Friday, 22nd November 2024

ರಿಸೈಕಲ್ ಫಾರ್ ಲೈಫ್

* ಶಶಿ

ತ್ಯಾಜ್ಯವಾಗಿ ರೂಪುಗೊಂಡು, ಪರಿಸರ ಮಾಲಿನ್ಯಕ್ಕೆೆ ತನ್ನದೇ ಕೊಡುಗೆ ನೀಡುತ್ತಿರುವ ಪ್ಲಾಸ್ಟಿಕ್ ಬಾಟಲಿಗಳನ್ನು ಮರುಬಳಕೆ ಮಾಡಲು ಸಾಧ್ಯವೆ? ಆ ಮೂಲಕ, ಅಷ್ಟರ ಮಟ್ಟಿಗೆ ಪರಿಸರ ತಡೆಯಲು ಸಾಧ್ಯವೆ? ಪ್ಲಾಸ್ಟಿಕ್ ಬಾಟಲಿಗಳು ಫ್ಯಾಾಷನ್ ಫ್ಯಾಾಬ್ರಿಕ್ ಆಗುವ ಅಪರೂಪದ ಚಟುವಟಿಕೆಯ ವಿವರ ಇಲ್ಲಿದೆ, ಓದಿ.

ಇಂದಿನ ಯುಗಮಾನದಲ್ಲಿ ಪ್ಲಾಾಸ್ಟಿಿಕ್ ಬಾಟಲಿಗಳ ಸಂಗ್ರಹ, ಬೇಕೋ ಬೇಡವೋ, ಹೆಚ್ಚುತ್ತಲೋ ಇದೆ. ಕ್ರಶ್ ಮಾಡಿ ಎಸೆಯ ಬೇಕಾದ ಪ್ಲಾಾಸ್ಟಿಿಕ್ ಬಾಟಲಿಗಳು, ಎಲ್ಲೆೆಂದರಲ್ಲಿ ರಾಶಿ ರಾಶಿ ಬೀಳುತ್ತಿವೆ. ಇಂತಹ ತ್ಯಾಜ್ಯವನ್ನು ಉಪಯೋಗ ಮಾಡಿಕೊಳ್ಳುವ ಪರಿಪಾಠ ಆರಂಭವಾದರೆ, ಅದರಿಂದಾಗಿ ತುಸು ಮಾಲಿನ್ಯ ಕಡಿಮೆಯಾದೀತೆ? ತ್ಯಾಾಜ್ಯ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿ ವಿವಿಧ ಕಡೆ ವಿವಿಧ ಉಪಯೊಗ ಮಾಡುವ ಚಟುವಟಿಕೆ ಅಲ್ಲಲ್ಲಿ ಕಂಡುಬಂದಿದೆ. ಇಂತಹ ಬಾಟಲಿಗಳನ್ನು ಆರಮಭಿಸಿ, ದೊಡ್ಡಪ್ರಮಾಣದಲ್ಲಿ ಅದನ್ನು ಮರುಬಳಕೆ ಮಾಡುವ ಪ್ರಯತ್ನಕ್ಕೆೆ ಈಗ ರಿಲಯನ್‌ಸ್‌ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಕೈ ಹಾಕಿದೆ.

ಆ ಸಂಸ್ಥೆೆಯ ಸಿಎಸ್.ಆರ್. ಅಥವಾ ಸಾರ್ವಜನಿಕರ ಸೇವೆಯ ಅಂಗವಾಗಿ ರಿಲಯನ್‌ಸ್‌ ಫೌಂಡೇಶನ್, ತನ್ನ ಸ್ವಯಂ ಸೇವಕರ ಮೂಲಕ ಪರಿಸರ ಸಂರಕ್ಷಣೆ ಮತ್ತು ಪ್ಲಾಾಸ್ಟಿಿಕ್ ಮರುಬಳಕೆಯನ್ನು ಪ್ರೋೋತ್ಸಾಾಹಿಸುವ ಸಲುವಾಗಿ ಅಭಿಯಾನವೊಂದನ್ನು ಕಳೆದ ವಾರ ಆರಂಭಿಸಿದೆ. ಮರು ಬಳಕೆಗೆ ಯೋಗ್ಯ ಎನಿಸುವ 78 ತ್ಯಾಾಜ್ಯ ಪ್ಲಾಾಸ್ಟಿಿಕ್ ಬಾಟಲಿಗಳನ್ನು ಈ ಸ್ವಯಂ ಸೇವಕರ ಪಡೆ ಸಂಗ್ರಹಿಸಿದೆ. ರಿಲಯನ್‌ಸ್‌ ನ ಸಾವಿರಾರು ಉದ್ಯೋೋಗಿಗಳು, ಅವರ ಕುಟುಂಬ ಸದಸ್ಯರು ಮತ್ತು ಜಿಯೋ ಮತ್ತು ರಿಲಯನ್‌ಸ್‌ ರಿಟೇಲ್ ನಂತಹ ಎಲ್ಲಾ ಸದಸ್ಯರು ಈ ಅಭಿಯಾನದಲ್ಲಿ ಪಾಲ್ಗೊೊಂಡು ಭಾರತದ ಹಲವಾರು ಸ್ಥಳಗಳಲ್ಲಿ ಏಕ ಕಾಲದಲ್ಲಿ ದೊಡ್ಡ ಪ್ರಮಾಣದಲ್ಲಿ ತ್ಯಾಾಜ್ಯ ಪ್ಲಾಾಸ್ಟಿಿಕ್ ಬಾಟಲಿಗಳನ್ನು ಸಂಗ್ರಹಿಸುವ ಮೂಲಕ ಹೊಸದೊಂದು ಪರಿಸರಸ್ನೇಹಿ ಚಟುವಟಿಕೆಗೆ ಸಾಕ್ಷಿಿಯಾಗಿದ್ದಾಾರೆ.

