ರವಿ ದುಡ್ಡಿನಜಡ್ಡು
ಪುಟ್ಟ ದೇಶ ಉಕ್ರೇನ್ ಮೇಲೆ ರಷ್ಯಾ ಸಾರಿದ ಯುದ್ಧವನ್ನು ಹೆಚ್ಚಿನವರು ಖಂಡಿಸಿದ್ದಾರೆ. ರಷ್ಯಾ ಮೇಲೆ ದಿಗ್ಬಂಧನ ವಿಧಿಸಿದ್ದಾರೆ. ಅಂತ ರ್ಜಾಲ ವೇದಿಕೆಯಲ್ಲಿ ದಿಗ್ಬಂಧನ ಹೇಗಿರುತ್ತದೆ? ಕೆಲವು ಸ್ಯಾಂಪಲ್‌ಗಳು ಇಲ್ಲಿವೆ.
ಜಗತ್ತಿನ ಅತಿ ಪ್ರಬಲ ರಾಷ್ಟ್ರಗಳಲ್ಲಿ ರಷ್ಯಾ ಒಂದು. ಆದರೂ, ಈ ಆಧುನಿಕ ಯುಗದಲ್ಲಿ ಆ ದೇಶವು ತನ್ನ ನೆರೆಯ, ಪುಟಾಣಿ ದೇಶವಾದ ಉಕ್ರೇನ್ ಮೇಲೆ ದಾಳಿ ನಡೆಸಿ, ಬಾಂಬ್‌ಗಳ ಸುರಿಮಳೆಯನ್ನು ಮಾಡಿದ್ದರಿಂದ, ಪಾಶ್ಚಾತ್ಯ ಜಗತ್ತಿನ ಬಹುಪಾಲು ರಾಷ್ಟ್ರಗಳ ಕೋಪಕ್ಕೆ ಗುರಿಯಾಗಿದೆ. ನ್ಯಾಟೋ ಒಕ್ಕೂಟದ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್ ಮೊದಲಾದ ಬಲಾಢ್ಯ ದೇಶಗಳು, ರಷ್ಯದ ಮೇಲೆ ಕಟ್ಟುನಿಟ್ಟಾದ ಆರ್ಥಿಕ ದಿಗ್ಬಂಧನ ವಿಧಿಸಿವೆ.
ಅವರು ಆರ್ಥಿಕ ದಿಗ್ಬಂಧನ ವಿಧಿಸಿದರೇನು, ನಾನು ಯುದ್ಧ ಮುಂದುವರಿಸಿಯೇ ಸಿದ್ಧ ಎನ್ನುತ್ತಿರುವ ರಷ್ಯಾದ ನಡೆಯು ಟೀಕೆಗೆ ಗುರಿಯಾಗಿದ್ದರೂ, ಇತ್ತ ರಷ್ಯಾ ವಿರುದ್ಧ ಆರ್ಥಿಕ ದಿಗ್ಬಂಧನ ಅದಾಗಲೇ ಜಾರಿಯಲ್ಲಿದೆ. ಸ್ವಿಫ್ಟ್ ನಿಂದ ರಷ್ಯಾವನ್ನು ಹೊರಗಿಡುವ ಪ್ರಯತ್ನ ನಡೆದಿದೆ. ಈ ನಡುವೆ ರಷ್ಯಾ ವಿರುದ್ಧ ನ್ಯಾಟೋ ದೇಶಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ತೆಗೆದುಕೊಂಡಿರುವ ಕೆಲವು ಕ್ರಮಗಳು, ಅದಾಗಲೇ ತನ್ನದೇ ರೀತಿಯಲ್ಲಿ ಕೆಲಸ ಮಾಡುತ್ತಿವೆ! ಅವುಗಳಲ್ಲಿ ಕೆಲವು ಕ್ರಮಗಳ ವ್ಯಾಪ್ತಿ ಎಷ್ಟಿದೆ ನೋಡೋಣ.
