Saturday, 14th December 2024

ಮಾಯವಾಗುವ ಮಾತು !

ಯುವಜನತೆ ಹೊಸತನವನ್ನು ಸದಾ ಬಯಸುವ ಉತ್ಸಾಹದ ಚಿಲುಮೆ. ಆ ಒಂದು ಮನೋಧರ್ಮವನ್ನು ತಮ್ಮ ಲಾಭಕ್ಕೆ, ಜನಪ್ರಿಯತೆಗೆ ಉಪಯೋಗಿಸಿಕೊಳ್ಳುತ್ತಿರುವ ಸಾಮಾಜಿಕ ಮಾಧ್ಯಮಗಳು ಹೊಸ ಹೊಸ ಫೀಚರ್‌ಗಳನ್ನು ಆಗಾಗ ಅಳವಡಿಸು ತ್ತಲೇ ಇವೆ. ಮೆಸೇಜ್ ಡಿಲೀಟ್ ವಿಚಾರದಲ್ಲೇ ಹಲವು ಹೊಸತನಗಳು ಕಾಲಿಡುತ್ತಿವೆ. ಅಂದ ಹಾಗೆ, ಮೆಸೇಜ್ ಅಥವಾ ಸ್ಟೋರಿ ಕಣ್ಮರೆಯಾಗುವ ವ್ಯವಸ್ಥೆಯನ್ನು ಮೊತ್ತ ಮೊದಲಿಗೆ ಅಳವಡಿಸಿದ್ದು ಸ್ನ್ಯಾಪ್‌ಚಾಟ್. ಅದನ್ನು ಇತರ ಸಂಸ್ಥೆಗಳು ಅನುಕರಿಸಿ ದವಾ? ಓದಿ ನೋಡಿ.

ಬಡೆಕ್ಕಿಲ ಪ್ರದೀಪ್ 

ಟೆಕ್ ಟಾಕ್

ಮಾತು ಆಡಿದ್ರೆ ಹೋಯ್ತು, ಮುತ್ತು ಒಡೆದ್ರೆ ಹೋಯ್ತು ಅನ್ನುವ ಗಾದೆ ಮಾತಿಗೂ ಇಂದಿನ ಜನರ ಚ್ಯಾಟ್ ಸಡಗರದ ಚಟಪಟ ಮಾತಿಗೂ ಯಾವುದೇ ಸಂಬಂಧ ಇಲ್ಲ. ನೋಡ್ ನೋಡ್ತಿದ್ದ ಹಾಗೆ ಹೆಚ್ಚಿನೆಲ್ಲಾ ಚ್ಯಾಟ್‌ಗಳನ್ನು ಮತ್ತು ಸಂದೇಶಗಳನ್ನು ಡಿಲೀಟ್ ಮಾಡುವ ಅಥವಾ ತನ್ನಿಂತಾನೇ ಮಾಯವಾಗುವ ವ್ಯವಸ್ಥೆ ಹೊರ ಬರ್ತಾ ಇದೆ.

ಈ ರೀತಿಯ ಚ್ಯಾಟ್‌ಗಳು ಬರುವುದಕ್ಕೆ ಕಾರಣಗಳು ಹಲವಾದರೂ ಕೊನೆಯಲ್ಲಿ ನಾವು ಆಡುವ ಮಾತು, ನೀಡುವ ವಚನ, ಎರಡೂ ಹೆಚ್ಚು ಕಾಲ ಆನ್‌ಲೈನ್‌ನಲ್ಲಿ ಬಾಳಿಕೆ ಬರುವುದಿಲ್ಲವಲ್ಲಾ ಅನ್ನುವ ವೇದಾಂತ ನುಡಿಯುವವರನ್ನು ಸ್ವಲ್ಪ ಕಡೆಗಣಿಸಿ, ಇಂದಿನ ಯುಗದ ಜಗದ ರೀತಿ ರಿವಾಜುಗಳನ್ನು ಮುಂದಿಟ್ಟುಕೊಂಡು ಈ ತನ್ನಿಂತಾನೇ ಡಿಲೀಟ್ ಆಗುವ ಅಥವಾ ಮಾಯವಾ ಗುವ ಅಥವಾ ಒಟ್ಟಾರೆಯಾಗಿ ಕಳುಹಿಸಿದ ಮೆಸೇಜ್‌ನ ಮೇಲೆ ನಾವು ನಮ್ಮ ನಿಯಂತ್ರಣ ಇರಿಸಿಕೊಳ್ಳುವ ಹಾದಿಗಳ ಬಗ್ಗೆ ಸಣ್ಣ ದೊಂದು ಅವಲೋಕನ ಮಾಡಿಬಿಡೋಣ.