ಅಕ್ಟೋೋಬರ್‌ನಲ್ಲಿ ರಿಲಯನ್‌ಸ್‌, ಭಾರತದಾದ್ಯಂತ ವ್ಯಾಾಪಕ ಅಭಿಯಾನವೊಂದನ್ನು ನಡೆಸವ ಸಲುವಾಗಿ ಫಾರ್ ಲೈಫ್’ ಹೆಸರಿನಲ್ಲಿ ಪರಿಸರಸ್ನೇಹಿ ಯೋಜನೆಯನ್ನು ರೂಪಿಸಲಾಯಿತು. ಈ ಅಭಿಯಾನದ ಸಲುವಾಗಿ ನೌಕರರು ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಕಾಣಿಸುವ ತ್ಯಾಾಜ್ಯ ಪ್ಲಾಾಸ್ಟಿಿಕ್ ಬಾಟಲಿಗಳನ್ನು ಸಂಗ್ರಹಿಸಿ ಮರುಬಳಕೆಗಾಗಿ ತಮ್ಮ ಕಚೇರಿಗಳಿಗೆ ತರಲು ಪ್ರೋೋತ್ಸಾಾಹಿಸಲಾಯಿತು. ಸ್ವಚ್ಛ ಮತ್ತು ಹಸಿರು ಪರಿಸರಕ್ಕಾಾಗಿ ಪ್ಲಾಾಸ್ಟಿಿಕ್ ಮರುಬಳಕೆಯನ್ನು ಮಾಡುವಂತೆ ಸಂದೇಶವನ್ನು ಸಾರುವ ಸಲುವಾಗಿ ದೇಶದಲ್ಲಿ ಕಾರ್ಯನಿರ್ವಹಿಸುತ್ತಿಿರುವ ಆರ್‌ಐಎಲ್ ಮತ್ತು ಸಂಬಂಧಿತ ಎಲ್ಲಾ ಸಂಸ್ಥೆೆಗಳು ಈ ಕಾರ್ಯದಲ್ಲಿ ತೊಡಗಿಕೊಂಡಿದ್ದವು.

ಈ ದಾಖಲೆ ಅಭಿಯಾನ ಕುರಿತು ಮಾತನಾಡಿದ ರಿಲಯನ್‌ಸ್‌ ಸ್ಥಾಾಪಕ ಮತ್ತು ಅಧ್ಯಕ್ಷೆ ನೀತಾ ಎಂ ಅಂಬಾನಿ, ನಮ್ಮ ಪರಿಸರವನ್ನು ನೋಡಿಕೊಳ್ಳುವುದು ಅತ್ಯಂತ ಮಹತ್ವದ್ದಾಗಿದೆ. ಈ ಹಿನ್ನಲೆಯಲ್ಲಿ ರಿಲಯನ್‌ಸ್‌ ಫೌಂಡೇಶನ್ ಸ್ವಚ್ಛಾಾತಾ ಹಿ ಸೇವಾ ಸಂದೇಶವನ್ನು ಉತ್ತೇಜಿಸಲು, ಅಭ್ಯಾಾಸ ಮಾಡಲು ಮತ್ತು ಹರಡಲು ನಿರಂತರ ಪ್ರಯತ್ನವನ್ನು ಮಾಡುತ್ತಿಿದೆ. ಪ್ಲಾಾಸ್ಟಿಿಕ್ ಮರುಬಳಕೆಯ ಮಹತ್ವದ ಬಗ್ಗೆೆ ಜಾಗೃತಿ ಮೂಡಿಸುವ ಸಲುವಾಗಿ ನಾವು ರಿಸೈಕಲ್ ಫಾರ್ ಲೈಫ್ ಅಭಿಯಾನವನ್ನು ಪ್ರಾಾರಂಭಿಸಿದ್ದೇವೆ. ಭಾರತದಲ್ಲಿರುವ ಸಾವಿರಾರು ರಿಲಯನ್‌ಸ್‌ ಉದ್ಯೋೋಗಿಗಳು ಮತ್ತು ಅವರ ಕುಟುಂಬಗಳು ಈ ಅಭಿಯಾನದಲ್ಲಿ ಸ್ವಯಂಪ್ರೇರಿತರಾಗಿ ಪ್ಲಾಾಸ್ಟಿಿಕ್ ತ್ಯಾಾಜ್ಯವನ್ನು ಸಂಗ್ರಹಿಸಲು ಸಹಾಯ ಮಾಡಿದರು, ಅವರೆಲ್ಲರ ಶ್ರಮದಿಂದ ನಮ್ಮ ಅಭಿಯಾನವು ದಾಖಲೆಗೆ ಸಾಕ್ಷಿಯಾಗಿದೆ’ ಎಂದಿದ್ದಾರೆ.

