ಬೈಕೋಬೇಡಿ
ಅಶೋಕ್ ನಾಯಕ್
ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್
ಪರಿಸರ ಮಾಲಿನ್ಯ ಕಡಿಮೆ ಮಾಡಲು ಎಲೆಕ್ಟ್ರಿಕ್ ವಾಹನವನ್ನು ಹೆಚ್ಚೆಚ್ಚು ಇಷ್ಟಪಡುತ್ತಾರೆ. ಅದರಲ್ಲೂ ಈಗ, ಕೆಲವು ರಾಜ್ಯ ಗಳಲ್ಲಿ ಸಾರ್ವಜನಿಕರು ಎಲೆಕ್ಟ್ರಿಕ್ ವಾಹನ ಖರೀದಿಸಲು ಪ್ರೋತ್ಸಾಹಿಸಲಾಗುತ್ತಿದೆ.
ಇತ್ತೀಚೆಗೆ ಹಲವು ಎಲೆಕ್ರಿಕ್ ವಾಹನಗಳು ಸಾಕಷ್ಟು ಹೊಸ ಹೊಸ ಫೀಚರ್‌ಗಳೊಂದುಗೆ ಮಾರುಕಟ್ಟೆಗೆ ಬರುತ್ತಿರುವುದರಿಂದಾಗಿ, ಜನರು ಸಹ ಖರೀದಿಸಲು ಇಷ್ಟಪಡುತ್ತಿದ್ದಾರೆ. ಎಲೆಕ್ಟ್ರಿಕ್ ವಾಹನಗಳು ಹೊಗೆ ಬಿಡುವುದಿಲ್ಲವಾದ್ದರಿಂದ, ನಮ್ಮ ಸುತ್ತಲಿನ ಪರಿಸರ ವನ್ನು ಸ್ವಚ್ಚವಾಗಿಡಲು ಹೆಚ್ಚು ಸಹಕಾರಿ. ಇತ್ತೀಚೆಗೆ ಮಾರುಕಟ್ಟೆಗೆ ಬಂದಿರುವ ಎರಡು ದ್ವಿಚಕ್ರ ವಾಹನಗಳ ಪರಿಚಯ ಇಲ್ಲಿದೆ.
ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಎಲೆಕ್ಟ್ರಿಕ್ ವಾಹನ ಖರೀದಿಸಲು, ಅದರಲ್ಲೂ ಟಿವಿಎಸ್ ಕಂಪೆನಿಯ ವಾಹನಕ್ಕೆ ಹೆಚ್ಚು ಮಾರು ಹೋದವರು, ಇದೇ ಮಾರ್ಚ್ ತಿಂಗಳ ಅಂತ್ಯ ದವರೆಗೆ ಕಾದರೆ, ಇದೇ ಕಂಪೆನಿಯ ವಾಹನಗಳನ್ನು ಖರೀದಿಸಬಹುದು. ೪.೪ ಕಿ.ವ್ಯಾಟ್ ಎಲೆಕ್ಟ್ರಿಕ್ ಹಬ್ ಮೋಟಾರು ಹಾಗೂ ೨.೨೫ ಕಿಲೋ ವ್ಯಾಟ್ ಪರ್ ಅವರ್ ಲಯನ್ ಬ್ಯಾಟರಿ ಸಾಮರ್ಥ್ಯದ ಇದು ವಾಹನ ಉತ್ತಮ ವೇಗ (ಪ್ರತಿ ಗಂಟೆಗೆ ೭೮ ಕಿ.ಮೀ.) ಪಡೆಯಲು ಸಹಾಯ ಮಾಡುವುದು.
ಪೂರ್ತಿ ಚಾರ್ಜ್ ಮಾಡಿದರೆ, ೭೫ ಕಿ.ಮೀ. ವರೆಗೆ ವಾಹನ ದೂರ ಕ್ರಮಿಸಲಿದೆ. ಎಂದರೆ, ೪.೨ ಸೆಕೆಂಡ್‌ನಲ್ಲಿ ಸುಮಾರು ೪೦ ಕಿಮೀ (ಪ್ರತಿ ಗಂಟೆಗೆ) ಚಲಿಸುವುದು. ಆದಾಗ್ಯೂ, ಇಕೋ ಮೋಡ್‌ನಲ್ಲಿ ಚಲಿಸುವಾಗ ವಾಹನದ ವೇಗ ೪೦ ರಲ್ಲಿರುತ್ತದೆ.
