ವಸಂತ ಜಿ ಭಟ್
ಟೆಕ್ ಫ್ಯೂಚರ್
ಮೊಬೈಲ್ ಬಳಕೆಯಲ್ಲಿ ಹೊಸ ಅನುಭವ ನೀಡಬಲ್ಲ ಎರಡು ಪರದೆಯ ಎಲ್‌ಜಿ ವಿಂಗ್ 5 ಜಿ ಎಂಬ ಹೊಸ ಮೊಬೈಲ್ ಸಾಕಷ್ಟು
ಕುತೂಹಲ ಕೆರಳಿಸಿದೆ.
ಕ್ಷಿಣ ಕೊರಿಯಾ ಮೂಲದ ಎಲ್ ಜಿ ಸಂಸ್ಥೆ ಜಗತ್ತಿನ ದೈತ್ಯ ಎಲೆಕ್ಟ್ರೋನಿಕ್ ಸಂಸ್ಥೆಗಳಲ್ಲಿ ಹೆಸರುವಾಸಿ. ಮೊಬೈಲ್, ಲ್ಯಾಪ್ ಟಾಪ್, ಟಿವಿ, ರೆಫ್ರಿಜಿರೆಟರ್ ಇತ್ಯಾದಿ ಉಪಕರಣಗಳ ಮಾರಾಟ ದರದಲ್ಲಿ ಜಗತ್ತಿನಲ್ಲೇ ಮುಂಚೂಣಿಯಲ್ಲಿರುವ ಎಲ್ ಜಿ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಗ್ರಾಹಕರಿಗೆ ನೀಡುತ್ತಾ ಬಂದಿದೆ. ಎಲ್ ಜಿ ಉತ್ಪನ್ನಗಳನ್ನು ಗಮನಿಸುತ್ತಾ ಬಂದಿರುವರಿಗೆ ಒಂದು ವಿಷಯ ಸ್ಪಷ್ಟವಾಗಿ ತಿಳಿದಿರುತ್ತದೆ, ಎಲ್ ಜಿ ಸಾಮಾನ್ಯವಾಗಿ ಬೇರೆ ಸಂಸ್ಥೆಯ ವೈಶಿಷ್ಟ್ಯತೆಗಳನ್ನು ನಕಲು ಮಾಡುವುದಿಲ್ಲ. ಹೊಸ ವಿನ್ಯಾಸ ತುಲನಾತ್ಮಕ ಬೆಲೆ ಇವೆ ಎಲ್ ಜಿ ಸಂಸ್ಥೆಯ ಯಶಸ್ಸಿಗೆ ಮುಖ್ಯ ಕಾರಣ.
ಈಗ ಎಲ್ ಜಿ ವಿಂಗ್ 5 ಜಿ ಎನ್ನುವ ತಿರುಗುವ ಪರದೆ ಹೊಂದಿರುವ ಮೊಬೈಲ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಎಲ್‌ಐ ಸಿದ್ಧತೆ ನಡೆಸಿದೆ. ಈ ತಿರುಗುವ ಮೊಬೈಲ್ ನಲ್ಲೇನು ವಿಶೇಷ ? ಅದಾಗಲೇ ಸ್ಯಾಮ್ಸಂಗ್, ಮೋಟರೋಲ ಮತ್ತಿತರ ಸಂಸ್ಥೆೆಗಳು ಅಂತಹ ಮೊಬೈಲ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರೂ, ಇದು ಇತರ ಮೊಬೈಲ್ ಗಳಂತೆ ಮೊಬೈಲ್‌ನ ಬಲಗಡೆ ಪರದೆ ಅಗಲವಾಗಿ ತೆರೆದುಕೊಳ್ಳುವ ಮೊಬೈಲ್ ಅಲ್ಲ, ಬದಲಾಗಿ ದೊಡ್ಡ ಪರದೆ ಮೇಲ್ಮುಖವಾಗಿ ಅಗಲವಾಗಿ ತೆರೆದು ಕೊಂಡು ಕೆಳಗೆ ಚಿಕ್ಕ ಪರದೆಯನ್ನು ಹೊಂದಿರುತ್ತದೆ. ಮೊಬೈಲ್ ಕ್ಷೇತ್ರದಲ್ಲಿ ಅನ್ವೇಷಣೆಗಳೆ ಮುಗಿದು ಹೊಯಿತೇ? ಎಂದು ಯೋಚಿಸುವ ಸಮಯಕ್ಕೆ ಎಲ್ ಜಿಯ ಈ ಮೊಬೈಲ್ ಖಂಡಿತವಾಗಿಯೂ ಹೊಸತನ ತರಲಿದೆ.