೧ ರಷ್ಯಾದ ಬ್ಯಾಂಕುಗಳ ಎಟಿಎಂ ಕಾರ್ಡ್, ಕ್ರೆಡಿಟ್ ಕಾರ್ಡ್‌ಗಳು ಈಗ ಕೆಲವು ಕಡೆ ಕೆಲಸ ಮಾಡುತ್ತಿಲ್ಲ! ಆಪಲ್ ಪೇ, ಗೂಗಲ್ ಪೇ ಸಂಬಂಧಿತ ವ್ಯವಹಾರಗಳು ಅಮಾನತ್ತಿಗೆ ಒಳಗಾಗಿವೆ. ರಷ್ಯಾದ ಅತಿ ದೊಡ್ಡ ಆರ್ಥಿಕ ಸಂಸ್ಥೆಗಳಾದ ವಿಟಿಬಿಗ್ರೂಪ್, ಸೊವ್‌ಕೋಂ ಬ್ಯಾಂಕ್, ಒಟ್‌ಕ್ರೈಟಿ ಎಫ್ಸಿ ಬ್ಯಾಂಕ್ ಮೊದಲಾದ ಬ್ಯಾಂಕುಗಳ ಕಾರ್ಡುಗಳನ್ನು ವಿದೇಶಗಳಲ್ಲಿ ಬಳಸು ವಂತಿಲ್ಲ. ಇದರಿಂದ ಗ್ರಾಹಕರಿಗೆ, ರಷ್ಯಾಕ್ಕೆ ಇರುಸುಮುರುಸಾಗಿದೆ.
೨ ರಷ್ಯಾ ವಿರುದ್ಧ ದಿಗ್ಬಂಧನದ ಭಾಗವಾಗಿ, ಯುಟ್ಯೂಬ್ ನಲ್ಲಿ ರಷ್ಯಾ ಚಾನೆಲ್‌ಗಳ ಜಾಹೀರಾತು ಆದಾಯಕ್ಕೆ ಅಂಕುಶ ಹಾಕಲಾಗಿದೆ! ರಷ್ಯಾ ಟುಡೇ ಮತ್ತು ಇತರ ಚಾನೆಲ್‌ಗಳ ಯುಟ್ಯೂಬ್ ವಿಡಿಯೋಗಳು ಜಾಹೀರಾತು ಆದಾಯ ತಂದರೂ, ಅದನ್ನು ಆ ಏಜೆನ್ಸಿಗಳಿಗೆ ಹಂಚಲಾಗುತ್ತಿಲ್ಲ. ಇದಕ್ಕೆ ‘ಅಸಾಧಾರಣ ಸನ್ನಿವೇಶ’ವೇ ಕಾರಣ ಎಂದಿದೆ ಯುಟ್ಯೂಬ್!
೩ ಉಕ್ರೇನ್‌ನಲ್ಲಿ ರಷ್ಯಾ ಚಾನೆಲ್‌ಗಳ ಯುಟ್ಯೂಬ್ ವಿಡಿಯೋಗಳು ಕಾಣಿಸುತ್ತಿಲ್ಲ! ಯುಟ್ಯೂಬ್ ವಿಡಿಯೋ ಮೂಲಕ ಉಕ್ರೇನ್ ವಿರುದ್ಧದ ಅರಿರಂಜಿತ ಸಂದೇಶಗಳನ್ನು ರಷ್ಯಾ ಪ್ರಸಾರ ಮಾಡುವ ಸಾಧ್ಯತೆಯನ್ನು ಕಡಿಮೆ ಮಾಡಲು ಈ ಕ್ರಮ.
