Sunday, 15th December 2024

ಫ್ಯಾಂಟಸಿಗೆ ಕುಂಬಳಕಾಯಿ

ಇತ್ತೀಚೆಗಷ್ಟೇ ಚಿತ್ರೀಕರಣ ಶುರುಮಾಡಿದ್ದ ಫ್ಯಾಂಟಸಿ ತಂಡ ಇದೀಗ ಕುಂಬಳಕಾಯಿ ಒಡೆದು, ಚಿತ್ರೀಕರಣ ಮುಗಿಸಿಕೊಂಡ ಸಂಭ್ರಮದಲ್ಲಿದೆ.

ಕೇವಲ 24 ದಿನದಲ್ಲಿ ಶೂಟಿಂಗ್ ಕಂಪ್ಲೀಟ್ ಮಾಡಿಕೊಂಡಿದೆ. ಪವನ್ ಡ್ರೀಮ್ ಫಿಲಂಸ್ ಲಾಂಛನದಲ್ಲಿ ಸಿದ್ಧವಾಗಿರುವ ಫ್ಯಾಂಟಸಿ’ ಚಿತ್ರಕ್ಕೆ ಪವನ್ ಕುಮಾರ್, ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜತೆಗೆ ನಿರ್ಮಾಣವನ್ನೂ ಮಾಡಿದ್ದಾರೆ. ನಿರ್ದೇಶಕ ಗುರು ದೇಶಪಾಂಡೆ ಅವರೊಂದಿಗೆ ಸಂಹಾರ’ ಸಿನಿಮಾದ ಮೂಲಕ ಸಹಾಯಕ ನಿರ್ದೇಶಕರಾಗಿ ಚಂದನವನಕ್ಕೆ ಬಂದ ಪವನ್, ಫ್ಯಾಂಟಸಿ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ.

ಇಂಜಿನಿಯರಿಂಗ್ ಅರ್ಧಕ್ಕೆ ಬಿಟ್ಟು, ಸಿನಿಮಾ ಬೆನ್ನಹಿಂದೆ ಬಿದ್ದೆ. ಅಪ್ಪ ಅಮ್ಮನಿಂದಲೂ ಸಾಥ್ ಸಿಕ್ಕಿತು. ಒಳ್ಳೆಯ ಕಥೆಯೂ
ಸಿದ್ಧವಾಯಿತು. ನಾನೇ ನಿರ್ಮಾಣ ಮಾಡುವ ಬಗ್ಗೆ ನಿರ್ಧರಿಸಿ ಕೆಲಸ ಆರಂಭಿಸಿದೆ. ಕಂಟೆಂಟ್ ಎಷ್ಟೇ ಗಟ್ಟಿಯಾಗಿದ್ದರು ಅದನ್ನು
ಪರಿಣಾಮಕಾರಿಯಾಗಿ ತೆರೆಗೆ ತರಲು ನನಗೆ ಒಳ್ಳೆಯ ಚಿತ್ರತಂಡವೇ ಸಿಕ್ಕಿತು. ಹಾಗಾಗಿ ಬೇಗ ಚಿತ್ರೀಕರಣ ಮುಗಿಸಲು ಸಾಧ್ಯವಾ ಯಿತು ಎನ್ನುತ್ತಾರೆ ಪವನ್.

ಚಿತ್ರದ ನಾಯಕಿಯಾಗಿ ಬಿಗ್‌ಬಾಸ್ ಖ್ಯಾತಿಯ ಪ್ರಿಯಾಂಕಾ ಬಣ್ಣಹಚ್ಚಿದ್ದಾರೆ. ‘ಬಿಗ್‌ಬಾಸ್‌ನಲ್ಲಿ ದಿನದೂಡಿದಂತೆ ಕರೋನಾ ದಲ್ಲಿಯೂ ಸಮಯ ಕಳೆದಿದ್ದೆವು. ಖುಷಿ ವಿಚಾರವನ್ನು ಕೇಳಿ ತುಂಬ ದಿನ ಆಗಿತ್ತು. ಆಗ ಸಿಕ್ಕ ಸಿಹಿ ಸುದ್ದಿಯೇ ಈ ಫ್ಯಾಂಟಸಿ
ಸಿನಿಮಾ. ಇದು ನನ್ನ ಮೊದಲ ಸಿನಿಮಾ ಆದರೂ, ಧಾರಾವಾಹಿಯಂತೆ ಇಲ್ಲಿಯು ನೆಗೆಟಿವ್ ಪಾತ್ರ ಮುಂದುವರಿದಿದೆ.

ಖಳನಟಿಯಾದರೂ ಚಿತ್ರದಲ್ಲಿ ಗುರುತಿಸುವ ಪಾತ್ರ ನನ್ನದಾಗಿದೆ ಎನ್ನುತ್ತಾರೆ ಪ್ರಿಯಾಂಕಾ. ಬಾಲರಾಜ್ ವಾಡಿ, ಭಾಸ್ಕರ್ ಪೊನ್ನಪ್ಪ ಪಾತ್ರದಲ್ಲಿ ನಟಿಸಿದ್ದಾರೆ. ಬಾಲನಟ ಅನುರಾಗ್ ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಛಾಯಾಗ್ರಾಹಣ ಪಿ.ಕೆ.ಎಚ್ ದಾಸ್, ಗಣೇಶ್ ನಾರಾಯಣ್ ಸಂಗೀತ ನೀಡಿದ್ದಾರೆ. ಶಶಿರಾಮ್ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಚಿತ್ರ, ಇನ್ನೇನು ಸೆನ್ಸಾರ್ ಅಂಗಳಕ್ಕೆ ತೆರಳಲಿದೆ.