ಮಾನವರ ಬುದ್ಧಿಮತ್ತೆಯಿಂದಾಗಿ ತಂತ್ರಜ್ಞಾನಗಳು ಅಭಿವೃದ್ಧಿಯಾದವು. ಇದರಿಂದಾಗಿ ವಿಶ್ವವೇ ಒಂದು ಕುಟುಂಬ ಎಂಬ ಪರಿಕಲ್ಪನೆ ಕೂಡ ಹುಟ್ಟಿಕೊಂಡಿತು.
ಇಂದು ತಂತ್ರಜ್ಞಾನ ಕಾಲಿಡಿದ ಕ್ಷೇತ್ರವಿಲ್ಲ ಮತ್ತು ತಂತ್ರಜ್ಞಾನ ಬೇಕಿಲ್ಲ ಎಂದು ಹೇಳುವ ಕ್ಷೇತ್ರವಿಲ್ಲ ಎಂಬಂತಾಗಿದೆ. ತಂತ್ರಜ್ಞಾನ ಎಂದರೆ ಮಾನವರ ಕೆಲಸಗಳನ್ನು ಸುಲಭ ಮಾಡಲು ದೊರೆತ ಒಂದು ಮಾಧ್ಯಮ ಎಂದು ಒಂದು ಸಾಲಿನಲ್ಲಿ ಹೇಳಬಹುದು. ಅದು ನಿಜವೂ ಕೂಡ. ಭಾರತದಲ್ಲಿ ಅಗ್ಗದ ಇಂಟರ್‌ನೆಟ್ ಮತ್ತು ಅಗ್ಗದ ಮೊಬೈಲ್‌ಗಳು ಬಂದ ನಂತರವಂತೂ ಆನ್ ಲೈನ್‌ನಲ್ಲಿ ಗೇಮ್‌ಗಳನ್ನು ಆಡುವವರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿತು.
ನೀವೊಮ್ಮೆ ಊಹಿಸಿಕೊಳ್ಳಿ, ಕಳೆದ ವರ್ಷ ಕರೋನಾದಿಂದ ಲಾಕ್‌ಡೌನ್ ಘೋಷಣೆ ಆದಾಗ ಮೊಬೈಲ್ ಮತ್ತು ಆನ್‌ಲೈನ್ ಗೇಮ್‌ಗಳು ಇಲ್ಲದಿದ್ದರೆ ಮನೆಗಳಲ್ಲೇ ಇರಬೇಕಿದ್ದ ನಮ್ಮ ಪರಿಸ್ಥಿತಿ ಜೈಲುವಾಸವೇ ಅನಿಸುತ್ತಿತ್ತೇನೋ. ಆದರೆ, ಆನ್‌ಲೈನ್ ಗೇಮ್‌ಗಳು ಒಬ್ಬ ವ್ಯಕ್ತಿಯ ಬೇಸರ ಕಳೆವ ಜತೆಗೆ ಬುದ್ಧಿಮತ್ತೆ ಮತ್ತು ಜ್ಞಾಪಕ ಶಕ್ತಿಯನ್ನೂ ಹೆಚ್ಚಿಸಲು ನೆರವಾದವು ಎಂಬುದು
ಅಧ್ಯಯನಗಳೇ ಹೇಳಿವೆ. ಅಷ್ಟರ ಮಟ್ಟಿಗೆ ಮೊಬೈಲ್ ಹಾಗೂ ಆನ್‌ಲೈನ್ ಗೇಮ್‌ಗಳಿಗೆ ನಾವು ಥ್ಯಾಂಕ್ಸ್ ಹೇಳಬೇಕು.