೪ ಫೇಸ್‌ಬುಕ್ ಮತ್ತು ಟ್ವಿಟರ್ ಸಂಸ್ಥೆಗಳು, ರಷ್ಯಾದ ಜಾಹೀರಾತನ್ನು ನಿಷೇಽಸಿವೆ. ಇದಕ್ಕೆ ಉಕ್ರೇನ್ ಮೇಲಿನ ಆಕ್ರಮಣವೇ ಕಾರಣ ಎಂದೂ ಸ್ಪಷ್ಟಪಡಿಸಿವೆ. ರಷ್ಯಾ ಮೂಲದಿಂದ ಬರುವ ಎಲ್ಲಾ ಸಂದೇಶ, ವಿಡಿಯೋಗಳನ್ನು ಉಕ್ರೇನ್‌ನಲ್ಲಿ ಪ್ರಸಾರಗೊಳಿಸದಂತೆ -ಸ್‌ಬುಕ್ ಕ್ರಮ ಕೈಗೊಂಡಿದೆ.
೫ ಯುರೋಪಿಯನ್ ಯೂನಿಯನ್ ಒಂದು ಪ್ರಬಲ ಸಂಸ್ಥೆ. ‘ಪುಟಿನ್ ಘೋಷಿಸಿರುವ ಯುದ್ಧವನ್ನು ಸಮರ್ಥಿಸುವ ಸುಳ್ಳುಗಳನ್ನು ಹರಡಲು ಸಾಧ್ಯ ವಿಲ್ಲ’ದಂತೆ ಮಾಡಲು, ರಷ್ಯಾ ಟುಡೇ, ಸ್ಪುಟ್ನಿಕ್ ಮತ್ತು ಅದರ ಅಂಗಸಂಸ್ಥೆಗಳನ್ನು ನಿಷೇಧಿಸುವುದಾಗಿ ಯುರೋಪಿಯನ್ ಯೂನಿಯನ್ ಭಾನುವಾರ ಘೋಷಿಸಿದೆ.
ರಷ್ಯಾದ ಹಲವು ಮಾಧ್ಯಮಗಳು ಯುಟ್ಯೂಬ್ ಚಾನೆಲ್ ಹೊಂದಿದ್ದು, ಅವುಗಳನ್ನು ಬ್ಯಾನ್ ಮಾಡಲು ಯುಟ್ಯೂಬ್ ಸಹಕಾರ ಕೋರಿದೆ.
೬ ಫೇಸ್‌ಬುಕ್‌ನ ಮಾತೃಸಂಸ್ಥೆಯಾದ ಮೆಟಾ, ಮೊನ್ನೆ ಭಾನುವಾರ ಒಂದು ಮಹತ್ವದ ಘೋಷಣೆ ಮಾಡಿದೆ.
‘ಯುದ್ಧದಿಂದ ನಲುಗಿರುವ ಉಕ್ರೇನ್‌ನಲ್ಲಿ, ರಷ್ಯಾದ ಮಾಧ್ಯಮಗಳ ಖಾತೆಗಳನ್ನು ನಿಯಂತ್ರಣಕ್ಕೆ ಒಳಪಡಿಸಲಾಗುವುದು’ ಎಂದು ಮೆಟಾ ಅಧ್ಯಕ್ಷ ಹೇಳಿದ್ದಾರೆ. ಇದನ್ನು ಉಕ್ರೇನ್ ಅಧ್ಯಕ್ಷರ ಮನವಿಯ ಮೇರೆಗೆ ಮಾಡಲಾಗುತ್ತಿದೆ ಎಂದೂ ಅವರು ಹೇಳಿದ್ದಾರೆ.
ಜತೆಯಲ್ಲೇ, ಕಳೆದ ೪೮ ಗಂಟೆಗಳ ಅವಧಿಯಲ್ಲಿ ರಷ್ಯಾ ಮೂಲದ ಸುಮಾರು ೪೦ ನಕಲಿ ಫೇಸ್‌ಬುಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಅವೆಲ್ಲವೂ
ಯುದ್ಧಕ್ಕೆ ಸಂಬಂಧಿಸಿದಂತೆ, ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದವು!