಕಂಡಿರುವ ಕಾರ್ ಉದ್ಯಮ ಈ ಆರ್ಥಿಕ ವರ್ಷದ ಮೊದಲ 3 ತಿಂಗಳಲ್ಲಿ 60 ಲಕ್ಷ ಕಾರ್‌ಗಳನ್ನು ಮಾರಾಟ ಮಾಡಿದೆ.

ಹಾಗೂ ಈ ಎಲ್ಲಾ ಬೆಳವಣಿಗೆಗಳಿಂದ 2018-19ರಲ್ಲಿ ಅತ್ಯುತ್ತಮ ಬೆಳವಣಿಗೆ ಕಂಡಿದ್ದ ಈ ಉದ್ಯಮ ಇದೀಗ 10 ವರ್ಷ ಹಿಂದಿನ ಪರಿಸ್ಥಿತಿಗೆ ತೆರಳಿದ್ದು, ಸರಿಯಾದ ಉತ್ತೇಜನ ಸಿಕ್ಕಲ್ಲಿ ಮಾತ್ರ 2024ರ ವೇಳೆಗೆ ಮೊದಲಿನ ಪರಿಸ್ಥಿತಿಯನ್ನು ತಲುಪುವುದು ಸಾಧ್ಯ ವಿದೆ.

ಸೇಲ್‌ಸ್‌‌ನಲ್ಲಿ ಮೊದಲ ಏರಿಕೆ
Lockdown ನಂತರ ಮೊಟ್ಟಮೊದಲ ಬಾರಿಗೆ ಮಾರಾಟ ಏರಿಕೆ ಕಂಡುಬಂದದ್ದು ಆಗಸ್‌ಟ್‌‌ನಲ್ಲಿ. ಕಳೆದ ವರ್ಷದ ಆಗಸ್‌ಟ್‌‌ಗೆ ಹೋಲಿಸಿದರೆ ಸುಮಾರು 17 ಶೇಕಡಾ ಹೆಚ್ಚು ಸೇಲ್‌ಸ್‌ ಆಗಿದೆ. ಹೆಚ್ಚಿನೆಲ್ಲಾ ಕಾರ್ ಮಾರಾಟಗಾರರೂ ಆನ್‌ಲೈನ್ ವ್ಯವಹಾರಕ್ಕೆೆ ಹೆಚ್ಚಿನ  ಒತ್ತನ್ನು ನೀಡಿರುವುದು ಕುತೂಹಲಕಾರಿ. ಕಾರ್ಸ್24 ಅನ್ನುವ ಸಂಸ್ಥೆೆ ನಡೆಸಿರುವ ಸಮೀಕ್ಷೆಯ ಪ್ರಕಾರ ಪ್ರತಿ ನಾಲ್ವರಲ್ಲಿ
ಒಬ್ಬರು (ಅಂದರೆ 25 ಶೇಕಡಾ ಮಂದಿ) ಸಂಪೂರ್ಣ ಆನ್ ಲೈನ್ ಮೂಲಕವೇ ಕಾರ್ ಖರೀದಿ ಮಾಡುವ ಇರಾದೆ ವ್ಯಕ್ತಪಡಿಸಿದ್ದಾ ರಂತೆ.

ಮುದ್ದಿನ ಮಾರುತಿ ಭಾರತದಲ್ಲಿ ಅತಿ ಹೆಚ್ಚು ಕಾರ್ ಮಾರಾಟ ಮಾಡುವ ಮಾರುತಿ 1.13 ಲಕ್ಷ ಕಾರ್‌ಗಳನ್ನು ಈ ಆಗಸ್‌ಟ್‌‌ನಲ್ಲಿ ಸೇಲ್ ಮಾಡಿದ್ದರೆ, ಹ್ಯೂಂಡೇ 45,809 ಕಾರ್‌ಗಳನ್ನು ಗ್ರಾಹಕರ ಕೈಗೊಪ್ಪಿಸಿದೆ. ಟಾಟಾ ಮೋಟರ್ಸ್ ಕಳೆದ ಆಗಸ್‌ಟ್‌‌ನಲ್ಲಿ 7
ಸಾವಿರದಷ್ಟು ಕಾರ್‌ಗಳನ್ನು ಮಾರಿದ್ದರೆ, ಈ ವರ್ಷ 18 ಸಾವಿರಕ್ಕೂ ಹೆಚ್ಚು ಕಾರ್‌ಗಳನ್ನು ಮಾರುವಲ್ಲಿ ಯಶಸ್ವಿಯಾಗಿದೆ.

ಮಹೀಂದ್ರಾ, ಕಿಯಾ, ಎಂಜಿ ಮೋಟರ್ಸ್ ಕೂಡ ಬೆಳವಣಿಗೆ ಕಂಡಿದೆ. ಈ ಕಂಪೆನಿಗಳು ಏಪ್ರಿಲ್‌ನಲ್ಲಿ ಬಹುಮಟ್ಟಿಗೆ ಶೂನ್ಯ
ಸಂಪಾದನೆ ಮಾಡಿದ್ದವು ಅಂದರೂ ತಪ್ಪಲ್ಲ. ಮಾರುತಿ ಮೇ ತಿಂಗಳಲ್ಲಿ ಕಳೆದ ಮೇಗೆ ಹೋಲಿಸಿದರೆ (1.21 ಲಕ್ಷ) ಕೇವಲ
13 ಸಾವಿರ ಕಾರ್‌ಗಳನ್ನು ಮಾರಾಟ ಮಾಡಿತ್ತು. ಅಂದರೆ, ಶೇ.88ರಷ್ಟು ಕಡಿಮೆ ವ್ಯವಹಾರ. ಹ್ಯುಂಡೇ -83, ಮಹೀಂದ್ರಾ-80, ಟಾಟಾ -71, ಟೊಯೋಟಾ -86 ಶೇಕಡಾ ಕಡಿಮೆ ಮಾರಾಟದ ಅಂಕಿ ಅಂಶ ಹೊರಹಾಕಿದ್ದವು.