ಬಹುಪಾಲು ಭಾರತೀಯರು ಮೊಬೈಲ್ ಗಾಗಿಯೇ ಪ್ರತಿದಿನ ಒಂದು ಗಂಟೆಗೂ ಹೆಚ್ಚು ಸಮಯ ಕೊಡುತ್ತಾರಂತೆ. ಅದರಲ್ಲಿ ಸರಾಸರಿ 45 ನಿಮಿಷಗಳು ಒಟಿಟಿಗಾಗಿ ಮೀಸಲಿರುತ್ತದೆ. ಇನ್ನುಳಿದಂತೆ ಹಲವರಿಗೆ ಗೇಮಿಂಗ್ ಬಗ್ಗೆ ಇನ್ನಿಲ್ಲದ ಆಸಕ್ತಿ ಇರುತ್ತದೆ.
ಆದರೆ, ಕ್ರೀಡೆ ಒಳ್ಳೆಯದು ಎಂಬ ಭಾವನೆ ಇದ್ದಂತೆ ಮೊಬೈಲ್ ಗೇಮ್‌ಗಳ ಬಗ್ಗೆ ಉತ್ತಮ ಅಭಿಪ್ರಾಯವನ್ನು ಕೇಳಿರುವ ಉದಾಹರಣೆ ಕಡಿಮೆ ಎನ್ನಬಹುದು. ಇದಕ್ಕೆ ಕಾರಣ, ಮೊಬೈಲ್ ಗೇಮ್‌ಗಳಲ್ಲಿ ಎರಡು ವಿಧವಿದೆ. ಒಂದನ್ನು ಗೇಮ್
ಆಫ್ ಚಾನ್ಸ್, ಇನ್ನೊಂದನ್ನು ಗೇಮ್ ಆಫ್ ಸ್ಕಿಲ್ ಎನ್ನುತ್ತಾರೆ ಎಂಬುದು ಹಲವರಿಗೆ ತಿಳಿದಿಲ್ಲ.
ಅದನ್ನು ತಿಳಿಸುವ ಪ್ರಯತ್ನವಿದು. ಮೊಬೈಲ್ ಗೇಮ್‌ಗಳನ್ನು ಜೂಜಾಟ ಎಂದು ಹೇಳುವವರನ್ನು ಕಂಡಿರುತ್ತೇವೆ. ಅದು ನಿಜ ಎಂದು ಅನಿಸಿರಲೂ ಬಹುದು. ಒಂದೇ ಮಾತಿನಲ್ಲಿ ಇದನ್ನು ಇಲ್ಲ ಎನ್ನಲಾಗದು. ಜೂಜಾಟದಲ್ಲಿ ಯಾವ ಅನುಭವ, ಕೌಶಲ, ಬುದ್ಧಿಶಕ್ತಿ ಬೇಕಿರುವುದಿಲ್ಲ. ಅಲ್ಲಿ ಬೇಕಿರುವುದು ಲಕ್ ಮಾತ್ರ. ಲಕ್ ಇದ್ದೋರು ಲಕ್ಷಾಧಿಪತಿ ಆಗ್ತಾರೆ ಎಂಬುದು ನಿಜವೂ ಕೂಡ.
ಆದರೆ, ಈ ರೀತಿಯ ಆಟಗಳನ್ನು ನಾವು ಆನ್ ಲೈನ್ ಗೇಮ್‌ಗಳ ವಿಭಾಗಕ್ಕೆ ಸೇರಿಸಬಹುದೇ ಎಂಬದನ್ನೂ ಒಮ್ಮೆ ಪ್ರಶ್ನಿಸಿಕೊಳ್ಳುವ ಅವಶ್ಯವಿದೆ.
ಭಾರತದಲ್ಲಿ ರಾಜ್ಯಗಳೇ ಜೂಜಾಟ ಮತ್ತು ಗ್ಯಾಂಬ್ಲಿಂಗ್ ಗೇಮ್‌ಗಳನ್ನು ನಿಯಂತ್ರಣ ಮಾಡುತ್ತವೆ. ಪಬ್ಲಿಕ್ ಗ್ಯಾಂಬ್ಲಿಂಗ್
ಕಾಯಿದೆ-1876ರ ಪ್ರಕಾರ ನಿಯಂತ್ರಣ ಕ್ರಮಗಳನ್ನು ಜರುಗಿಸಲಾಗುತ್ತದೆ. ಆದರೆ, ಇದರಲ್ಲಿ ಆನ್‌ಲೈನ್ ಗೇಮಿಂಗ್ ಮತ್ತು
ಇ-ಸ್ಪೋರ್ಟ್ಸ್ ಬಗ್ಯ ಉಲ್ಲೇಖ ಇರುವ ಕಾರಣ ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಣೆ ಮಾಡುತ್ತವೆ.
