Friday, 25th October 2024

ದುಬಾರಿ ಜಗತ್ತಿನಲ್ಲಿ ಬೈಕ್ ಆಯ್ಕೆ !

ಬೈಕೋಬೇಡಿ

ಅಶೋಕ್ ನಾಯಕ್

ಇಂದಿನ ದುಬಾರಿ ಜಗತ್ತಿನಲ್ಲಿ, ಜಮಾನಾದಲ್ಲಿ ಇಂಧನ ಉಳಿತಾಯ ಮಾಡುವ ವಾಹನ ಸಿಕ್ಕರೆ, ಬೋನಸ್ ಸಿಕ್ಕಿದಂತೆ. ಇದೊಂದು ಆಸೆಗೆ ಯಾರೂ ಹೊರತಲ್ಲ. ಇಂಧನ ಉಳಿತಾಯ, ಕಾಸ್ಟ್ ಕಟ್ಟಿಂಗ್ ಮುಂತಾದವುಗಳ ನಡುವೆ ಉತ್ತಮ ಫಲಿತಾಂಶ ಕಾಣುವುದು ಸವಾಲಾಗಿದೆ. ಆದರೆ, ನಮ್ಮಗಳ
ವಾಹನ ಕುರಿತ ಕ್ರೇಜ್ ಚೂರು ಕಮ್ಮಿಯಾಗಲ್ಲ. ಏನಂತೀರಿ?

ಕವಾಸಕಿ ಜೆಡ್ ೯೦೦

ಈ ಬೈಕಿನಲ್ಲಿ ೧೭ ಲೀಟರ್ ಇಂಧನ ಸಂಗ್ರಹ ಸಾಧ್ಯವಿದೆ. ಸುಮಾರು ಒಂಭತ್ತು ಲಕ್ಷ ರೂಪಾಯಿ ಯೊಂದಿಗೆ ಈ ಬೈಕ್ ಖರೀದಿಗೆ ಲಭ್ಯವಿದೆ. ಈ ಬೈಕಿಗೆ ಒಂದು ರೂಪಾಂತರ (ವೇರಿಯಂಟ್) ಮತ್ತು ಎರಡು ಬಣ್ಣಗಳಲ್ಲಿದೆ.. ಈ ಬೈಕ್ ತೂಕ ೨೧೨ ಕೆಜಿ. ಎರಡು ಬಣ್ಣಗಳ ಆಯ್ಕೆಯೊಂದಿಗೆ ಈ ಬೈಕ್ ಭಾರತದಲ್ಲಿ ಮಾರುಕಟ್ಟೆಗೆ ಇಳಿದಿದೆ. ಈ ಬೈಕಿನ ಹ್ಯಾಂಡಲ್ ಎಷ್ಟು ಪ್ರಯೋಜನಕಾರಿ ಎಂದರೆ, ಸ್ಪೋರ್ಟ್ಸ್, ಮಳೆಗಾಲ ಹಾಗೂ ಜಾಲಿ ರೈಡ್ ಮಾಡಲೂ ಕೂಡ ಹೆಚ್ಚು ಉಪಯುಕ್ತ. ಇದರ ಪ್ರಮುಖ್ಯ ಲಕ್ಷಣಗಳೆಂದರೆ, ಎಲ್‌ಇಡಿ ಇಲ್ಯುಮಿನೇಷನ್, ಟಿಎಫ್ಟಿ ಕನ್ಸೋಲ್ ಹಾಗೂ ಸ್ಮಾರ್ಟ್ ಫೋನ್ ಕನೆಕ್ಟಿವಿಟಿ ಸೌಲಭ್ಯ. ಗ್ರಾಹಕರ ಎರಡು ಆಯ್ಕೆಯೊಂದಿಗೆ ವಾಹನ ಖರೀದಿಸಬಹುದು.

ಮೆಟಾಲಿಕ್ ಮ್ಯಾಟ್ ಗ್ರಾಫೆನೆ ಸ್ಟೀಲ್ ಗ್ರೇ ಹಾಗೂ ಮೆಟಾಲಿಕ್ ಕಾರ್ಬನ್ ಗ್ರೇ. ಈ ಮಾಡೆಲ್‌ಗೆ ಟ್ರಿಯಂಪ್ ಸ್ಟ್ರೀಟ್ ಟ್ರಿಪಲ್ ಆರ್., ಡುಕಾಟಿ ಮಾನ್ಸ್ ಟರ್
ಹಾಗೂ ಬಿಎಂಡಬ್ಲ್ಯು ಎಫ್ ೯೦೦ ಆರ್ ಸ್ಪರ್ಧಿಗಳು.

ಯಮಹಾ ಆರ್೧೫ಎಸ್

೧೫೫ ಸಿಸಿ ಎಂಜಿನ್ ಸಾಮರ್ಥ್ಯ, ಪ್ರತಿ ಲೀಟರ್ ಪೆಟ್ರೋಲಿಗೆ ೪೫ ಕಿಮೀ. ನಷ್ಟು ಮೈಲೇಜ್, ೧೧ ಲೀಟರು ಇಂಧನ ಸಂಗ್ರಹ ಮುಂತಾದವು ಈ ಬೈಕಿನ ವಿಶೇಷತೆಗಳು. ಸುಮಾರು ಒಂದೂವರೆ ಲಕ್ಷ ರೂಪಾಯಿ ದರದೊಂದಿಗೆ ಈ ಮಾಡೆಲ್ ಖರೀದಿಗೆ ಲಭ್ಯವಿದೆ. ಒಂದೇ ರೂಪಾಂತರದಲ್ಲಿ ಈ ಬೈಕ್ ಲಭ್ಯ ವಿದ್ದು, ಈ ವಾಹನಕ್ಕೂ ಆಂಟಿ ಲಾಕಿಂಗ್ ಬ್ರೇಕಿಂಗ್ ಅಳವಡಿಸಲಾಗಿದೆ. ೧೪೨ ಕೆಜಿ ತೂಕದ ಈ ವಾಹನದಲ್ಲಿ ಸಿಂಗಲ್ ಪೀಸ್ ಸ್ಟೆಪ್‌ನ ಸೀಟು ವ್ಯವಸ್ಥೆ ಇದೆ. ಒಂದೇ ಪೈಂಟ್ ಬಳಸಿದ್ದು, ಅದು ಕೂಡ ರೇಸಿಂಗ್ ನೀಲಿ ಬಣ್ಣವಾಗಿದೆ. ಫೋರ್ ಸ್ಟ್ರೋಕ್, ಲಿಕ್ವಿಡ್ ಕೂಲ್, ಫೋರ್ ವಾಲ್ವ್ ಎಂಜಿನ್ ವಿವಿಎ ಮುಂತಾದವು ಯಾಂತ್ರಿಕ ಫೀಚರುಗಳು. ಆರು ಗೇರ್ ಬಾಕ್ಸ್ ಲಿಂಕ್ ಇದರಲ್ಲಿ ಇದೆ.