ಮೊದಲನೆಯದಾಗಿ, ಈ ವಿಚಾರದ ಕುರಿತು ಮಾತನಾಡಲು, ಕಳೆದ ಬಾರಿ ಸುದ್ದಿಯಲ್ಲಿದ್ದ ಅದೇ ವಾಟ್ಸ್ಯಾಪ್ ಕೂಡ ಕಾರಣ ಅನ್ನೋಣ, ಯಾಕೆಂದರೆ ವಾಟ್ಸ್ಯಾಪ್ ಸೇರಿದಂತೆ ಫೇಸ್ಬುಕ್ ತನ್ನ ಮೆಸೆಂಜರ್ ಹಾಗೂ ಇನ್ಸ್ಟಾಗ್ರಾಮ್ನಲ್ಲೂ ಈ ಮಾಯವಾಗುವ ಸಂದೇಶಗಳ ವ್ಯವಸ್ಥೆಯನ್ನು ಚಾರಿಗೆ ತರುತ್ತಿದೆ.

ಹಿಂದೆ ಹೇಗಿತ್ತು?
ಒಂದೆಡೆ ಹಿಂದೆ ಕಳುಹಿಸುತ್ತಿದ್ದ ಸಂದೇಶಗಳನ್ನು ನಾವು ಒಮ್ಮೆ ಕಳುಹಿಸಿದರೆ ಅದು ಕಳುಹಿಸಿದವರಿಗೆ ತಲುಪಿದೆಯೇ ಅಥವಾ ಇಲ್ಲವೇ ಅನ್ನುವುದನ್ನು ತಿಳಿಯುವುದಕ್ಕೆ ನಾವು ಅವರಿಂದ ಬರುವ ಉತ್ತರಕ್ಕಾಗಿ ಕಾಯಬೇಕಾಗಿತ್ತು. ಕೆಲ ದಶಕಗಳ ಹಿಂದೆ ಅಂಚೆ ಮೂಲಕ ಪತ್ರ ಬರೆಯುತ್ತಿದ್ದವರ ಫೀಲಿಂಗ್ ಕೆಲವೇ ವರ್ಷಗಳ ಹಿಂದೆ ಎಸ್‌ಎಂಎಸ್ ಕಳುಹಿಸುವವರದೂ ಆಗಿತ್ತು. ಸಂದೇಶ ಕಳಿಸಬೇಕು, ಅದು ತಲುಪ ಬೇಕು, ಅವರು ಅದನ್ನು ತೆರೆದು ನೋಡಬೇಕು, ನಂತರ ಸ್ವೀಕರಿಸಿದೆ ಎಂದು ತಿಳಿಸಬೇಕು, ಆಗ ತಾನೆ ಆ ಸಂದೇಶ ತಲುಪಿತು ಎಂದು ಗೊತ್ತಾಗುತ್ತಿತ್ತು. ಅಂದರೆ ಅಂಚೆಯ ಮೂಲಕ ಪತ್ರ ಬರೆದ ಯದ್ವತ್ ನಕಲು. ಅದಾದ ನಂತರ ಅದರಲ್ಲಿ ಡೆಲಿವರಿ ಆದ, ನಂತರ ನಿಧಾನವಾಗಿ ಓದಿದ ಮಾಹಿತಿಯೂ ಒಂದೊಂದಾಗಿ ಬರತೊಡಗಿತು. ಇಲ್ಲದಿದ್ದರೆ, ಅಯ್ಯೋ ನಿನ್ನ ಮೆಸೇಜ್ ಬರ್ಲೇ ಇಲ್ಲ ಅಂದರೂ ನಡೆಯುತ್ತಿತ್ತು.