ಆದ್ದರಿಂದಲೇ ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ಕಾನೂನುಗಳಿವೆ. ಬಹಳಷ್ಟು ರಾಜ್ಯಗಳಲ್ಲಿ ಎಲ್ಲ ಆನ್‌ಲೈನ್
ಆಟಗಳನ್ನು ಅವುಗಳನ್ನು ಗೇಮ್ ಆಫ್ ಚಾನ್ಸ್ ಅಥವಾ ಗೇಮ್ ಆಫ್ ಸ್ಕಿಲ್ ಎಂದು ಪರಿಗಣಿಸದೇ ನಿಷೇಧ ಹೇರಿವೆ. ಇದನ್ನು ಹಲವರು ಸ್ವಾಗತಿಸಿದ್ದರೂ, ಇನ್ನು ಹಲವು ರಾಜ್ಯಗಳಲ್ಲಿ ಇವುಗಳಿಗೆ ಮಾನ್ಯತೆ ನೀಡಿರುವ ಕಾರಣದಿಂದಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಒಂದೇ ರೀತಿಯ ನಿಯಮ ರೂಪಿಸಬೇಕು ಎಂಬ ಆಗ್ರಹಗಳೂ ಆಗಾಗ ಕೇಳಿ ಬರುತ್ತಲೇ ಇರುತ್ತವೆ.
2020ರ ಹಣಕಾಸು ವರ್ಷದಲ್ಲಿ, ಆನ್‌ಲೈನ್ ಗೇಮ್ ಆಡುವವರಲ್ಲಿ ಇ-ಸ್ಪೋರ್ಟ್ಸ್ ಒಂದೇ ಒಟ್ಟು ಶೇಕಡ 4 ಬಳಕೆದಾರರನ್ನು ಹೊಂದಿದ್ದು, ಆನ್‌ಲೈನ್ ಗೇಮ್‌ಗಳಿಂದ ಬಂದ ಆದಾಯದ ಶೇಕಡ 9ರಷ್ಟು ಎಂದು ವರದಿಯೊಂದು ಹೇಳುತ್ತದೆ. ಇತ್ತೀಚೆಗೆ ಭಾರತದಲ್ಲಿ ಇ-ಸ್ಪೋರ್ಟ್ಸ್ ಗೆ ಎಲ್ಲಿಲ್ಲದ ಮನ್ನಣೆ ಮತ್ತು ಜನಪ್ರಿಯತೆ ದೊರೆಯುತ್ತಿದೆ ಎಂದು ಅಂಕಿಅಂಶಗಳು ಹೇಳುತ್ತವೆ. ಲೆಕ್ಕಾಚಾರಗಳ ಪ್ರಕಾರ 17ರಿಂದ 20 ಕೋಟಿ ಜನರು ಇ-ಸ್ಪೋರ್ಟ್ಸ್ ಆಟವಾಡುತ್ತಾರೆ ಎಂದರೆಮ ಅದರ ಸಾಮರ್ಥ್ಯ ಹಾಗೂ
ವ್ಯಾಪ್ತಿಯನ್ನು ನಾವೊಮ್ಮೆ ಅಂದಾಜಿಸಬಹುದು.
