Sunday, 15th December 2024

ದ್ವಿತ್ವ ಫಸ್ಟ್‌ ಲುಕ್ ರಿಲೀಸ್‌: ಹೊಸ ಲುಕ್‌ನಲ್ಲಿ ಅಪ್ಪು

ಲೂಸಿಯಾ ಸಿನಿಮಾ ಖ್ಯಾತಿಯ ನಿರ್ದೇಶಕ ಪವನ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್‌ಗಾಗಿ ಕಥೆ ಹೆಣೆದಿದ್ದು, ಚಿತ್ರಕ್ಕೆ ಆಕ್ಷನ್‌ಕಟ್ ಹೇಳಲಿದ್ದಾರೆ ಎಂಬ ವಿಚಾರ ಹಲವು ದಿನಗಳಿಂದಲೂ ಕೇಳಿಬಂದಿತ್ತು. ನಿರ್ದೇಶಕ ಪವನ್, ಪವರ್‌ಸ್ಟಾರ್‌ಗಾಗಿ ಎಂತಹ ಕಥೆ ಹೆಣೆದಿರಬಹುದು. ಚಿತ್ರದ ಶೀರ್ಷಿಕೆ ಏನಿರಬಹುದು ಎಂಬ
ಕುತೂಹಲ ಅಪ್ಪು ಅಭಿಮಾನಿಗಳಲ್ಲಿತ್ತು. ಈಗ ಅದಕ್ಕೆಲ್ಲ ಉತ್ತರ ಸಿಕ್ಕಿದ್ದು, ಪವರ್ ಸ್ವಾರ್ ಹಾಗೂ ಪವನ್ ಕಾಂಬಿನೇಶನ್ ಸಿನಿಮಾ ಅಧಿಕೃತವಾಗಿ ಘೋಷಣೆ ಯಾಗಿದೆ.

ಚಿತ್ರದ ಟೈಟಲ್ ರಿವಿಲ್ ಆಗಿದ್ದು, ದ್ವಿತ್ವ ಎಂಬ ಶೀರ್ಷಿಕೆಯಲ್ಲಿ ಹೊಸಚಿತ್ರ ಮೂಡಿಬರಲಿದೆ. ಚಿತ್ರದ ಫಸ್ಟ್‌ಲುಕ್ ಕೂಡ ಬಿಡುಗಡೆಯಾಗಿದ್ದು, ಅಪ್ಪು ಲುಕ್ ವಿಭಿನ್ನ ವಾಗಿ ಮೂಡಿಬಂದಿದೆ. ದ್ವಿತ್ವ ಎಂದರೆ ಎರಡು ಬಗೆ ಎಂದರ್ಥ. ಹಾಗಾಗಿ ಚಿತ್ರದಲ್ಲಿ ಪುನೀತ್, ಎರಡು ಶೇಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರ ಎಂಬ ಕುತೂಹಲ ಕೂಡ ಮೂಡುತ್ತದೆ. ಸೈಕಲಾಜಿಕಲ್ ಥ್ರಿಲ್ಲರ್ ಮಾದರಿಯಲ್ಲಿ ದ್ವಿತ್ವ ಮೂಡಿಬರಲಿದ್ದು, ಇದು ಗ್ಲೋಬಲ್ ಸ್ಕೇಲ್ ಸಿನಿಮಾ ಎಂದು ಪವನ್ ಈ ಹಿಂದೆಯೇ ಸ್ಪಷ್ಟಪಡಿ ಸಿದ್ದರು.

ದ್ವಿತ್ವ ಹೊಂಬಾಳೆ ಫಿಲಂಸ್ ಬ್ಯಾನರ್‌ನಲ್ಲಿ ಮೂಡಿಬರಲಿದೆ ಎಂಬುದು ವಿಶೇಷ. ಯುವರತ್ನ ಬಳಿಕ ಹೊಂಬಾಳೆ ಫಿಲಂಸ್ ಬ್ಯಾನರ್‌ನಲ್ಲಿ ಪುನೀತ್ ರಾಜ್‌ಕುಮಾರ್
ನಟಿಸುತ್ತಿರುವ ಎರಡನೇ ಚಿತ್ರ ಇದಾಗಿದೆ. ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ, ಪ್ರೀತಮ್ ಜಯರಾಮ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಇನ್ನು ಅಪ್ಪು ಜತೆ ನಾಯಕಿಯಾಗಿ ಯಾರು ನಟಿಸಲಿದ್ದಾರೆ ಎಂಬುದನ್ನು ಚಿತ್ರತಂಡ ಬಹಿರಂಗಪಡಿಸಿಲ್ಲ. ನಿರ್ದೇಶಕ ಪವನ್, ಯೂ ಟರ್ನ್ ಸಿನಿಮಾದ ಬಳಿಕ ಯಾವುದೇ ಚಿತ್ರವನ್ನು ನಿರ್ದೇಶನ ಮಾಡಿರಲಿಲ್ಲ. ಈಗ ಲಾಂಗ್‌ಗ್ಯಾಪ್ ಬಳಿಕ ಪವನ್ ಚಿತ್ರ ನಿರ್ದೇಶನಕ್ಕೆ ಧುಮುಕಿದ್ದಾರೆ.