ಅಂತಹ ಬಿಕ್ಕಟ್ಟು ಈಗ ಕೊನೆಗೊಂಡಿದೆ. ಆದರೂ ಮುಂದಿನ ದಿನಗಳಲ್ಲಿ ಈ ಉದ್ದಿಮೆ ಯಾವ ರೀತಿಯ ಬೆಳವಣಿಗೆಯನ್ನು ಕಾಣುತ್ತದೆ ಅನ್ನುವುದನ್ನು ಈಗಲೇ ಅಂದಾಜಿಸುವುದು ಅಸಾಧ್ಯ. ಯಾಕೆಂದರೆ ಒಟ್ಟಾರೆಯಾಗಿ ಇಡೀ ಹಣಕಾಸು ವ್ಯವಸ್ಥೆೆಯೇ ಇಳಿಕೆಯ ಹಾದಿಯಲ್ಲಿದೆ, ಉದ್ಯೋಗ ಕಳೆದುಕೊಳ್ಳುವವರ ಸಂಖ್ಯೆೆಯಲ್ಲಿ ಹೆಚ್ಚಳ ಕಂಡುಬಂದಿದೆ. ಇದ್ದ ಉದ್ಯೋಗದಲ್ಲೂ ಸಂಬಳ ಕಡಿಮೆಯಾದವರು ಹೆಚ್ಚಿನವರಿದ್ದಾರೆ. ಇವೆಲ್ಲವನ್ನೂ ಸರಿದೂಗಿಸಿಕೊಂಡು ಪರಿಸ್ಥಿತಿಯ ಅನಿವಾರ್ಯತೆಯಿಂದ
ಕಾರ್ ಕೊಂಡವರು, ಹಿಂದಿನ ವೇಗದಲ್ಲೇ ಹಳೇ ಕಾರನ್ನು ಮಾರಿ ಹೊಸದೊಂದು ಕಾರನ್ನು ಕೊಳ್ಳುವ ಶೋಕಿಯನ್ನುಬದಿಗೊತ್ತಿ ಕೆಲವು ವರ್ಷವಾದರೂ ಅಡ್ಜಸ್‌ಟ್‌ ಮಾಡಿಕೊಂಡು ಬದುಕುವ ಸಾಧ್ಯತೆ ಇಲ್ಲದಿಲ್ಲ.

ಇದು ಬರೀ ಭಾರತವಷ್ಟೇ ಅಲ್ಲ, ಎಲ್ಲೆಡೆಯ ಟ್ರೆೆಂಡ್ ಆಗಿದ್ದು, ಇಡೀ ಉದ್ಯಮ ಮತ್ತೆೆ ಮೊದಲಿನ ಸ್ಥಿತಿಗೆ ಬರಲು ಇನ್ನೂ ಹಲವು ವರ್ಷ ಬೇಕಾಗಬಹುದು ಎನ್ನುವುದು ಉದ್ದಿಮೆ ಎಕ್‌ಸ್‌‌ಪರ್ಟ್‌ಗಳ ಅಂಬೋಣ.

ಮಾರುತಿಯೇ ರಾಜ
ಕಾರ್ ಬ್ರ್ಯಾಾಂಡ್‌ಗಳ ಪೈಕಿ ಸೆಕೆಂಡ್ ಹ್ಯಾಾಂಡ್ ಕಾರ್‌ಗಳಲ್ಲೂ ಮಾರುತಿಯೇ ರಾಜ. ದಶಕಗಳ ಕಾಲದಿಂದ ಭಾರತೀಯರ
ಅಚ್ಚು ಮೆಚ್ಚಿನ ಮತ್ತು ಕಡಿಮೆ ಬೆಲೆಯ ಕಾರು ಎನಿಸಿರುವ ಮಾರುತಿ, ಈ ಕೋವಿಡ್ ಕಾಲದಲ್ಲೂ ಸೆಕೆಂಡ್ ಹ್ಯಾಾಂಡ್
ಕಾರುಗಳ ಮಾರುಕಟ್ಟೆೆಯಲ್ಲಿ ಮೊದಲನೆಯ ಸ್ಥಾನದಲ್ಲಿರುವುದು ಕುತೂಹಲಕಾರಿ. ಇದಕ್ಕೆೆ ಮುಖ್ಯ ಕಾರಣ ಕಡಿಮೆ ಬೆಲೆ. ನಂತರದ ಸ್ಥಾನಗಳಲ್ಲಿ ಹ್ಯೂಂಡೇ, ಮಹೀಂದ್ರಾ., ಟೊಯೋಟಾ, ಹೋಂಡಾದ ಕಾರ್‌ಗಳಿಗೆ ಬೇಡಿಕೆ ಇದೆ.