ಜುಪಿಟರ್ ಗ್ರ್ಯಾಂಡ್ ಮೂಲಕ ೧೨ ಇಂಚಿನ ಟೈಯರನ್ನು ಇದರಲ್ಲಿ ಅಳವಡಿಸಲಾಗಿದೆ. ಈ ವಾಹನದ ತೂಕ ೧೧೮ ಕೆ.ಜಿ. ಇರು ತ್ತದೆ. ಈ ವಾಹನದ ಎಲೆಕ್ಟ್ರಿಕ್ ಸಾಧನಗಳ ಫೀಚರ್ಸ್‌ಗಳು ಕಲರ್ ಡಿಜಿಟಲ್ ಡಿಸ್ಪ್ಲೇ ಜತೆಗೆ ಸ್ಮಾರ್ಟ್ ಫೋನ್‌ಗೆ ಕನೆಕ್ಟ್ ಆಗುವು ದಲ್ಲದೆ, ಎಲ್ಇಡಿ ಲೈಟ್ಸ್, ಅಂಡರ್ಸೀಟ್ ಲೈಟ್, ಯುಎಸ್ಬಿ ಚಾರ್ಜಿಂಗ್ ಸಾಕೆಟ್ ಮುಂತಾದವುಗಳು ವಿಶೇಷ ಗುಣ ಲಕ್ಷಣಗಳು.
ಹಿಂದಿನ ಸವಾರಿಯ ವಿವರಗಳನ್ನು ಪಡೆಯಬಹುದು, ತುರ್ತಾಗಿ ವೇಗವಾಗಿ ಓಡಿಸುವಾಗ ಎಚ್ಚರಿಕೆಯ ಸೂಚನೆ ಸಿಗುವುದು. ಜತೆಗೆ ಚಾರ್ಜಿಂಗ್‌ನ ಸ್ಟೇಟಸ್ ಹಾಗೂ ಮುಂದುವರಿಯಲು ಗೊಂದಲ ಉಂಟಾ ದಲ್ಲಿ ಅಗತ್ಯ ಸಹಕಾರ ಸಿಗಲಿದೆ. ಅರ್ಥ ೪೫೦ ಪ್ಲಸ್ ಮತ್ತು ಬಜಾಜ್ ಚೇತಕ್ ವಾಹನದಂತೆ ಈ ವಾಹನವು ಕೂಡ ಚ್ಯಾಲೆಂಜಿಂಗ್.
ಹೀರೋ ಪ್ಲೆಶರ್ ಪ್ಲಸ್
ಹೀರೋ ಮೋಟೋಕಾರ್ಪ್ ಪರಿಚಯಿಸಿರುವ ೧೧೦ ಸಿಸಿ ಸ್ಕೂರ್ಟ ಅನ್ನು ಎಕ್ಸ್‌ಟೆಕ್ ಎಂದು ಕೂಡ ಕರೆಯಬಹುದು. ಇದಕ್ಕೆ ಎಲ್ಇಡಿ ಪ್ರಾಜೆಕ್ಟರ್ ಹೆಡ್ ಲೈಟ, ಬ್ರೈಟ್ ಯೆ ಶೇಡ್ ಮತ್ತು ಸ್ಮಾರ್ಟ್ ಫೋನ್ ಕನೆಕ್ಟಿವಿಟಿ ಮಾಡ್ಯೂಲ್ ನೀಡಲಾಗಿದೆ. ಈ ಮೂಲಕ ಹಿಂದಿನ ಎಲ್ಲಾ ದಾಖಲೆ ಮುರಿದಿದೆ. ಎಂದರೆ, ಶೇ.೧೦ ರಷ್ಟು ಹೆಚ್ಚಿನ ವೇಗವನ್ನು ಇದು ಪಡೆದುಕೊಂಡಿದೆ.
ವಾಹನದ ಎರಡೂ ಬದಿಯಲ್ಲಿ ಹತ್ತು ಇಂಚಿನ ಚಕ್ರವನ್ನು ಅಳವಡಿಸಲಾಗಿದೆ. ಈ ವಾಹನದಲ್ಲಿ ಶೀಟ್ ಮೆಟಲ್ ಜತೆ ಬೆಲೆ ರು.೬೧,೯೦೦, ಅಲಾಯ್ ವೀಲ್ ವೇರಿಯಂಟ್ ರು.೬೪,೨೦೦ ಹಾಗೂ ಪ್ಲಾಟಿನಮ್ ವೇರಿಯೆಂಟ್ ನ ದರ ರು.೬೬,೪೦೦ ರೂ ಬೆಲೆ ಇದೆ. ಹೋಂಡಾ ಎಕ್ಟಿವಾ ೬ಜಿ ಮತ್ತು ಟಿವಿಎಸ್ ಸ್ಕೂಟಿ ಜೆಸ್ಟ್ ೧೧೦ ಮುಂತಾದವುಗಳಿಗೆ ಸ್ಪರ್ಧೆ ನೀಡಬಲ್ಲದು.