ಇನ್ನೆರಡು ವರ್ಷದಲ್ಲಿ 11 ಸಾವಿರ ಕೋಟಿಗೂ ಹೆಚ್ಚಿನ ವಹಿವಾಟು
ಕನಿಷ್ಠ 50 ಸಾವಿರಕ್ಕೂ ಹೆಚ್ಚು ಉದ್ಯೋಗಗಳ ಸೃಷ್ಟಿ ಸಾಧ್ಯ
ಇದು ಸ್ಮಾರ್ಟ್‌ಯುಗ. ಎಲ್ಲವನ್ನೂ ಸ್ಮಾರ್ಟ್ ಆಗಿ ಮಾಡುವ ಚಾಣಾಕ್ಷತನವನ್ನು ಸ್ಮಾಟ್ ಫೋರ್ನ್‌ಗಳು ನಮಗಿಂದು ನೀಡಿವೆ. ಇಂಟರ್ ನೆಟ್ ಸುಲಭವಾಗಿ ಕೈಗೆಟುಕಲು ಆರಂಭವಾದ ಮೇಲೆ, ಬದುಕು ಇನ್ನಷ್ಟು ಸ್ಮಾರ್ಟ್ ಆಯಿತು ಎಂದರೆ ತಪ್ಪಾಗ ಲಾರದು. ಇದಕ್ಕೆ ನೂತನ ಸೇರ್ಪಡೆಯೇ ಇ-ಸ್ಪೋರ್ಟ್ಸ್ ಗೇಮಿಂಗ್ಸ್ಗಳು.
ಭಾರತದಲ್ಲೀಗ-ಸ್ಪೋರ್ಟ್ಸ್‌ಗೆ ಎಲ್ಲಿಲ್ಲದ ಪ್ರಾಮುಖ್ಯ ದೊರೆಯುತ್ತಿದೆ. ಇದನ್ನೀಗ ಬರೀ ಹವ್ಯಾಸ ಅಥವಾ ಟೈಂ ಪಾಸ್ ಎಂದು
ಪರಿಗಣಿಸದೇ ಇಷ್ಟೋ ಜನರು ಇದರಲ್ಲಿ ತಮ್ಮ ವೃತ್ತಿ ಬದುಕನ್ನೂ ಕಂಡುಕೊಳ್ಳುತ್ತಿರುವುದು ನಿತ್ಯಸತ್ಯ. ಕ್ರಿಕೆಟ್, ಫುಟ್‌ಬಾಲ್, ಕಬ್ಬಡ್ಡಿಗೆ ಇರುವಷ್ಟೇ ಫಾಲೋಯರ್‌ಗಳು ಇದ್ದಾರೆ ಎಂಬುದು ಅಚ್ಚರಿ ಮತ್ತು ಸತ್ಯ. ಎಲ್ಲ ವಯೋಮಾನ ಮತ್ತು ವರಮಾನ ದವರೂ ಕೂಡ ಆನ್‌ಲೈನ್ ಗೇಮ್‌ಗಳತ್ತ ಒಲವು ಹೊಂದಿರುವುದು ಸ್ವಾಗತಾರ್ಹ ಬೆಳವಣಿಗೆ ಎನ್ನಬಹುದು.
130 ಕೋಟಿಗೂ ಹೆಚ್ಚು ಜನಸಂಖ್ಯೆಯಿರುವ ಭಾರತದಲ್ಲಿ, ಕೌಶಲ್ಯ, ಅಭಿಲಾಷೆ ಮತ್ತು ಕ್ರೀಡಾ ಸ್ಪೂರ್ತಿ ಹೊಂದಿದ ಅಸಂಖ್ಯಾತ ವರ್ಗವೇ ಇದೆ. ಇದರಿಂದಾಗಿ ಇ-ಸ್ಪೋರ್ಟ್ಸ್ ಕ್ಷೇತ್ರವಿಂದು ಮುಖ್ಯ ಕ್ಷೇತ್ರವಾಗಿ ಅಭಿವೃದ್ಧಿಯಾಗುತ್ತಿದೆ. ಭಾರತದಲ್ಲೂ ಈಗ ಹಿಂದೆಂದಿಗಿಂತ ಹೆಚ್ಚಿನ ಒಲುವು ಕ್ರೀಡಾ ಕ್ಷೇತ್ರಕ್ಕೂ ದೊರೆಯುತ್ತಿದ್ದು, ಇದಕ್ಕೆ ದೇಶಾದ್ಯಂತ ನಡೆಯುವ ಪಂದ್ಯಾವಳಿಗಳು ನಿದರ್ಶನ ಎನ್ನಬಹುದು.
