ಯುವ ಪೀಳಿಗೆಯ ಮನ ಸೆಳೆಯಲು, ಒಕಿನವಾ ಸಂಸ್ಥೆೆಯು ಮಾಲಿನ್ಯರಹಿತ ವಿನೂತನ ಸ್ಲೋೋ ಸ್ಪೀಡ್ ಇ-ಸ್ಕೂಟರ್ ಲೈಟ್ (ಔಐಉ) ಬಿಡುಗಡೆ ಮಾಡಿದೆ. ಇದರ ಎಕ್‌ಸ್ ಶೋರೂಮ್ ಬೆಲೆ ರು.59,990. ಯುವ ಸಮೂಹವನ್ನು ಗುರಿಯಾಗಿಸಿ ಮಾರುಕಟ್ಟೆೆಗೆ ಪರಿಚಯಿಸಿರುವ ಲೈಟ್ ಇ-ಸ್ಕೂಟರ್ ಇಟಲಿಯನ್ ವಿನ್ಯಾಾಸ ಹೊಂದಿದ್ದು ಪ್ರಕಾಶಮಾನ ಬಿಳಿ (ಖ್ಟ್ಝಛಿ ಜಿಠಿಛಿ) ಮತ್ತು ಪ್ರಕಾಶಮಾನ ನೀಲಿ (ಖ್ಟ್ಝಛಿ ಆ್ಝ್ಠಛಿ) ವರ್ಣಗಳಲ್ಲಿ ಲಭ್ಯವಿದೆ.
‘ಒನ್ ಆಲ್’ ಸಂದೇಶವನ್ನು ಸಾರುವ ಲೈಟ್ ಇ-ಸ್ಕೂಟರ್ ಯುವ ಸಮೂಹ ಸೇರಿದಂತೆ ಚಾಲನೆ ಮಾಡಲು ಎಲ್ಲರಿಗೂ ಸುಲಭ. ಇದರಲ್ಲಿ ದಕ್ಷ ಶಕ್ತಿಿಯ ಐಯಾನ್ ಬ್ಯಾಾಟರಿ ಅಳವಡಿಸಲಾಗಿದೆ. ಗ್ರಾಾಹಕರಿಗೆ ಹಣದ ಉಳಿತಾಯ ಮಾಡುವುದರ ಜತೆಗೆ ಲೈಟ್ ಪರಿಸರ ಸ್ನೇಹಿ ಕೂಡ ಆಗಿದೆ. 3 ವರ್ಷಗಳ ಮೋಟರ್ ಮತ್ತು ಬ್ಯಾಾಟರಿ ವಾರಂಟಿಯನ್ನು ಸಂಸ್ಥೆೆಯು ಗ್ರಾಾಹಕರಿಗೆ ಒದಗಿಸುತ್ತದೆ. ಬ್ಯಾಾಟರಿಯನ್ನು ಕಳ್ಳರಿಂದ ರಕ್ಷಿಸಲು ಆ್ಯಂಟಿ-ಥೆಫ್‌ಟ್ ಸೌಲಭ್ಯ ಅಳವಡಿಸಲಾಗಿದ್ದು ಬ್ಯಾಾಟರಿಯ ಕಳ್ಳತನ ಅಸಾಧ್ಯ.
ಎಲ್ಇಡಿ ಸ್ಪೀಡೊಮೀಟರ್, ಎಲ್ಇಡಿ ಎಲ್ಇಡಿ ವಿಂಕರ್ಸ್, ಎಲ್ಇಡಿ ಹಿಂಬದಿ ಲೈಟ್, ಅಟೋಮ್ಯಾಾಟಿಕ್ ಎಲೆಕ್ಟ್ರಿಿಕ್ ಹ್ಯಾಾಂಡಲ್, ಸೆಲ್ಫ್ ಸ್ಟಾಾರ್ಟ್ ಪುಶ್ ಬಟನ್, ಫ್ರಂಟ್ ಸಸ್ಪೆೆಂಷನ್ ವೈಶಿಷ್ಟ್ಯಗಳನ್ನು ‘ಲೈಟ್’ನಲ್ಲಿ ಅಳವಡಿಸಲಾಗಿದ್ದು ಗಟ್ಟಿಿಮುಟ್ಟಾಾದ ಸ್ಟೀಲ್ ಫ್ರೇಮ್ ಬಾಡಿ ಹೊಂದಿದೆ.
‘ಹೊಸ ‘ಲೈಟ್’ ಇ-ಸ್ಕೂಟರ್ ಬಿಡುಗಡೆ ಮಾಡುವುದರ ಮೂಲಕ ಪೆಟ್ರೋೋಲ್ ವಾಹನದ ಮೇಲಿನ ಅವಲಂಬನೆ ಕಡಿಮೆಯಾಗಿ, ಪರಿಸರಸ್ನೇಹಿ ಎಲೆಕ್ಟ್ರಿಿಕ್ ವಾಹನ ಜನಪ್ರಿಿಯಗೊಳ್ಳಲು ಪ್ರಯತ್ನ ನಡೆಸಿದ್ದೇವೆ. ಸುಲಲಿತವಾಗಿ ಚಲಿಸುವ ಈ ವಾಹನದ ಮೂಲಕ, ಇ-ಸ್ಕೂಟರ್‌ಗಳು ಕಡಿಮೆ ದಕ್ಷ ಎನ್ನುವ ನಂಬಿಕೆಯನ್ನು ಯುವ ಸಮೂಹವನ್ನು ಮನಸ್ಸಿಿನಲ್ಲಿ ಇಟ್ಟುಕೊಂಡು ಇದರ ವಿನ್ಯಾಾಸವನ್ನು ಮಾಡಲಾಗಿದೆ. ಮಹಿಳೆ ಮತ್ತು ವಯಸ್ಕರರಿಗೂ ಸಹ ‘ಲೈಟ್’ನ್ನು ಸುಲಭವಾಗಿ ಚಲಾಯಿಸುವಂತಹ ವಿನ್ಯಾಾಸದಲ್ಲಿ ತಯಾರಿಸಲಾಗಿದೆ ಎಂದು ಒಕಿನವಾ ಆಟೋಟೆಕ್ ಪ್ರೈ ಲಿ ಸಂಸ್ಥೆೆಯ ಅಧಿಕಾರಿಗಳು ಹೇಳಿಕೊಂಡಿದ್ದಾಾರೆ.
* ಬ್ಯಾಾಟರಿಯನ್ನು ಕಳ್ಳರಿಂದ ರಕ್ಷಿಸಲು ಆ್ಯಂಟಿ-ಥೆಫ್‌ಟ್ ವೈಶಿಷ್ಟ್ಯ ಅಳವಡಿಕೆ
* 3 ವರ್ಷಗಳ ಮೋಟರ್ ಮತ್ತು ಬ್ಯಾಾಟರಿ ವಾರಂಟಿ
* ಹಿಂಬದಿ ಸವಾರರ ಪಾದ ಇಡಲು ಇನ್ಬಿಿಲ್ಡ್ ಫುಟ್ ರೆಸ್‌ಟ್ ಅಳವಡಿಕೆ