Friday, 22nd November 2024

ಹೊಸ ಪ್ಲಾನ್

ಸರಕಾರಿ ಸ್ವಾಾಮ್ಯದ ಬಿಎಸ್‌ಎನ್‌ಎಲ್, ಹೊಸ ಪ್ರಿಪೇಯ್‌ಡ್‌ ಪ್ಲಾನ್ ಘೋಷಿಸಿದೆ. ಪ್ರತಿದಿನ 3 ಜಿಬಿ ಡಾಟಾ ಇದರ ವೈಶಿಷ್ಟ್ಯ. ರು. 997ಗೆ ಲಭ್ಯ ಇರುವ ಈ ಯೋಜನೆಯು 180 ದಿನ ವ್ಯಾಲಿಡಿಟಿ ಹೊಂದಿದ್ದು, ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆಗಳನ್ನು ಮಾಡಬಹುದು. ಪ್ರತಿದಿನ 3 ಜಿಬಿ ಡಾಟಾ ಉಚಿತವಾಗಿದ್ದು, ನಂತರವೂ ಡಾಟಾ ಲಭ್ಯವಿದ್ದರೂ, 3 ಜಿಬಿ ನಂತರ ಸ್ಪೀಡ್ ಕಡಿಮೆಯಾಗತ್ತದೆ. ಪ್ರತಿದಿನ 100 ಎಸ್‌ಎಂಎಸ್ ಉಚಿತ ಎನಿಸಿದ್ದು, ನವೆಂಬರ್ ದೇಶದ ಎಲ್ಲಾ ವಲಯಗಳಲ್ಲಿ ಇದು ಜಾರಿಗೆ ಬಂದಿದೆ. ಇತರ ಖಾಸಗಿ ಸಂಸ್ಥೆೆಗಳ ಇದಕ್ಕೆೆ ಹೋಲುವ ಯೋಜನೆಗಳಿಗೆ ಬಿಎಸ್‌ಎನ್‌ಎಲ್‌ನ ಈ ಯೋಜನೆಯು ಸ್ಪರ್ಧೆ ನೀಡಬಲ್ಲದು.