1972ರಲ್ಲಿ ಭಾರತದಲ್ಲಿ ಇ-ಸ್ಪೋರ್ಟಿಂಗ್ ಯುಗ ಆರಂಭವಾಗಿದ್ದು ಇನ್ನೆರಡು ವರ್ಷಗಳಲ್ಲಿ 2 ಬಿಲಿಯನ್ ಡಾಲರ್‌ನಷ್ಟು ವಹಿವಾಟನ್ನು ಮೀರಿಸುವ ಎಲ್ಲ ಸಾಧ್ಯತೆಗಳಿದ್ದು, ಇದು ಫಾರ್ಮುಲಾ 1 ಅಥವಾ ಇನ್ನಿತರ ಆಫ್‌ಲೈನ್ ಟೂರ್ನಿಗಳ ಬಹುಮಾನ ಮೊತ್ತಕ್ಕಿಂತ ಹೆಚ್ಚು. ಕೆಪಿಎಂಜಿ ಮತ್ತು ಇಂಡಿಯನ್ ಫೆಡರೇಷನ್ ಆಫ್ ಸ್ಪೋರ್ಟ್ಸ್ ಗೇಮಿಂಗ್ ಅಂದಾಜಿಸಿರುವಂತೆ 2023ರ ಹೊತ್ತಿಗೆ, ಭಾರತದ ಇ-ಸ್ಪೋರ್ಟ್ಸ್ ಕ್ಷೇತ್ರವು ಬರೋಬ್ಬರಿ 11 ಸಾವಿರ ಕೋಟಿಗೂ ಹೆಚ್ಚಿನ ವಹಿವಾಟಿನ ಮೈಲುಗಲ್ಲು ದಾಟಲಿದೆ.
ವಿಶ್ವದ ಮುಂದುವರಿದ ಭಾಗಗಳು ಇ-ಸ್ಪೋರ್ಟ್ಸ್ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಿದ್ದರಿಂದ ಅಭಿವೃದ್ಧಿ ಪಥದಲ್ಲಿ ಮುಂದಿವೆ. ಆದರೆ, ಭಾರತದಲ್ಲಿ ಸೂಕ್ತ ಕಾನೂನು ಮತ್ತು ಆನ್‌ಲೈನ್ ಗೇಮ್‌ಗಳ ಬಗ್ಗೆ ಸರಿಯಾದ ಮಾಹಿತಿ ಕೊರತೆ ಕಾರಣ, ನಮ್ಮಲ್ಲಿ ಈ ಕ್ಷೇತ್ರದ ಬೆಳವಣಿಗೆ ಕೊಂಚ ಕುಂಠಿತವಾಗಿತ್ತು. ಆದರೆ, ಕ್ರಮೇಣ ಭಾರತ ಮತ್ತು ವಿಶೇಷವಾಗಿ ಕರ್ನಾಟಕದಲ್ಲಿ ಆನ್‌ಲೈನ್ ಗೇಮರ್‌ಗಳ ಸಂಖ್ಯೆ ಏರಿಕೆ ಕಾಣುತ್ತಿರುವುದು ಆಶಾದಾಯಕ ಬೆಳವಣಿಗೆ.
