ಫ್ಯಾಂಟಸಿ ಕ್ರೀಡೆಗಳ ಬಗ್ಗೆ ಇತ್ತೀಚಿಗೆ ಜಪ್ರೊತಿಯತೆ ಹೆಚ್ಚುತ್ತಿರುವ ಬಗ್ಗೆ ನೀತಿ ಆಯೋಗ ಮೆಚ್ಚುಗೆ ವ್ಯಕ್ತಪಡಿಸಿತ್ತು. ಆನ್‌ಲೈನ್ ಗೇಮಿಂಗ್ ಕ್ಷೇತ್ರವೂ ಕೂಡ ಒಂದು ಸ್ವ ನಿಯಂತ್ರಣ ಮಂಡಳಿ ಸ್ಥಾಪನೆಯ ಅಗತ್ಯತೆಯ ಬಗ್ಗೆ ಹಲವು ದಿನಗಳಿಂದ ಮನವಿ ಸಲ್ಲಿಸುತ್ತಿದ್ದು, ಇದರಿಂದಾಗಿ ಒಂದೇ ರೀತಿಯ ನಿಯಂತ್ರಣ ಕ್ರಮಗಳು ಮತ್ತು ಭದ್ರತೆ ಕೂಡ ಒದಗುವ ಎಲ್ಲ ಸಾಧ್ಯತೆಗಳಿವೆ.
ಹಾಗೆಯೇ ಆನ್‌ಲೈನ್ ಗೇಮಿಂಗ್‌ಗಳಿಗೆ ಮಾನ್ಯತೆ ಹಾಗೂ ಅದಕ್ಕೆ ಸೂಕ್ತವಾದ ಕಾನೂನು ರೂಪಿಸುವುದರಿಂದ ಭಾರತದ ಭವಿಷ್ಯದ ಕ್ಷೇತ್ರಗಳಲ್ಲಿ ಒಂದು ಎಂದು ಗುರುತಿಸಲ್ಪಟ್ಟಿರುವ ಈ ಕ್ಷೇತ್ರದ ಬೆಳವಣಿಗೆಗೆ ಹೆಚ್ಚಿನ ವೇಗ ದೊರೆಯಲಿದೆ.
ಇ ಸ್ಪೋರ್ಟ್ಸ್ ಎಂದರೇನು?
ಇತ್ತೀಚಿಗೆ ಹಲವು ರಾಜ್ಯ ಸರಕಾರಗಳು ಸುಗ್ರೀವಾಜ್ಞೆ ಹೊರಡಿಸಿದ್ದು, ಅದರಲ್ಲಿ ಗೇಮ್ ಆಫ್ ಸ್ಕಿಲ್ ಮತ್ತು ಗೇಮ್ ಆಫ್ ಚಾನ್ಸ್ ಎರಡರ ವ್ಯತ್ಯಾಸವನ್ನು ಸ್ಪಷ್ಟವಾಗಿ ಹೇಳಿವೆ.
ಗೇಮ್ ಆಫ್ ಚಾನ್ಸ್‌ಗಳಲ್ಲಿ ಬರುವ ಜೂಜಾಟದಂತ ಆಟಗಳನ್ನು ನಿಷೇಧಿಸಲು ಹಲವು ಸರಕಾರಗಳು ಪ್ರಯತ್ನಿಸಿರುವುದು
ಸ್ವಾಗತಾರ್ಹ. ಅದರ ಜತೆಗೆ ಇ ಸ್ಪೋರ್ಟ್ಸ್ ಬಗೆಗಿನ ಉತ್ತಮ ವಿಚಾರಗಳನ್ನು ತಿಳಸಿದರೆ, ಜನರಲ್ಲಿರುವ ಗೊಂದಲ ಮತ್ತು ತಪ್ಪು ತಿಳುವಳಿಕೆ ಕಡಿಮೆ ಆಗಲಿದೆ. ಪರಂಪಾರಾಗತವಾಗಿ ಬಂದ ಆಟಗಳೇ ಇ ಸ್ಪೋಟ್ ನಲ್ಲೂ ಇವೆ. ವ್ಯಕ್ತಿಯ ಕೌಶಲ್ಯ, ತಾಲ್ಮೆ, ಚಾಕಚಕ್ಯತೆ, ಮನೋಬಲ ಎಲ್ಲವನ್ನೂ ಕೂಡ ಈ ಆಟಗಳು ಬಯಸುತ್ತವೆ. ಕುಸ್ತಿ, ಕಾರ್ಡ್, ಶೂಟಿಂಗ್ ಮತ್ತಿತರ ಆಟಗಳು ಗುಂಪಿನಲ್ಲಿ ಆಡುವ ಹವ್ಯಾಸಕ್ಕೆ ಇಂಬು ನೀಡುತ್ತವೆ.
