Thursday, 12th December 2024

ಮೋಸ್ಟ್ ಡಿಸೈರಬಲ್‌ ವುಮನ್‌ ರಶ್ಮಿಕಾ

ಸ್ಯಾಂಡಲ್‌ವುಡ್ ಸಾನ್ವಿ, ಸದಾ ನಗು ಮುಖದ ಮೂಲಕ ಅಭಿಮಾನಿಗಳ ಮನಸ್ಸು ಕದ್ದಿರುವ ರಶ್ಮಿಕಾ ಮಂದಣ್ಣ 2020ನೇ
ಸಾಲಿನ ಮೋಸ್ಟ್ ಡಿಸೈರಬಲ್ ವುಮೆನ್ ಆಗಿ ಹೊರಹೊಮ್ಮಿದ್ದಾರೆ.

2019ನೇ ಸಾಲಿನ ಬೆಂಗಳೂರು ಮೋಸ್ಟ್ ಡಿಸೈರಬಲ್ ವುಮೆನ್ ಪಟ್ಟಿಯಲ್ಲಿ ರಶ್ಮಿಕಾ ಮಂದಣ್ಣ 6ನೇ ಸ್ಥಾನದಲ್ಲಿದ್ದರು. ಇದೀಗ, ಸ್ಟಾರ್ ನಟಿಯರನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ್ದಾರೆ. ಕಳೆದ ಬಾರಿ ಶಾನ್ವಿ ಶ್ರೀವಸ್ತವ್ ಮೊದಲ ಸ್ಥಾನದಲ್ಲಿದ್ದರು. ರಶ್ಮಿಕಾ ಮಂದಣ್ಣ ಮೊದಲ ಸ್ಥಾನ ಅಲಂಕರಿಸಿದರೆ, ತಾನ್ಯಾ ಹೋಪ್ ಎರಡನೇ ಪಡೆದಿದ್ದಾರೆ.

ಶಾನ್ವಿ ಶ್ರೀವಾಸ್ತವ್ ಮೂರನೇ ಸ್ಥಾನ, ಆಶಿಕಾ ರಂಗನಾಥ್ ನಾಲ್ಕನೇ ಸ್ಥಾನ ಹಾಗೂ ಶ್ರೀನಿಧಿ ಶೆಟ್ಟಿ ಐದನೇ ಸ್ಥಾನ ಪಡೆದುಕೊಂಡಿ ದ್ದಾರೆ. ಈ ವರ್ಷ ರಶ್ಮಿಕಾ ಅಭಿನಯದ ಕನ್ನಡದ ಪೊಗರು ಚಿತ್ರ ತೆರೆಗೆ ಬಂದಿತ್ತು. ಚಿತ್ರ ಅಷ್ಟಾಗಿ ಸಕ್ಸಸ್ ಕಾಣಲಿಲ್ಲವಾದರೂ, ಗೀತಾಳಾಗಿ ಕಾಣಿಸಿಕೊಂಡ ರಶ್ಮಿಕಾ ಸಿಂಪಲ್ ಲುಕ್‌ನಲ್ಲೇ ಗಮನಸೆಳೆದರು. ಸದ್ಯ ತೆಲುಗಿನಲ್ಲಿ ಮಿಂಚುತ್ತಿರುವ ಕೊಡಗಿನ ಬೆಡಗಿ ರಶ್ಮಿಕಾ, ಟಾಲಿವುಡ್‌ನ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

ಹಾಗಾಗಿಯೇ ನ್ಯಾಷನಲ್ ಕ್ರಶ್ ಆಗಿ ಹೊರಹೊಮ್ಮಿದ್ದಾರೆ. ಈಗ ಬಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇವೆಲ್ಲದರ ಪರಿಣಾಮ ಸ್ಯಾಂಡಲ್‌ವುಡ್ ಸಾನ್ವಿ ಮೋಸ್ಟ್ ಡಿಸೈರಬಲ್ ವುಮೆನ್ ಸ್ಥಾನವನ್ನು ಅಲಂಕರಿಸಿದ್ದಾರೆ.