ಪ್ರಸ್ತುತ 1.5 ರಿಂದ 2 ಕೋಟಿ ಜನರು ಇ-ಸ್ಪೋರ್ಟ್ಸ್ ಬಳಕೆದಾರರಿದ್ದು, ಸುಮಾರು 9 ಕೋಟಿಗಿಂತ ಹೆಚ್ಚು ಜನರು ವಿವಿಧ ಗೇಮಿಂಗ್‌ನಲ್ಲಿ ಭಾಗಿಯಾಗುತ್ತಾರೆ. ಆನ್‌ಲೈನ್ ಗೇಮ್‌ಗಳ ಒಟ್ಟು ವಹಿವಾಟು ಈ ವರ್ಷ 160 ಬಿಲಿಯನ್ ಡಾಲರ್ ಗಳನ್ನು ಮುಟ್ಟಿದ್ದು, ವಿಪರ್ಯಾಸವೆಂದರೆ ಅದರಲ್ಲಿ ಭಾರತ ಪಾಲು 0.5ರಿಂದ 0.7% ನಷ್ಟು ಮಾತ್ರ. ಆದರೆ, ಇನ್ನು ಕೆಲ ವರ್ಷಗಳಲ್ಲೇ ಇದು ಕನಿಷ್ಠ 8ರಿಂದ10% ಗುರಿ ಮುಟ್ಟಿ, ಕನಿಷ್ಠ 50 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂಬ ವಿಶ್ವಾಸವಿದೆ.
ಆ್ಯನಿಮೇಷನ್, ವಿಎಕ್ಸ್‌ಎಕ್ಸ್ ಮತ್ತು ಗೇಮ್ ಡೆವಲಪರ್ಸ್‌ಗಳು ಭಾರತದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಿದೆ. ಇವುಗಳಿಗೆ ಇಂಬು ನೀಡುವಂತೆ ಆನ್ ಲೈನ್ ಗೇಮರ್ಸ್‌ಗಳ ಸಂಖ್ಯೆಯೂ ಹೆಚ್ಚುತ್ತಿದೆ. ಇವರೆಡಕ್ಕೂ ಈಗ ಮುಖ್ಯವಾಗಿ ಸೂಕ್ತ ಕಾನೂನು, ಮೂಲಸೌಕರ್ಯ, ಸ್ಟಾರ್ಟ್‌ಅಪ್‌ಗಳಿಗೆ ಬೇಕಾದ ವಾತಾವರಣ ಮತ್ತು ಕೌಶಲ್ಯವಂತರನ್ನು ಒಂದೆಡೆ ಸೇರಿಸಲು ಕರ್ನಾಟಕ ಸರಕಾರ ಕ್ರಮ ವಹಿಸಬೇಕಿದೆ.
ಸ್ಟೇಟ್ ಆಫ್ ದ ಆರ್ಟ್ ಎಂದು ಕರೆಯಲ್ಪಡುವ ಗೇಮಿಂಗ್‌ಗಳಿಗೆ ಕರ್ನಾಟಕ ಈಗಾಗಲೇ ನೆಚ್ಚಿನ ತಾಣವಾಗಿದ್ದು, ಹನುಚಾ, ಏಲಿಯನ್‌ವೇರ್, ಜೀಯಲಾ ಮತ್ತ ಕ್ಲಾನ್ ಗೇಮಿಂಗ್‌ಳನ್ನು ಈಗಾಗಲೇ ಕರ್ನಾಟಕದಲ್ಲಿ ಆಯೋಜನೆ ಮಾಡಲಾಗುತ್ತಿದೆ. ಇವು ಮನರಂಜನೆ ನೀಡುವ ಜತೆಗೆ ತಮ್ಮಲ್ಲಿರುವ ಕೌಶಲ್ಯವನ್ನು ತೋರುವ ಕಂಪನಿಗಳ ಕೌಶಲ್ಯದ ಪ್ರದರ್ಶನಕ್ಕೂ ಸಹಕಾರಿ
ಎನಿಸಿದೆ.