ಏಕೆ ಬೇಕು ನಿಯಂತ್ರಣ
ಇ-ಸ್ಪೋರ್ಟ್ಸ್ ಕ್ಷೇತ್ರವು ಹಲವು ಗೇಮರ್ ಮತ್ತು ಹೂಡಿಕೆದಾರರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಭಾರಿ ಉದ್ಯಮವಾಗುವ ಎಲ್ಲ ಲಕ್ಷಣಗಳಿದ್ದು, ಸೂಕ್ತ ಕಾನೂನುಗಳು ಇಲ್ಲದ ಕಾರಣ, ದುರುಪಯೋಗ ಆಗುವ ಸಾಧ್ಯತೆಗಳೂ ಇವೆ.
ವರದಿಯ ಪ್ರಕಾರ, ಆನ್‌ಲೈನ್ ಗೇಮರ‍್ಸ್‌ಗಳಲ್ಲಿ ಇ-ಸ್ಪೋರ್ಟ್ಸ್‌ನಲ್ಲಿ ಅಂದಾಜು ೪% ಹೊಂದಿದ್ದು, ೨೦೨೦ ರ ಒಟ್ಟಾರೆ ಆನ್‌ಲೈನ್ ಗೇಮಿಂಗ್ ಮಾರುಕಟ್ಟೆಯಿಂದ ಒಟ್ಟು ಆದಾಯದ ೯% ಕ್ಕಿಂತ ಹೆಚ್ಚಿದೆ. ಇತ್ತೀಚೆಗೆ, ಭಾರತೀಯ ಇ-ಸ್ಪೋರ್ಟ್ಸ್ ಮಾರುಕಟ್ಟೆ ಯಲ್ಲಿ ವಿದೇಶಿ ಸಂಸ್ಥೆಗಳಿಂದ ಭಾರತೀಯ ಪ್ಲಾಟ್ ಫಾರ್ಮ್ ಗಳು ಅಪಮಾನಕ್ಕೆ ಒಳಗಾದವು.
ಆನ್‌ಲೈನ್ ಆಟಗಳು ವಿರಾಮ ಚಟುವಟಿಕೆಯಾಗಿ ಪ್ರಾರಂಭವಾಗಿ, ಇಂಟರ್ನೆಟ್ ಮೂಲಕ ಆಡಲಾಗುತ್ತದೆ. ಒಬ್ಬರು ಅಥವಾ ತಂಡಗಳು ಸ್ಪರ್ಧಿಸುತ್ತವೆ. ಭಾರತದಲ್ಲಿ ಸುಮಾರು ೧೭-೨೦ ಮಿಲಿಯನ್ ಇ-ಸ್ಪೋರ್ಟ್ಸ್ ಆಟಗಾರರಿದ್ದಾರೆ ಎಂದು ಅಂದಾಜಿಸ ಲಾಗಿದೆ. ಆನ್‌ಲೈನ್ ಗೇಮಿಂಗ್ ಜಾಗದಲ್ಲಿ ೮೮೫ ಮಿಲಿಯನ್ ಡಾಲರ್ ಮೌಲ್ಯದ ಸುಮಾರು ೪೦೦ ಸ್ಟಾರ್ಟ್‌ಅಪ್‌ಗಳಿದ್ದು, ಇವುಗಳಲ್ಲಿ ೭೧ ಕರ್ನಾಟಕದಲ್ಲಿಯೇ ನೋಂದಣಿ ಆಗಿವೆ ಎಂಬುದು ಹೆಮ್ಮೆಯ ಸಂಗತಿ. ಸಾಫ್ಟ್‌ವೇರ್ ಗೇಮಿಂಗ್ ವೇಗವಾಗಿ ಬೆಳೆಯುತ್ತಿರುವ ಆನ್‌ಲೈನ್ ಗೇಮಿಂಗ್ ಮಾರುಕಟ್ಟೆಯು , ಬರುವ ವರ್ಷಗಳಲ್ಲಿ ಸುಮಾರು ೪೦,೦೦೦ ಹೊಸ ನೇರ ಉದ್ಯೋಗ ಸೃಷ್ಟಿಸುವ ನಿರೀಕ್ಷೆಯಿದೆ.