ರಿಸೈಕಲ್ ಫಾರ್ ಲೈಫ್ ಅಭಿಯಾನದ ಭಾಗವಾಗಿ ಸಂಗ್ರಹಿಸಲಾದ ಸುಮಾರು 78 ಟನ್ ತ್ಯಾಾಜ್ಯ ಪ್ಲಾಾಸ್ಟಿಿಕ್ ಬಾಟಲಿಗಳನ್ನು ಪರಿಸರ ಸ್ನೇಹಿ ಉತ್ಪಾಾದನಾ ಪ್ರಕ್ರಿಿಯೆಗಳ ಮೂಲಕ ಮರುಬಳಕೆ ಮಾಡಲು ಯೋಜನೆಯನ್ನು ಆರ್‌ಐಎಲ್ ರೂಪಿಸಿದೆ. ಇದಕ್ಕೆೆಂದೇ ಸ್ಥಾಾಪಿಸಲಾಗಿರುವ ಆಧುನಿಕ ಮರುಬಳಕೆ ಘಟಕಗಳು ಎರಡು ದಶಕಗಳಿಂದ ತನ್ನ ಸುಸ್ಥಿಿರ ವ್ಯವಹಾರ ಅಭ್ಯಾಾಸದ ಭಾಗವಾಗಿ ಗ್ರಾಾಹಕರು ಬಳಸಿದ ಪೆಟ್ (ಪ್ಲಾಾಸ್ಟಿಿಕ್) ಬಾಟಲಿಗಳನ್ನು ಮರುಬಳಕೆ ಮಾಡುತ್ತಿಿವೆ. ತಿರಸ್ಕರಿಸಿದ ಪ್ಲಾಾಸ್ಟಿಿಕ್ ಬಾಟಲಿಗಳನ್ನು ರೆಕ್ರೋೋನ್ (್ಕಛ್ಚ್ಟಿಿಟ್ಞಎ) ಗ್ರೀನ್ ಗೋಲ್ಡ್ ಆಗಿ ಪರಿವರ್ತಿಸಲಾಗುತ್ತಿಿದೆ. ಪರಿಸರ ಸ್ನೇಹಿ ಜವಳಿ ಉತ್ಪನ್ನಗಳ ಸರಪಳಿಯಿಂದ ಬಳಕೆಗಾಗಿ ಪಾಲಿಯೆಸ್ಟರ್ ಫೈಬರ್‌ಗಳನ್ನು ತಯಾರಿಸಲಾಗುತ್ತಿಿದೆ. ಉತ್ತಮ ತಂತ್ರಜ್ಞಾಾನದಲ್ಲಿ ಸಂಸ್ಕರಿಸಿದ ಇಂತಹ ಪಾಲೆಯೆಸ್‌ಟ್‌ ಫೈಬರ್‌ಗಳಿಂದ ಗುಣಮಟ್ಟದ ಆರ್ ಎಲಾನ್ (್ಕಉ್ಝ್ಞ) ಫ್ಯಾಾಬ್ರಿಿಕ್ 2.0 ಆಧಾರಿತ ಫ್ಯಾಾಷನ್ ಉಡುಪು ತಯಾರಿಸಲು ಸಾಧ್ಯ. ನೀರು ಕುಡಿದು ಎಸೆದ ಪ್ಲಾಾಸ್ಟಿಿಕ್ ಬಾಟಲಿಗಳು, ಫ್ಯಾಾಬ್ರಿಿಕ್ ರೂಪ ತಳೆದು, ಅಂದಚಂದದ ಮಾರ್ಪಾಡುವ ಈ ಕ್ರಿಿಯೆ ವಿಸ್ಮಯ ಹುಟ್ಟಿಿಸುವಂತಹದ್ದು. ತ್ಯಾಾಜ್ಯವು ಸೌಂದರ್ಯಕ್ಕೆೆ ಇಂಬುಕೊಡುವ ಫ್ಯಾಾಬ್ರಿಿಕ್ ಆಗಿ ಪರಿವರ್ತನೆ ಆಗುವ ಸಮಯದಲ್ಲೇ, ಪರಿಸರಕ್ಕೂ ಅದರಿಂದ ಕೊಡುಗೆ ನೀಡಿದಂತಾಗುವುದು ವಿಶೇಚ.