ಸೆಪ್ಟೆಂಬರ್‌ನಿಂದ ದ್ವಿತ್ವ, ಚಿತ್ರೀಕರಣ ಆರಂಭಿಸಲಿದೆ. ಚಿತ್ರೀಕರಣಕ್ಕೆ ಹೊರಟ ಪವರ್‌ಸ್ಟಾರ್ ಪವರ್ ಸ್ಟಾರ್ ಪನೀತ್‌ರಾಜ್‌ಕುಮಾರ್ ಜೇಮ್ಸ್ ಚಿತ್ರದಲ್ಲಿ ಬ್ಯುಸಿ ಯಾಗಿದ್ದಾರೆ. ಜೇಮ್ಸ್ ಚಿತ್ರತಂಡ ಇಲ್ಲಿಯವರೆಗೆ ಬೆಂಗಳೂರು, ಹೊಸಪೇಟೆ, ಕಾಶ್ಮೀರ ಸೇರಿದಂತೆ ಸುಂದರ ತಾಣಗಳಲ್ಲಿ ಶೇಕಡ ಎಪ್ಪತ್ತರಷ್ಟು ಚಿತ್ರೀಕರಣವನ್ನು
ಮುಗಿಸಿತ್ತು. ಉಳಿದ ಭಾಗದ ಚಿತ್ರೀಕರಣಕ್ಕೆ ತೆರಳುವ ಸಮಯಕ್ಕೆ ಕರೋನಾ ಕಾಡಿತ್ತು. ಲಾಕ್‌ಡೌನ್‌ನಿಂದಾಗಿ ಚಿತ್ರರಂಗದ ಚಟುವಟಿಕೆಗಳು ಸ್ಥಗಿತ ಗೊಂಡಿದ್ದವು. ಈಗ ಸರಕಾರವು ಶೂಟಿಂಗ್ ಗೆ ಅನುಮತಿ ನೀಡಿದ್ದರಿಂದ ನಿರ್ದೇಶಕ ಚೇತನ್‌ಕುಮಾರ್ ಚಿತ್ರೀಕರಣಕ್ಕೆ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಜುಲೈ ೫ರಿಂದ ಪುನೀತ್ ರಾಜ್‌ಕುಮಾರ್ ಚಿತ್ರತಂಡ ಸೇರಿಕೊಳ್ಳಲಿದ್ದಾರೆ. ಶೇಕಡ ೩೦ರಲ್ಲಿ ಮಾತಿನ ಭಾಗ, ಸಾಹಸ ಮತ್ತು ಹಾಡನ್ನು ಸೆರೆಹಿಡಿದರೆ
ಕುಂಬಳ ಕಾಯಿ ಒಡೆಯವುದಷ್ಟೇ ಬಾಕಿಯಾಗುತ್ತದೆ. ಯಶಸ್ವಿ ಚಿತ್ರ ರಾಜಕುಮಾರ ಚಿತ್ರದಲ್ಲಿ ಅಪ್ಪುಗೆ ನಾಯಕಿಯಾಗಿ ನಟಿಸಿದ್ದ, ಪ್ರಿಯಾ ಆನಂದ್ ಎರಡನೆ ಬಾರಿಗೆ ಜೇಮ್ಸ್ ಚಿತ್ರದಲ್ಲಿ ಪವರ್ ಸ್ಟಾರ್‌ಗೆ ಜೋಡಿಯಾಗಿದ್ದಾರೆ.

ಉಳಿದಂತೆ ಶ್ರೀಕಾಂತ್, ಆದಿತ್ಯ ಮೆನನ್, ಅನು ಪ್ರಭಾಕರ್, ರಂಗಾಯಣರಘು, ಮುಖೇಶ್ ರುಷಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಟಗರು
ಖ್ಯಾತಿಯ ಚರಣ್‌ರಾಜ್ ಸಂಗೀತ, ಸ್ವಾಮಿ.ಜೆ.ಗೌಡ ಛಾಯಾಗ್ರಹಣ, ದೀಪು.ಎಸ್.ಕುಮಾರ್ ಸಂಕಲನ, ರಾಮ್ -ಲಕ್ಷಣ್, ರವಿವರ್ಮ ಸಾಹಸ ಮತ್ತು ಎ.ಹರ್ಷ ಅವರ ನೃತ್ಯ ನಿರ್ದೇಶನ ಚಿತ್ರಕ್ಕಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಸಂತೆಯಲ್ಲಿ ನಿಂತ ಕಬೀರ ಚಿತ್ರ ನಿರ್ಮಾಣ ಮಾಡಿರುವ ಹೊಸಪೇಟೆಯ ಕಿಶೋರ್ ಪತ್ತಿಕೊಂಡ ಕಿಶೋರ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಜೇಮ್ಸ್ ಚಿತ್ರ ನಿರ್ಮಾಣಕ್ಕೂ ಬಂಡವಾಳ ಹೂಡುತ್ತಿದ್ದಾರೆ.