ಆನ್‌ಲೈನ್ ಗೇಮಿಂಗ್ ಜೂಜಾಟ ಎಂಬ ಗ್ರಹಿಕೆಯೇ ತಪ್ಪು ತಿಳುವಳಿಕೆಯಾಗಿದ್ದು, ಈ ವಲಯವು ಐಟಿ ಜಾಗದಲ್ಲಿ ತನ್ನ ಸ್ಥಾನವನ್ನು ಪಡೆದುಕೊಳ್ಳುತ್ತದೆ. ಆನ್‌ಲೈನ್ ಗೇಮಿಂಗ್ ಕೌಶಲ್ಯ ತೆಗೆದುಕೊಳ್ಳುವ ಜತೆಗೆ ಯಾವುದೇ ಕೌಶಲ್ಯ ಆಧಾರಿತ ಆಟವು ಜೂಜಾಟವಲ್ಲ ಎಂಬುದನ್ನು ಮನದಟ್ಟು ಮಾಡಬೇಕಿದೆ.
ಕೌಶಲ್ಯ ಆಧಾರಿತ ಆಟಗಳಲ್ಲಿ ತಂತ್ರ, ಕುಶಾಗ್ರಮತಿ ಮತ್ತು ಪ್ರತಿಭೆ ಇರುತ್ತದೆ. ಕೌಶಲ್ಯ ಆಧಾರಿತ ಆಟದಲ್ಲಿ ಶ್ರೇಷ್ಠ ಮತ್ತು ಗೆಲ್ಲುವುದು ಆಕಸ್ಮಿಕವಾಗಿ ಆಗುವುದಿಲ್ಲ. ಆಕಸ್ಮಿಕ ಆಟಗಳಲ್ಲಿ ಕೌಶಲ್ಯಗಳೇ ಬೇಕಿರುವುದಿಲ್ಲ ಹಾಗೂ ಯಾರೇ ಗೆಲ್ಲವುದದೂ ಕೂಡ ಆಕಸ್ಮಿಕವಾಗಿ ಎಂಬುದು ಎಲ್ಲರಿಗೂ ತೊತ್ತಿರುವ ಸಂಗತಿ.
ಕೆಲವು ವಿದೇಶಿ ಆಟಗಾರರಿಂದ ಏಕಸ್ವಾಮ್ಯ ಹೆಚ್ಚಿಸುವುದು, ಗೇಮರ್‌ಗಳಿಗಾಗಿ ಅನ್ಯಾಯದ ಒಪ್ಪಂದದ ಕಟ್ಟುಪಾಡುಗಳಿಗೆ ಬಂಧಿಸುವ ಕುಖ್ಯಾತಿ
ಪಡೆಯುತ್ತಿವೆ. ಆದ್ದರಿಂದ ಸುರಕ್ಷಿತ ಮತ್ತು ನ್ಯಾಯಯುತವಾದ ಹೆಜ್ಜೆಯನ್ನು ಗಮನದಲ್ಲಿರಿಸಿಕೊಂಡು ಆತ್ಮನಿರ್ಭರ ಭಾರತೀಯ ಉದ್ಯಮವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿ, ಸೂಕ್ತ ಪ್ರತಿನಿಽತ್ವ ಒದಗಿಸಲಲ್ಲ ಸಂಸ್ಥೆಯ ಅಗತ್ಯತೆ ಈಗ ಹೆಚ್ಚಿದೆ. ಇದು ಗೇಮರ್‌ಗಳು, ಡೆವಲಪರ್
ಗಳು ಮತ್ತು ಗೇಮಿಂಗ್ ಪ್ಲಾಟ್ ಫಾರ್ಮ್‌ಗಳಿಗೂ ಅವಶ್ಯವಾಗಿ ಬೇಕಿದೆ.
ಗೇಮ್ ಅಭಿವೃದ್ಧಿ ಪಡಿಸುವ ಭಾರತದ ತಂತ್ರಜ್ಞರೂ ಕೂಡ ತಮ್ಮ ಕೌಶಲ್ಯ ಮತ್ತು ನೈಪುಣ್ಯತೆಯನ್ನು ಗೇಮ್‌ಗಳ ಅಭಿವೃದ್ಧಿಯಲ್ಲಿ ತೋರುತ್ತಿದ್ದು, ಇದು ಗೌರವಾನ್ವಿತ ಪ್ರಧಾನಿಯವರ ವೋಕಲ್ ಫಾರ್ ಲೋಕಲ್ ಆಶಯಕ್ಕೆ ಪೂರಕವಾಗಿದೆ. ಏಕ್ ಭಾರತ್, ಶ್ರೇಷ್ಠ ಭಾರತ್ ಮನೋಭಾವ ಹೆಚ್ಚಿಸಲು ಭಾರತೀಯ ನಿರ್ಮಿತ ಆಟಗಳು ಅತ್ಯುತ್ತಮ ಮಾಧ್ಯಮ ಎಂಬುದು ಪ್ರಧಾನಿಯವರ ಅನಿಸಿಕೆ ಕೂಡ ಹೌದು.
ಇಂಡಿಯಾ ಕನೆಕ್ಡೆಡ್!