ಎಲ್ಜಿ ವಿಂಗ್ 5 ಜಿ ನ ವೈಶಿಷ್ಟ್ಯತೆ 260 ಗ್ರಾಂ ತೂಕವಿರುವ ಮೊಬೈಲ್ 10.9 ಮಿಲಿ ಮೀಟರ್‌ನಷ್ಟು ದಪ್ಪವಾಗಿದೆ, ಸಾಮಾನ್ಯ ಫೋನ್‌ಗಳಿಗೆ ಹೊಲಿಸಿದರೆ ತೂಕ ಮತ್ತು ದಪ್ಪ ಎರಡರಲ್ಲೂ ಹೆಚ್ಚೆನಿಸಿದರೂ ಎರಡು ಪರದೆಯನ್ನು ಹೊಂದಲು ಅದು ಅನಿವಾರ್ಯ. 6.8 ಇಂಚಿನ ಪಿ ಒಎಲ್‌ಈಡಿ ಪ್ರಾಥಮಿಕ ಪರದೆ ಮತ್ತು 3.9 ಇಂಚಿನ ಚಿಕ್ಕ ಪರದೆಯನ್ನು ಹೊಂದಿದೆ. 1080 ? 2460 ಪಿಕ್ಸೆಲ್ ಡೆನ್ಸಿಟೀ ಯನ್ನು ಹೊಂದಿರುವ ಮೊಬೈಲ್ ಕ್ವಾಲ್ಕೋಮ್ ಸ್ನಾಪ್ ಡ್ರಾಗನ್ ಎಸ್ ಡಿಎಂ 765 ಚಿಪ್ ಅನ್ನು ಹೊಂದಿದ್ದು ಎಂಟು ಕೊರ್ ಹೊಂದಿರುವ ಪ್ರಾಸೆಸರ್ ಇದಾಗಿರುವುದರಿಂದ, ವೇಗವಾಗಿ ಕಾರ್ಯ ನಿರ್ವಹಿಸಬಲ್ಲದು. ಸದ್ಯ
ಅನ್‌ದ್ರೋಯಿಡ್ 10 ಆಪರೇಟಿಂಗ್ ಸಿಸ್ಟಮ್‌ನೊಡನೆ ಮಾುಕಟ್ಟೆಗೆ ಬರಲಿರುವ ಮೊಬೈಲ್ ಮುಂದೆ ಅನ್‌ದ್ರೋಯಿಡ್ 11 ಪಡೆಯಬಲ್ಲದು.
8 ಜಿಬಿ ರ್ಯಾಮ್ 128 ಜಿಬಿ ಅಥವಾ 256 ಜಿಬಿ ಯ ಆಂತರಿಕ ಸಂಗ್ರಹಣೆಯ ಆಯ್ಕೆ ಹೊಂದಿರುವ ಮೊಬೈಲ್ ಮೈಕ್ರೋ ಅಥವಾ ನ್ಯಾನೋ ಸಿಮ್ ಗಳನ್ನು ಬಳಕೆಮಾಡಲು ಅವಶ್ಯಕವಾದಂತಹ ಸ್ಲಾಟ್ ಹೊಂದಿದೆ. ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಹಿಂಬದಿಯಲ್ಲಿರುವ 3 ಕ್ಯಾಮೆರಾಗಳ ಪೈಕಿ ಪ್ರಾಥಮಿಕ ಕ್ಯಾಮೆರಾ 64 ಮೆಗಾ ಪಿಕ್ಸೆಲ್‌ನದ್ದಾಗಿದ್ದು 25 ಮಿಲಿ ಮೀಟರ್‌ನ ವೈಡ್ ಆಂಗಲ್ ಹೊಂದಿದೆ. ಇನ್ನುಳಿದ ಎರಡು ಕ್ಯಾಮೆರಗಳು 13 ಮತ್ತು 12 ಮೆಗಾ ಪಿಕ್ಸೆಲ್ ನದ್ದಾಗಿದ್ದು, ಅಲ್ಟ್ರಾ ವೈಡ್ ಆಂಗಲ್ ಎನಿಸಿವೆ.