ಕರ್ನಾಟಕವೂ ಕೂಡ ಸ್ಕಿಲ್ ಆಧಾರಿತ ಗೇಮಿಂಗ್‌ಗಳಿಗೆ ಪ್ರೋತ್ಸಾಹ, ಬೆಂಬಲ ನೀಡಿದ ಇತಿಹಾಸ ಹೊಂದಿದ್ದು, ಪೋಕರ್ ಆಟವನ್ನು ಇದಕ್ಕೆ ಉತ್ತಮ ಉದಾಹರಣೆ ಎನ್ನಬಹುದು. ಈ ಪರಂಪರೆಯೀಗ ಆನ್‌ಲೈನ್ ಗೇಮ್‌ಗಳತ್ತಲೂ ಹರಿಯುತ್ತಿದ್ದು, ಇದಕ್ಕೆ ಕೌಶಲ್ಯ ಆಧಾರಿತ ಆಟಗಳು, ಸರಕಾರದ ಬೆಂಬಲ ಮತ್ತು ನ್ಯಾಯಾಂಗದ ಭದ್ರತೆಗಳು ಒಟ್ಟಾಗಿ ತಮ್ಮ ಶ್ರಮಾದಾನ ನೀಡಿವೆ ಎಂದರೆ ತಪ್ಪಾಗದು.
ಇ-ಸ್ಪೋರ್ಟ್ಸ್ ಎಂಬುದು ತಂತ್ರಜ್ಞಾನ ಆಧಾರಿತ ಕ್ರೀಡೆಯಾಗಿದ್ದು, ಇದು ಸಹಜವಾಗಿಯೇ ಭಾರತದ ನಾಲಡ್ಜ್ ಕ್ಯಾಪಿಟಲ್ ಎಂಬ ಖ್ಯಾತಿಯ ಕರ್ನಾಟಕದಲ್ಲಿ ತನ್ನ ಕಾರ್ಯಾರಂಭ ಮಾಡಿ, ತನ್ನ ಬಾಹುಗಳನ್ನು ಇತರೆಡೆಗೂ ಹಬ್ಬಿಸುತ್ತಿರುವುದು ಕನ್ನಡಿಗರಾಗಿ ನಮಗೆ ಹೆಮ್ಮೆಯ ಸಂಗತಿಯೂ ಹೌದು. ಕರ್ನಾಟಕವೂ ಕೂಡ ಸ್ಟಾರ್ಟ್‌ಹಬ್ ಎಂದು ಗುರುತಿಸಲ್ಪಟ್ಟಿದ್ದು, ಇಲ್ಲಿ ಯಾರೇ ಬಂದು
ಉದ್ಯಮವೆಂಬ ಬೀಜವನ್ನು ಹಾಕಿದರೂ ಸೊಂಪಾಗಿ ಬೆಳೆ ನೀಡಿ, ಉದ್ಯಮವು ದೇಶ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹಬ್ಬಿಸುವಂತ ಪುಣ್ಯಭೂಮಿ ಎನಿಸಿದೆ.
ಇ-ಸ್ಪೋರ್ಟ್ಸ್ ಕೆಫೆಗಳೀಗ ಹೊಸ ರೂಪದತ್ತ ಹೊರಳಿಕೊಳ್ಳುತ್ತಿದ್ದು, ಇದಕ್ಕೆ ಕಾರಣ ಸ್ಮಾರ್ಟ್ ಮೊಬೈಲ್‌ಗಳು ಒದಗಿಸುವ ಸುಲಭ ವಿಧಾನ. ವೇಗದ ಇಂಟರ್‌ನೆಟ್ ಮತ್ತು ಗೇಮಿಂಗ್‌ಗೆ ಬೇಕಾದ ಎಲ್ಲ ಅವಕಾಶಗಳು ಈಗ ಮೊಬೈಲ್‌ನಲ್ಲೇ ಆನ್‌ಲೈನ್ ಗೇಮ್ ಗಳನ್ನು ಆಡುವಂತೆ ಪ್ರೇರೇಪಿಸುತ್ತದೆ. ಇದರಿಂದಾಗಿ ಮೊಬೈಲ್ ಗೇಮ್ ಗಳಲ್ಲೂ ಈಗ ಸ್ಪರ್ಧಾತ್ಮಕತೆ ಮೂಡುತ್ತಿದೆ. ಬೆಂಗಳೂರು, ತನ್ನ ನೆಲದಲ್ಲಿ ಯಾರೇ ಉತ್ಸಾಹಿ, ಕನಸುಗಾರರ ಮತು ಸಾಹಸಿಗಳಿಗೆ ಪ್ರೋತ್ಸಾಹ ನೀಡುತ್ತದೆ. ಇದರ ಜತಗೆ ಕರ್ನಾಟಕದ ಹಲವು