ಹಲವು ರಾಜ್ಯ ಸರಕಾರಗಳು ಮತ್ತು ಆನ್‌ಲೈನ್ ಗೇಮ್ ಪ್ಲಾಟ್ ಫಾರ್ಮ್‌ಗಳು ಕೂಡ ಸಾಂಕ್ರಾಮಿಕ ಹರಡಿದ ಸಮಯದಲ್ಲಿ ಆನ್‌ಲೈನ್ ಗೇಮ್‌ಗಳಿಗೆ
ಉತ್ತೇಜನ ನೀಡಿದ್ದವು. ಇದರಿಂದಾಗಿ ದೇಣಿಗೆ ಸಂಗ್ರಹ ಮಾಡುವ ಜತೆಗೆ ಅಸಂಖ್ಯಾತ ಭಾರತೀಯರನ್ನು ಒಂದೇ ಸೂರಿನಡಿಗೆ ತರುವ ಮೂಲಕ ಸಹೋದರತ್ವವನ್ನೂ ಕೂಡ ಉತ್ತೇಜಿಸಲು ಆನ್‌ಲೈನ್ ಗೇಮಗಳು ಸಹಕಾರಿ ಆಗಿದ್ದವು.
೧೯೫೭ ಸುಪ್ರೀಂ ಕೋರ್ಟ್: ಆರ್ ಎಂಡಿ ಚಮರ್‌ಬ್ಗವಾಲಾ ವ ಯೂನಿಯನ್ ಆಫ್ ಇಂಡಿಯಾ
*ಗೇಮ್ ಆಫ್ ಸ್ಕಿಲ್‌ಗಳು ವ್ಯವಹಾರವಾಗಿದ್ದು, ಭಾರತೀಯ ಕಾನೂನಿನನ್ವಯ ಭದ್ರತೆ ಇರಲಿವೆ.
೧೯೬೭ ಸುಪ್ರೀಂ ಕೋರ್ಟ್: ಸತ್ಯನಾರಾಯಣ ಅರಸ್ ವ ಸ್ಟೇಟ್ ಆಫ್ ಆಂದ್ರಪ್ರದೇಶ್
*ರಮ್ಮಿ ಎಂಬುದು ಗೇಮ್ ಆಫ್ ಸ್ಕಿಲ್
*ಚಾನ್ಸ್ ತಗೆದುಕೊಳ್ಳುವ ಒಂದಷ್ಟು ಶಗಳು ಇದ್ದ ಮಾತ್ರಕ್ಕೆ ಗೇಮ್ ಆಫ್ ಚಾನ್ಸ್ ಎಂದು ಪರಿಗಣಿಸಬೇಕಿಲ್ಲ.
೧೯೯೬ ಸುಪ್ರೀಂ ಕೋರ್ಟ್: ಕೆ.ಆರ್.ಲಕ್ಷ್ಮಣನ್ ವಿ ಸ್ಟೇಟ್ ಆಫ್ ತಮಿಳುನಾಡು
*ಕುದುರೆ ಓಟದಲ್ಲಿ ಹಣ ಕಟ್ಟುವುದು ಗೇಮ್ ಆಫ್ ಸ್ಕಿಲ್
*ಕೌಶಲ್ಯ, ತರಬೇತಿ, ಪ್ರಜ್ಞೆ, ಅನುಭವಗಳ ಆಧಾರದಲ್ಲಿ ಗೇಮ್ ಆಫ್ ಸ್ಕಿಲ್
೨೦೧೩ ಕರ್ನಾಟಕ ಹೈ ಕೋರ್ಟ್: ಇಂಡಿಯನ್ ಪೋಕರ್ ಅಸೋಸಿಯೇಷನ್ ವಿ ಸ್ಟೇಟ್ ಆಫ್ ಕರ್ನಾಟಕ
*ಪೋಕರ್ ಎನ್ನುವುದು ಗೇಮ್ ಆಫ್ ಸ್ಕಿಲ್
೨೦೧೭ ಪಂಜಾಬ್, ಹರಿಯಾಣಾ ಹೈಕೋರ್ಟ್: ವರುಣ್ ಗುಂಬೇರ್ ವಿ ಚಂಢೀಗಡ ಮತ್ತು ಅರಸ್
* ಫ್ಯಾಂಟಸಿ ಕ್ರೀಡೆಗಳು ಗೇಮ್ ಆಫ್ ಸ್ಕಿಲ್‌ಗಳು
*ಗೇಮ್ ಆಫ್ ಸ್ಕಿಲ್‌ಗಳಿಗೆ ಭಾರತದ ಕಾನೂನಿನ ರಕ್ಷಣೆಯಿರುತ್ತದೆ.