ದೊಡ್ಡ ಪರದೆ ಮೇಲೆ ಅಗಲವಾಗಿ ತೆರೆದುಕೊಳ್ಳುವುದರಿಂದ ಮುಂಬದಿಯ ಕ್ಯಾಮೆರಾವನ್ನು ಪರದೆಯ ಮೇಲೆ ನೀಡದೆ
ಅವಶ್ಯಕತೆ ಇದ್ದಾಗ ಮಾತ್ರ ಹೊರಬರುವ ಮೋಟರೈಸ್ಡ್ ತಂತ್ರಜ್ಞಾನ ಬಳಕೆಮಾಡಲಾಗಿದೆ. ಮುಂಬದಿಯ ಕ್ಯಾಮೆರಾ
32 ಮೆಗಾ ಪಿಕ್ಸೆೆಲ್ ನದ್ದಾಗಿದೆ. 4000 ಎಂ ಹೆಚ್ ನ ಬ್ಯಾಟರಿ, ತಂತಿ ರಹಿತ ಚಾರ್ಜಿಂಗ್ ಪರದೆಯ ಒಳಗಿರುವ ಬೆರಳಚ್ಚು
ಕಂಡುಹಿಡಿಯುವ ತಂತ್ರಜ್ಞಾನ ಹೆಸರಿಸಬಹುದಾದಂತಹ ಇನ್ನಿತರ ಪ್ರಮುಖ ಆಕರ್ಷಣೆಗಳು. ಒಂದೇ ಸಲ ಎರಡು ಕೆಲಸ
ಮೊಬೈಲ್ ಅಗಲವಾಗಿ ತೆರೆದುಕೊಳ್ಳುವುದು ಸರಿ, ಆದರೆ ಅದರ ನಿಜವಾದ ಅವಶ್ಯಕತೆ ಏನು? ಈಗಿನ ಮೊಬೈಲ್‌ಗಳಲ್ಲಿ ನಾವು ಮಾಡಲಾಗದ ಯಾವ ಕ್ರಿಯೆಯನ್ನು ಈ ಮೊಬೈಲ್ ನಲ್ಲಿ ಮಾಡಬಹುದು? ಪ್ರಾಥಮಿಕವಾಗಿ ಎರಡು ಪರದೆಗಳು ಸಿಗುವು ದರಿಂದ, ಒಂದು ಪರದೆಯನ್ನು ಒಂದು ಕ್ರಿಯೆಗೆ ಮತ್ತು ಇನ್ನೊಂದನ್ನು ಇನ್ನೊಂದು ಕ್ರಿಯೆಗೆ ಬಳಸಬಹುದು.
ಉದಾಹರಣೆಗೆ ದೊಡ್ಡ ಪರದೆಯಲ್ಲಿ ವೀಡಿಯೋ ನೋಡುತ್ತಾ ಕೆಳಗಿನ ಪರದೆಯಲ್ಲಿ ಚಾಟ್ ಮಾಡಬಹುದು, ಅಥವಾ ಮೇಲಿನ ಪರದೆಯಲ್ಲಿ ಮೀಟಿಂಗ್‌ನಲ್ಲಿ ಭಾಗವಹಿಸುತ್ತಾ ಕೆಳಗಿನ ಪರದೆಯಲ್ಲಿ ಮುಖ್ಯಾಂಶಗಳನ್ನು ಬರೆದಿಟ್ಟುಕೊಳ್ಳಬಹುದು. ಅಥವಾ ಮೇಲಿನ ಪರದೆಯನ್ನು ವೀಡಿಯೋ ನೋಡುವುದಕ್ಕೋ ಅಥವಾ ಹಾಡು ಕೇಳುವುಕ್ಕೋ ಬಳಸಿದರೆ ಕೆಳಗಿನ ಪರದೆಯನ್ನು ಅವುಗಳನ್ನು ಕಂಟ್ರೋಲ್ ಮಾಡುವ ಬಟನ್ ಗಳಿಗಾಗಿ ಬಳಸಬಹುದು. ದೊಡ್ಡ ಪರದೆಯಲ್ಲಿ ರೇಸಿಂಗ್ ಆಟವಾಡುತ್ತಿದ್ದರೆ, ಚಿಕ್ಕ ಪರದೆಯಲ್ಲಿ ನೀವು ಎಷ್ಟು ದೂರ ಕ್ರಮಿಸಿದ್ದೀರಿ ಎನ್ನುವುದನ್ನು ಗಮನಿಸಬಹುದು. ಇನ್ನೊಂದು ವಿಚಾರವೆಂದರೆ ಯಾವಾಗಲೂ ಚಿಕ್ಕ ಪರದೆಯನ್ನೇ ಕೆಳಗಡೆ ಹಿಡಿಯಬೇಕು ಎಂದೆನಿಲ್ಲ, ದೊಡ್ಡ ಪರದೆಯಲ್ಲಿ ಟೈಪ್ ಮಾಡುತ್ತಾ ಚಿಕ್ಕ ಪರದೆಯಲ್ಲಿ ಚಾಟ್ ಅನ್ನು ನೋಡಬಹುದು. ಹೀಗೆ ಮಾಡುವುದರಿಂದ ದೊಡ್ಡ ಪರದೆಯಲ್ಲಿ ಸುಲಭವಾಗಿ ಟೈಪ್ ಮಾಡಲು ಸಹಾಯವಾಗುತ್ತದೆ. ಮೊಬೈಲ್ ಅನ್ನು ಆಂಗ್ಲಭಾಷೆಯ ಎಲ್ ಆಕಾರದಲ್ಲಿ ಇಟ್ಟು ಕೊಂಡರೆ ಗಾಡಿ ಚಾಲನೆ ಮಾಡುವಾಗ ದೊಡ್ಡ ಪರದೆ ನ್ಯಾಾವಿಗೇಶನ್‌ಅನ್ನು ತೋರಿಸಿದರೆ ಕೆಳಗಿನ ಪರದೆಯಲ್ಲಿ ಹಾಡು ಕೇಳಬಹುದು.
ಈಗ ಲಭ್ಯವಿರುವ ಆ್ಯಪ್‌ಗಳು ಈ ಎರಡು ಪರದೆಯ ಮೊಬೈಲ್‌ಗೆ ಹೊಂದಾಣಿಕೆಯಾಗದೆ ಇರುವುದರಿಂದ, ಎಲ್ಲ ಆ್ಯಪ್ ಗಳನ್ನು ಎರಡು ಪರದೆಗಳಲ್ಲಿ ಬಳಸಲಾಗುವುದಿಲ್ಲ. ತಿರುಗುವ ಪರದೆ ಹೊಂದಿರುವುದರಿಂದ ಸಂಪೂರ್ಣ ನೀರು ನಿರೋಧಕ ಮಾಡು ವುದು ಸಹ ಕಷ್ಟ ಸಾಧ್ಯ. ಅದೇನಿದ್ದರೂ, ಎಲ್ ಜಿ ಯ ಈ ಮೊಬೈಲ್ ಖಂಡಿತವಾಗಿಯೂ ಮೊಬೈಲ್ ಬಳಕೆಯ ಹೊಸ ಅನುಭವ ವನ್ನು ನೀಡಬಲ್ಲದು.
ಡಬಲ್ ಸ್ಕ್ರೀನ್ ಮ್ಯಾಜಿಕ್
ಈ ಮೊಬೈಲ್ ಅನ್ನು ಒಮ್ಮೆ ಕೈಯಲ್ಲಿ ಹಿಡಿದರೆ ಎರಡು ಪರದೆಗಳಿವೆ ಎನ್ನುವ ಯಾವುದೇ ಕುರುಹು ಗೋಚರಿಸುವುದಿಲ್ಲ. ಮೊಬೈಲ್‌ನ ಕೆಳ ಭಾಗದ ಬಲ ಮೂಲೆಯಿಂದ ಪರದೆಯನ್ನು ನೂಕಿದರೆ ದೊಡ್ಡ ಪರದೆ ಅಗಲವಾಗಿ ತೆರೆದುಕೊಂಡು ಚಿಕ್ಕ ಪರದೆ ಕೆಳಗೆ ಲಂಬವಾಗಿ ಉಳಿದುಕೊಳ್ಳುತ್ತದೆ. ದೊಡ್ಡ ಪರದೆಯನ್ನು ಬಲ ಭಾಗದಿಂದ ಮತ್ತೆ ನೂಕಿದರೆ ಅದರ ಸ್ವಸ್ಥಾನಕ್ಕೆ
ಮರಳುತ್ತದೆ. ಎರಡೂ ಪರದೆಗಳನ್ನು ವಿಭಿನ್ನ ಕಾರ್ಯ ನಿರ್ವಹಿಸಲು ಏಕಕಾಲದಲ್ಲಿ ಉಪಯೋಗಿಸುವುದು ಇದರ ವಿಶೇಷತೆ.