Saturday, 21st September 2024

ದಾಖಲೆ ಸಿಂಗಲ್ ಡೇ ಸೇಲ್

ಚೈನಾದ ದೈತ್ಯ ಇ-ಕಾಮರ್ಸ್ ಸಂಸ್ಥೆೆಯಾದ ಅಲಿಬಾಬ, ಪ್ರತಿವರ್ಷ ನವೆಂಬರ್ 11ರಂದು ಸಿಂಗಲ್ ಡೇ ಸೇಲ್ ಎಂಬ ಮಾರಾಟೋತ್ಸವವನ್ನು ನಡೆಸುತ್ತಿದೆ. ಈ ವರ್ಷ ಆ ದಿನದ ಮೊದಲ ಒಂಬತ್ತು ಗಂಟೆಗಳಲ್ಲಿ 158.31 ಬಿಲಿಯ ಯೆನ್ (ಸುಮಾರು ರು.160000 ಕೋಟಿ) ವ್ಯವಹಾರ ಅಲಿಬಾಬದ ಈ ವ್ಯವಹಾರವು ಒಂದು ದಾಖಲೆ ಎನಿಸಿದೆ. ಅಮೆರಿಕಾದ ಬ್ಲಾಾಕ್‌ಪ್ರೈಡೇ ಅಥವಾ ಸೈಬರ್ ಮಂಡೇ ಹೆಸರಿನಲ್ಲಿ ನಡೆಯುವ ಒಂದು ದಿನದ ಮಾರಾಟಕ್ಕೆ ಹೋಲಿಸಿದರೆ, ಅಲಿಬಾಬ ನಡೆಸಿದ ವ್ಯವಹಾರವು ಹಲವು ಪಟ್ಟು ಹೆಚ್ಚು. ಈ ವರ್ಷದ ಸಿಂಗಲ್ ಮಾರಾಟೋತ್ಸವವನ್ನು ಉದ್ಘಾಾಟಿಸುವ ಸಮಯದಲ್ಲಿ, ಅಮೆರಿಕಾದ ಪಾಪ್‌ಸ್ಟಾಾರ್ ಟೈಲರ್ ಸ್ವಿಿಫ್‌ಟ್‌‌ನ್ನು ಅಲಿಬಾಬ ಕರೆಸಿತ್ತು.