ಭಾಗಗಳಲ್ಲಿರುವ ಮಣಿಪಾಲ್ ತಾಂತ್ರಿಕ ಮಹಾವಿದ್ಯಾಲಯ, ಬೆಂಗಳೂರಿನ ಐಐಎಂ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡಿಸೈನ್, ಶ್ರೀಶ್ರೀ ಇನ್ಸ್ಟಿಟ್ಯೂಟ್ ಆಫ್ ಆರ್ಟ್, ಡಿಸೈನ್ ಮತ್ತು ತಾಂತ್ರಿಕ ವಿದ್ಯಾಲಯಗಳಂತಹ ಹಲವು ವಿದ್ಯಾಸಂಸ್ಥೆಗಳು ಯಾವುದೇ ಕ್ಷೇತ್ರಗಳಿಗೆ ಬೇಕಾದ ಕೌಶಲ್ಯ ಹೊಂದಿದ, ಬಹುಮುಖ ಪ್ರತಿಭೆಯ ಮತ್ತು ಉತ್ಸಾಹಿಗಳನ್ನು ಉದ್ಯೋಗ ಕ್ಷೇತ್ರಕ್ಕೆ ಸಿದ್ಧ ಮಾಡಿ ಕಳುಹಿಸಿ ಕೊಡಬಲ್ಲವು.
ಇದರಿಂದಾಗಿ ಯಾವುದೇ ಉದ್ಯಮಕ್ಕೆ ಬೇಕಾದ ಮಾನವ ಸಂಪನ್ಮೂಲಗಳ ಕೊರತೆ ಎಂದಿಗೂ ಆಗುವುದಿಲ್ಲ. ಆನ್‌ಲೈನ್ ಗೇಮ್ ಆಡುವವರು ಅಂದಾಜು 20-45 ವಯೋಮಾನದವರಿದ್ದು, ಇವರು ಟೈಯರ್ 1, 2,3 ಪಟ್ಟಣಗಳಿಗೆ ಸೇರಿದ್ದಾರೆ. ಮಾನಸಿಕ ನೆಮ್ಮದಿ, ಒತ್ತಡ ನಿವಾರಣೆ, ಹೋರಾಡುವ ಮನೋಭಾವ, ಹಣದ ಬಗೆಗಿನ ಗೌರವ ಮತ್ತ ಒಂದಷ್ಟು ಆದಾಯ ಗಳಿಸಲು ಆನ್
ಲೈನ್ ಗೇಮ್‌ಗಳು ನಮಗೆ ದಾರಿ ಎಂಬುದು ಹಲವು ಗೇಮರ್‌ಗಳ ಅಭಿಪ್ರಾಯ. ಉದ್ಯಮದ ಅಂದಾಜಿನ ಪ್ರಕಾರ, 2020ರಲ್ಲಿ 1.7
ಕೋಟಿಯಷ್ಟು ಗೇಮರ್‌ಗಳಿದ್ದು ಬಹುಮಾನ ಮೊತ್ತವು 25ರಿಂದ 30% ಏರಿಕೆ ಕಂಡಿದೆ.
ಇದೆಲ್ಲದರ ಕಾರಣದಿಂದಾಗಿ ಇ-ಸ್ಪೋರ್ಟ್ಸ್ ಗಳನ್ನು ಕ್ರೀಡೆಯೆಂದು ಸರಕಾರ ಮಾನ್ಯತೆ ನೀಡಬೇಕಿದೆ. ಸೇವಾ ಕ್ಷೇತ್ರ, ಐಟಿ, ಬಿಟಿ, ಸ್ಟಾರ್ಟ್‌ಅಪ್‌ಗಳಲ್ಲಿ ಕರ್ನಾಟಕವೇ ಮುಂಚೂಣಿಯಲ್ಲಿದ್ದು, ಮಾನ್ಯತೆ ನೀಡಿದರೆ ಇ-ಸ್ಪೋರ್ಟ್ ರಾಜಧಾನಿ ಎಂದು ಕರೆಸಿ ಕೊಳ್ಳುವ ದಿನಗಳು ದೂರವಿಲ್ಲ.