ಆಗಿನ ಸಮಯದಲ್ಲಿ ಮೆಸೇಜ್ ತಲುಪಿದ್ದು ಗೊತ್ತಾದ್ರೆ ಸಾಕಪ್ಪಾ ಅನ್ನುವ ತಲೆಬಿಸಿ ಸಾಮಾನ್ಯವಾಗಿದ್ದರೆ, ಅದಾದ ನಂತರದ ಸರದಿ ತಪ್ಪಿ ಕಳುಹಿಸಿದ ಸಂದೇಶಗಳನ್ನೇನು ಮಾಡೋದು. ಆವೇಶದಲ್ಲಿ ಕಳುಹಿಸಿದ ಸಂದೇಶಗಳ ಕಥೆ ಏನು, ಅವನ್ನ ಹೇಗಪ್ಪಾ ಹಿಂದಕ್ಕೆ ಕರೆಸಿಕೊಳ್ಳೋದು? ಹೀಗೇ ತಪ್ಪಿ ಕಳುಹಿಸಿದ ಮೆಸೇಜ್‌ಗಳನ್ನು ಹಿಂಪಡೆಯಲಾಗದೇ ಅವೆಷ್ಟೋ ಗೆಳೆತನ- ಸಂಬಂಧಗಳು ಹಾಳಾಗಿ ಹೋಗಿಲ್ಲ ಹೇಳಿ? ಜೊತೆಗೆ ತಮ್ಮ ಆಪ್ತರಿಗೆ ಕಳುಹಿಸುವ ಸಂದೇಶಗಳನ್ನು ತಪ್ಪಿ ವಿರೋಧಿಗಳಿಗೋ, ಸೀನಿಯರ್‌ಗಳಿಗೋ ಅಥವಾ, ತಂದೆ ತಾಯಿಗೋ ಕಳುಹಿಸುವ ಮೂಲಕ ಅದೇನೇನು ಪೇಚಿಗೆ ಸಿಲುಕಿದ ಕಥೆಗಳಿಗೆ ಕೊನೆಮೊದಲಿಲ್ಲ.

ಕಡ್ಡಿ ಮುರಿದ ಸ್ನ್ಯಾಪ್ ಚಾಟ್ ಹೀಗೆ ಈ ಎಲ್ಲಾ ತಲೆನೋವುಗಳ ಜೊತೆಗೆ ಇನ್ನೊಂದು ತಲೆ ನೋವು, ಫೋನ್‌ಗಳಲ್ಲಿ ತುಂಬುವ ಡೇಟಾದ್ದು ಹಾಗೂ ಗೌಪ್ಯತೆಯದು. ಈ ವಿಚಾರವೂ ಇರೋದ್ರಿಂದ, ಕೇವಲ ನಾವು ಕಳುಹಿಸಿದ ಸಂದೇಶಗಳು ನಮ್ಮ ಫೋನ್‌ನಲ್ಲಿ ಮಾತ್ರವಲ್ಲ, ಸಂದೇಶ ಸ್ವೀಕರಿಸಿದವರ ಫೋನ್‌ನಲ್ಲೂ ಕಾಣದಾಗಬೇಕೆನ್ನುವ ಉದ್ದೇಶದಿಂದ ಶುರುವಾದ ಈ ವ್ಯವಸ್ಥೆಯನ್ನು
ಮೊದಲಿಗೆ ಶುರು ಮಾಡಿದ್ದು ‘ಸ್ನ್ಯಾಪ್‌ಚಾಟ್’. 2011ರಲ್ಲಿ ಫೇಸ್‌ಬುಕ್‌ನಂತಹ ಆ್ಯಪ್‌ಗಳಲ್ಲಿ ತಮ್ಮ ಪೋಸ್ಟ್‌‌ಗಳ ಇತಿಹಾಸದ ಕಾರಣ ಟೆನ್ಶನ್ಗೊಳಗಾಗುವ ಯುವಜನತೆಗಾಗಿ ಸಿದ್ಧವಾದ, ಕಳುಹಿಸಿದ ಚಿತ್ರ-ಸಂದೇಶ, ವಿಡಿಯೋ ಕ್ಷಣಗಳಲ್ಲೇ ಮಾಯವಾಗುವ ವ್ಯವಸ್ಥೆಯುಳ್ಳ ಸ್ನ್ಯಾಪ್‌ಚಾಟ್ ಹೈಸ್ಕೂಲ್-ಕಾಲೇಜ್ ವಿದ್ಯಾರ್ಥಿಗಳ ಸೂಪರ್‌ಹಿಟ್ ಆಪ್ ಎನಿಸಿತು.