ಸುಮಾರು 400ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಆನ್‌ಲೈನ್ ಗೇಮಿಂಗ್‌ನಲ್ಲಿ ಕಾರ್ಯನಿರತವಾಗಿದ್ದು, ಇದು 885 ಮಿಲಿಯನ್
ಡಾಲರ್‌ನಷ್ಟು ಹೂಡಿಕೆ ಕಂಡಿದೆ. ಇದೆಲ್ಲದರ ಅಂತಿಮ ಫಲಿತಾಂಶ ಎಂಬಂತೆ ಬರೋಬ್ಬರಿ 40000 ಉದ್ಯೋಗ ಅವಕಾಶಗಳು
ಸೃಷ್ಟಿಯಾಗಲಿದ್ದು, ಭಾರತದ ಆರ್ಥಿಕತೆಗೆ ಬಹುದೊಡ್ಡ ಕೊಡುಗೆ ನೀಡಲಿವೆ. ಆನ್‌ಲೈನ್ ಗೇಮಿಂಗ್ ಎಂಬುದನ್ನು ಒಂದು
ಕ್ಷೇತ್ರವಾಗಿ ಪರಿಗಣಿಸಿ ನೋಡಿದರೆ, ಇದನ್ನು ಇಂದಿನ ಹಾಗೂ ಭವಿಷ್ಯದ ಉದ್ಯಮ ಎಂದರೆ ತಪ್ಪಾಗದು. ಅದರಲ್ಲೂ ತಂತ್ರಜ್ಞಾನದ ತವರು ಎಂದೇ ಖ್ಯಾತವಾದ ಕರ್ನಾಟಕದಲ್ಲಿ ಉದ್ಯೋಗ ಅವಕಾಶಗಳ ಸೃಷ್ಟಿಯ ದೊಡ್ಡ ಪರ್ವ ಕಾಲ
ಸಮೀಪದಲ್ಲೇ ಇದೆ. ಇದೇ ವೇಳೆ, ಕರ್ನಾಟಕ ಸರಕಾರವೂ ಕೂಡ ನಿಯಮಗಳನ್ನು ರಚಿಸುತ್ತಿದ್ದು, ಗೇಮ್ ಆಫ್ ಸ್ಕಿಲ್ ಮತ್ತು ಗೇಮ್ ಆಫ್ ಚಾನ್ಸ್ನ ಅಂತರವನ್ನು ಅರಿತು, ಸರಿಯಾಗಿ ನಿಯಮಗಳ ನಿರೂಪಣೆ ಮಾಡುವುದರಿಂದ ರಾಜ್ಯಕ್ಕೆ ಆಗುವ
ಲಾಭವೇ ಹೆಚ್ಚು.
ಆನ್‌ಲೈನ್ ಗೇಮ್‌ಗಳ ಬಗ್ಗೆ ಇರುವ ಭಿನ್ನ ಅಭಿಪ್ರಾಯಗಳನ್ನು ದೂರಮಾಡಲು ನ್ಯಾಯಾಂಗವೂ ಕೂಡ ಕೆಲ ಪ್ರಯತ್ನಗಳನ್ನು
ನಡೆಸಿದ್ದು ಸ್ವಾಗತಾರ್ಹ. ಆದ್ದರಿಂದ ಸರಕಾರ ಆನ್ ಲೈನ್ ಸ್ಕಿಲ್ ಗೇಮಿಂಗ್ ಕ್ಷೇತ್ರದ ಬಗ್ಗೆ ಸರಿಯಾದ ನಿಯಮಗಳನ್ನು ರೂಪಿಸುವ ಅಗತ್ಯ ಈಗ ಹೆಚ್ಚಿದೆ.
ಬೆಟ್ಟಿಂಗ್ ಗೇಮ್‌ಗಳು ಮ್ತತು ಸ್ಕಿಲ್ ಗೇಮ್‌ಗಳು ಬೇರೇಬೇರಯದ್ದೇ ಆಗಿದ್ದು, ಇದರ ಬಗ್ಗೆ ಪೂರ್ಣ ಅರಿವು ಹೊಂದಿ, ನಿಯಮ ರೂಪಿಸಿ, ಕರ್ನಾಟಕದ ಅಭಿವೃದ್ಧಿಯಲ್ಲಿ ಹೊಸದೊಂದು ಕೊಡುಗೆ ನೀಡಲಿರುವ ಕ್ಷೇತ್ರಕ್ಕೆ ಆದ್ಯತೆ ನೀಡಬೇಕಿದೆ.