Wednesday, 11th December 2024

ನಿಂದನೆಯ ವಿಡಿಯೋಗೆ ಗೂಗಲ್‌ ಹೊಣೆಯೆ ?

ಗೂಗಲ್, ಯುಟ್ಯೂಬ್ ಮೊದಲಾದ ವೇದಿಕೆಗಳ ಮೂಲಕ ಯಾರು ಬೇಕಾದರೂ ತಮ್ಮ ವಿಚಾರಗಳನ್ನು ಅಪ್‌ಲೋಡ್ ಮಾಡ ಬಹುದು. ಇಂತಹ ಬಳಕೆದಾರರು ಅಪ್‌ಲೋಡ್ ಮಾಡಿದ ವಿಚಾರಗಳು ವ್ಯಕ್ತಿಯೊಬ್ಬರಿಗೆ ಹಾನಿ ಮಾಡಿದರೆ, ಗೂಗಲ್ ಅಥವಾ ಯುಟ್ಯೂ ಬ್‌ನ್ನು ಹೊಣೆಗಾರರನ್ನಾಗಿಸಬಹುದೆ? ಆಸ್ಟ್ರೇಲಿಯಾದಲ್ಲಿ ಇಂತಹ ಪ್ರಕರಣವೊಂದರಲ್ಲಿ ಅಲ್ಲಿನ ನ್ಯಾಯಾಲಯವು ಗೂಗಲ್ ಸಂಸ್ಥೆಗೆ 715000 ಡಾಲರ್ (ಸುಮಾರು 40001000 ರುಪಾಯಿ) ದಂಡವನ್ನು ವಿಧಿಸಿದೆ.

ನ್ಯೂಸೌತ್ ವೇಲ್ಸ್ ಪ್ರಾಂತ್ಯದ ಹಿಂದಿನ ಜನಪ್ರತಿನಿಧಿ ಬರಿಲಾರೋ ಎಂಬಾತನನ್ನು ನಾನಾ ರೀತಿ ನಿಂದಿಸುವ ವಿಡಿಯೋವನ್ನು ಯುಟ್ಯೂಬ್‌ನಲ್ಲಿ ಅಪ್ ಲೋಡ್ ಮಾಡಲಾಗಿತ್ತು. 2020 ರಲ್ಲಿ ಅಪ್‌ಲೋಡ್ ಮಾಡಲಾಗಿದ್ದ ಆ ವಿಡಿಯೋವನ್ನು ಸುಮಾರು 800000 ಜನರು ನೋಡಿದ್ದರು. ಆದ್ದರಿಂದ ಆ ವಿಡಿಯೋ ಮೂಲಕ ಆಲಾಬೆಟ್ (ಯುಟ್ಯೂಬ್ ವೆಬ್ ಸೈಟ್ ಪ್ರಾಯೋಜಕ) ಎಂಬ ಕಂಪೆನಿಯು ಸಾಕಷ್ಟು ಲಾಭವನ್ನು ಪಡೆದಿದೆ ಎಂದು ಅಭಿಪ್ರಾಯ ಪಟ್ಟ ನ್ಯಾಯಾಲಯವು, ಇಷ್ಟೊಂದು ದೊಡ್ಡ ಮೊತ್ತದ ಮೊತ್ತದ ದಂಡ ವನ್ನು ವಿಧಿಸಿದೆ.

ವಿಶೇಷ ಎಂದರೆ, ಜನಪ್ರತಿನಿಧಿ ಬರಿಲಾರೋನನ್ನು ಜನಾಂಗೀಯವಾಗಿ ನಿಂದಿಸುವ ಆ ವಿಡಿಯೋವನ್ನು ತಯಾರಿಸಿ ಅಪ್ ಲೋಡ್ ಮಾಡಿದ್ದು ಜೋರ್ಡಾನ್ ಶಾಂಕ್ಸ್ ಎಂಬಾತ. ಪ್ರತ್ಯೇಕ ಪ್ರಕರಣದಲ್ಲಿ ಶಾಂಕ್ಸ್ ಮೇಲೆ ಸಹ ಕ್ರಮಕೈಗೊಳ್ಳಲಾಗಿದ್ದು, ಆತನೂ 100000 ಡಾಲರ್ ದಂಡವನ್ನು ಈಗಾಗಲೇ ಪಾವತಿಸಿಯಾಗಿದೆ.

ಆದರೆ, ನ್ಯಾಯಾಲಯವು ಗೂಗಲ್ ಮತ್ತು ಯುಟ್ಯೂಬ್‌ನ್ನು ಸಹ ಈ ಪ್ರಕರಣದಲ್ಲಿ ತಪ್ಪಿತಸ್ಥರನ್ನಾಗಿಸಿದೆ. ‘ನಿಂದನೆಯೇ ಮುಖ್ಯ
ವಾಗಿರುವ ಈ ವ್ಯವಹಾರದಲ್ಲಿ ಹಣ ಗಳಿಸಲು ಗೂಗಲ್ ಮತ್ತು ಯುಟ್ಯೂಬ್ ತಮ್ಮ ಸಹಮತಿಯಿಂದ ಸಹಕರಿಸಿದವು’ ಎಂದು ಹೇಳಿದ ನ್ಯಾಯಾಲಯವು ಗೂಗಲ್ ಸಂಸ್ಥೆಯೂ ಇಲ್ಲಿ ತಪ್ಪು ಮಾಡಿದೆ ಎಂಬ ಹೇಳಿದ್ದು ವಿಶೇಷ.