ಇನ್ನು ಈಗ ನಾವು ಕಾಣುವ ವಾಟ್ಸ್ಯಾಪ್-ಫೇಸ್ಬುಕ್-ಇನ್ಸ್ಟಾ, ಅಷ್ಟೇಕೆ ಇದೀಗ ಯೂಟ್ಯೂಬ್-ಟ್ವಿಟರ್‌-ಲಿಂಕ್ಡ್ ಇನ್’ಳಲ್ಲೂ ಇರುವ ಸ್ಟೋರೀಸ್ ಅನ್ನುವ ಪೋಸ್ಟ‌ ಮಾಡಿ 24 ಗಂಟೆಗಳೊಳಗೆ ಮಾಯವಾಗುವ ಪರಿಕಲ್ಪನೆಗೆ ಮೊದಲಡಿಯಿಟ್ಟಿದ್ದೂ ಇದೇ ಸ್ನ್ಯಾಪ್‌ಚಾಟ್. ಹೀಗೇ ಆರಂಭ ಸ್ನ್ಯಾಪ್‌ಚಾಟ್‌ನಲ್ಲಿ ಆದರೂ ಕೆಲ ವರ್ಷಗಳ ಹಿಂದೆ ಫೇಸ್‌ಬುಕ್‌ನಲ್ಲಿ ಸೀಕ್ರೆಟ್ ಮಾತುಕತೆ ಮಾಡುವ ವ್ಯವಸ್ಥೆ ಶುರುವಾಗಿದ್ದು, ಅಲ್ಲಿ ನೀವು ಕಳುಹಿಸಿದ ಸಂದೇಶ ಅಥವಾ ಚಿತ್ರ-ವಿಡಿಯೋಗಳು ಕೆಲವೇ ಕ್ಷಣಗಳಲ್ಲಿ ಮಾಯವಾಗುವ ರೀತಿಯ ಸೆಟಿಂಗ್ ಮಾಡಿಕೊಳ್ಳಬಹುದಾಗಿತ್ತು.

ಇನ್ಸ್ಟಾಗ್ರಾಂ ವ್ಯವಸ್ಥೆ
ಇನ್ನು ಇನ್ಸ್ಟಾಗ್ರಾಮ್ ಅನ್ನುವ ಇನ್ನೊಂದು ಯುವಜನತೆಯ ಹತ್ತಿರದ ಆ್ಯಪ್‌ನಲ್ಲಂತೂ ಇರುವ ಚ್ಯಾಟ್ ಫೀಚರ್‌ನ ಮೂಲಕ ಜನ ಕಳುಹಿಸಿದ ಮೆಸೇಜ್ ಅನ್ನು ಡಿಲೀಟ್ ಮಾಡಿದ್ದು ಗೊತ್ತೇ ಆಗದ ಹಾಗೆ ಅದು ವ್ಯಾನಿಶ್ ಆಗುವ ವ್ಯವಸ್ಥೆ ಹಿಂದಿನಿಂದಲೇ ಇದೆ.

ಇತ್ತೀಚೆಗೆ ಫೇಸ್‌ಬುಕ್ ಮೆಸೆಂಜರ್‌ನಲ್ಲೂ ಈ ಮೆಸೇಜ್ ಗಳನ್ನು ರಿಮೂವ್ ಮಾಡುವ ವ್ಯವಸ್ಥೆ ಇರೋ ರೀತಿಯಲ್ಲೇ ವಾಟ್ಸ್ಯಾಪ್ ‌ನಲ್ಲೂ ಮೆಸೇಜ್ ಡಿಲೀಟ್ ಮಾಡುವ ವ್ಯವಸ್ಥೆಯನ್ನು ಸುಮಾರು ಮೂರು ವರ್ಷಗಳ ಹಿಂದೆ ಲಾಂಚ್ ಮಾಡಿ ಅದರ ಮೂಲಕ ಒಂದು ಗಂಟೆ 8 ನಿಮಿಷ 16 ಸೆಕೆಂಡುಗಳೊಳಗಾಗಿ ಕಳುಹಿಸಿದ ಸಂದೇಶವನ್ನು ಡಿಲೀಟ್ ಮಾಡಲು ಅವಕಾಶ ಕೊಟ್ಟಿತ್ತು.

ಇನ್ನು ಈ ಮೆಸೇಜುಗಳನ್ನು ಯಾವುದಾದರೂ ಆ್ಯಪ್ ಮೂಲಕ ಅಥವಾ ನೋಟಿಫಿಕೇಶನ್ ಹಿಸ್ಟರಿ ಮೂಲಕ ಕಂಡುಹಿಡಿಯುವ
ವ್ಯವಸ್ಥೆಯನ್ನೂ ಜನ ಕಂಡುಕೊಂಡದ್ದು ಒಂದೆಡೆಯಾದರೆ, ಒಟ್ಟಾರೆಯಾಗಿ ಸಂದೇಶ ಕಳುಹಿಸಿ ಅಯ್ಯೋ ಅಂತ ನಾಲಿಗೆ ಕಚ್ಚಿ ಕೊಳ್ಳುವವರಿಗೆ ಒಂದು ಮಟ್ಟಿನ ನಿರಾಳತೆಯನ್ನು ನೀಡಿತ್ತು.

ಇವೆಲ್ಲವುದರ ಜೊತೆಗೆ ಫೇಸ್‌ಬುಕ್ ಇತ್ತೀಚೆಗೆ ತನ್ನ ಮೆಸೆಂಜರ್ ಹಾಗೂ ಇನ್ಸ್ಟಾಗ್ರಾಮ್ ಚ್ಯಾಟ್ ಅನ್ನು ಜೊತೆಯಾಗಿಸುವ ಹಾದಿ ಯಲ್ಲಿದ್ದು, ಇದೀಗ ಮೊದಲಿಗೆ ಮೆಸೆಂಜರ್‌ನಲ್ಲಿ ಕಳುಹಿಸುವ ಸಂದೇಶವನ್ನು ತಂತಾನೇ ಮಾಯವಾಗುವ ವ್ಯವಸ್ಥೆಯನ್ನು ಅದು ತರುತ್ತಿದೆ. ಮುಂದೆ ಇನ್ಸ್ಟಾಗ್ರಾಮ್ನಲ್ಲಿಯೂ ಈ ಆಪ್ಶನ್ನನ್ನು ನೀಡಲಿದೆಯಂತೆ.

ಒಟ್ಟಾರೆ ಸ್ನ್ಯಾಪ್‌ಚಾಟ್ ಮೊದಲು ಆರಂಭಿಸಿದ್ದ ಹಲವು ಫೀಚರ್‌ಗಳು ಇದೀಗ ಹಲವೆಡೆ ಬಳಕೆಯಾಗುತ್ತಿದ್ದು, ಗೌಪ್ಯತೆಯ ಪರಮಾವಧಿಯಾಗಿ ಇವೆಲ್ಲಾ ಪರಿವರ್ತನೆ ಯಾಗುತ್ತಿರುವುದರ ಸಂದೇಶವಾದರೂ ಏನು?

ಒಂದು ವಾರದಲ್ಲಿ ಮೆಸೇಜ್ ಮಾಯ
ಇದೀಗ ವಾಟ್ಸ್ಯಾಪ್ ಹೊರತಂದಿರುವ ಈ ವ್ಯವಸ್ಥೆಯನ್ನು ನೀವು ಎನೇಬಲ್ ಮಾಡಿಕೊಳ್ಳಬೇಕು, ಹಾಗೂ ಪ್ರತಿಯೊಂದು ಗ್ರೂಪ್ ಅಥವಾ ಚ್ಯಾಟ್‌ಗೆ ಇದನ್ನು ಪ್ರತ್ಯೇಕವಾಗಿ ಎನೇಬಲ್ ಮಾಡಿಕೊಳ್ಳಬೇಕು. ಆಯಾ ಕಾಂಟ್ಯಾಕ್ಟ್‌ ಅಥವಾ ಗ್ರೂಪ್ ಪ್ರೊಫೈಲ್‌ಗೆ
ಹೋಗಿ ಅಲ್ಲಿ ಮಾಯವಾಗುವ ಸಂದೇಶಗಳ ಆಯ್ಕೆಯನ್ನು ಮಾಡಿಕೊಂಡರೆ ಅಲ್ಲಿಂದ ನಂತರ ನೀವು ಕಳುಹಿಸಿದ ಸಂದೇಶಗಳು ಒಂದು ವಾರದಲ್ಲಿ ಮಾಯವಾಗುತ್ತದೆ. ಹಾಗೂ ಇದೀಗ ಟ್ರಯಲ್ ಆಗಿ ಒಂದು ವಾರದ ಕಾಲಾವಕಾಶ ನೀಡಿರುವ ವಾಟ್ಸ್ಯಾಪ್
ಅದನ್ನು ಮುಂದಿನ ದಿನಗಳಲ್ಲಿ ಹೆಚ್ಚೋ ಕಮ್ಮಿಯೋ ಮಾಡಲಿದೆಯೇ, ಅಥವಾ ನಾವೇ ಆಯ್ಕೆ ಮಾಡುವ ವ್ಯವಸ್ಥೆ ಬರಲಿ ದೆಯೇ? ಗೊತ್ತಿಲ್ಲ